ಕೇಶಪುರ ಹತ್ಯಾಕಾಂಡ ಪ್ರಕರಣ ಎಲ್ಲ 17 ಆರೋಪಿಗಳ ಬಿಡುಗಡೆ

ಮಿಡ್ನಾಪೂರ(ಪ.ಬಂ.),ಎ.28: 16 ವರ್ಷಗಳ ಹಿಂದಿನ ಕೇಶಪುರ ಹತ್ಯಾಕಾಂಡ ಪ್ರಕರಣದ ಎಲ್ಲ 17 ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದಾಗಿ ಗುರುವಾರ ಖುಲಾಸೆಗೊಳಿಸಿರುವ ಇಲ್ಲಿಯ ಏಳನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅವರನ್ನು ಬೇಷರತ್ ಬಿಡುಗಡೆಗೊಳಿಸಿದೆ.
2000,ಜನವರಿ 25ರಂದು ಚಾಕ್‌ಗೋಬಿಂದಪುರ ಮತ್ತು ಮಧುಪುರ ಗ್ರಾಮಗಳಲ್ಲಿ ನಡೆದಿದ್ದ ಸಶಸ್ತ್ರ ಘರ್ಷಣೆಯಲ್ಲಿ ಐವರು ಸಿಪಿಎಂ ಮತ್ತು ಓರ್ವ ತೃಣಮೂಲ ಕಾರ್ಯಕರ್ತ ಕೊಲ್ಲಲ್ಪಟ್ಟಿದ್ದರು.
ಸಿಪಿಎಂ ಸಲ್ಲಿಸಿದ್ದ ಪೊಲೀಸ್ ದೂರಿನಲ್ಲಿ 99 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಪೊಲೀಸರು 18 ಜನರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು,ಈ ಪೈಕಿ ಓರ್ವ ಆರೋಪಿ ವಿಚಾರಣೆ ಸಂದರ್ಭ ಮೃತಪಟ್ಟಿದ್ದ.
Next Story





