ಮ್ಯಾನ್ಮಾರ್: 'ರೊಹಿಂಗ್ಯ' ವಿರೋಧಿಸಿ ಪ್ರತಿಭಟನೆ
ಯಾಂಗನ್, ಎ. 28: ಮ್ಯಾನ್ಮಾರ್‌ನ ದೇಶವಿಲ್ಲದ ಮುಸ್ಲಿಮ್ ಸಮುದಾಯವನ್ನು ಉಲ್ಲೇಖಿಸಲು ಅಮೆರಿಕ ''ರೊಹಿಂಗ್ಯ'' ಎಂಬ ಪದ ಬಳಕೆ ಮಾಡುವುದನ್ನು ವಿರೋಧಿಸಿ ನೂರಾರು ಜನರು ಇಲ್ಲಿನ ಅಮೆರಿಕ ರಾಯಭಾರ ಕಚೇರಿಯ ಹೊರಗೆ ಗುರುವಾರ ಪ್ರತಿಭಟನೆ ನಡೆಸಿದರು.
ಕಳೆದ ವಾರ ರಾಖೈನ್ ರಾಜ್ಯದ ಕರಾವಳಿಯಲ್ಲಿ ಮುಳುಗಿದ 21 ರೊಹಿಂಗ್ಯ ಮುಸ್ಲಿಮರಿಗೆ ಅಮೆರಿಕ ರಾಯಭಾರ ಕಚೇರಿ ಸಂತಾಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಬೌದ್ಧ ಬಿಕ್ಕುಗಳು ಪಾಲ್ಗೊಂಡಿದ್ದರು.
Next Story





