ಸುರತ್ಕಲ್: ಬೈಕ್ ಡಿಕ್ಕಿ- ಪಾದಚಾರಿಗೆ ಗಂಭೀರ ಗಾಯ
ಸುರತ್ಕಲ್, ಎ.28: ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಗಾಯಗೊಂಡವರನ್ನು ಅಶೆಲ್ ಬಸ್ ನ ಮ್ಯಾನೇಜರ್ ಕೃಷ್ಣಾಪುರ ನಿವಾಸಿ ಮುಹಮ್ಮದ್ ಶರೀಫ್ ಎಂದು ತಿಳಿದು ಬಂದಿದೆ.
ಹೊಸಬೆಟ್ಟು ಪಂಪ್ ಬಳಿ ಬಸ್ ನ ಕಲೆಕ್ಷನ್ ನ ಹಣ ಪಡೆಯಲು ರಸ್ತೆ ದಾಟುತ್ತಿದ್ದ ವೇಳೆ ಏಕಾಏಕಿ ಬೈಕ್ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಶರೀಫ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸುರತ್ಕಲ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Next Story





