Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬರದ ನಾಡಲ್ಲೂ ಹಸಿರು ಹೊನ್ನು ಬೆಳೆದ ...

ಬರದ ನಾಡಲ್ಲೂ ಹಸಿರು ಹೊನ್ನು ಬೆಳೆದ ಪ್ರೇಮ್‌ಸಿಂಗ್

ಉಮ್ಮರ್ ರಶೀದ್ಉಮ್ಮರ್ ರಶೀದ್28 April 2016 11:40 PM IST
share
ಬರದ ನಾಡಲ್ಲೂ ಹಸಿರು ಹೊನ್ನು ಬೆಳೆದ  ಪ್ರೇಮ್‌ಸಿಂಗ್

ಬಿಸಿಲಬೇಗೆಗೆ ಬಿರುಕುಬಿಟ್ಟಿರುವ, ಉತ್ತರಪ್ರದೇಶದ ಬುಂದೇಲ್‌ಖಂಡ ಪ್ರಾಂತದ ಒಣಪ್ರಾಂತದಲ್ಲಿ ಸಾವಿರಾರು ಹತಾಶ ರೈತರು ಕಳೆದ ಕೆಲವು ದಶಕಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಅಥವಾ ಬೇರೆ ದಾರಿಕಾಣದೆ ನಗರ, ಪಟ್ಟಣಗಳಿಗೆ ಗುಳೆಹೋಗಿದ್ದಾರೆ. ಆದರೆ ಪ್ರಗತಿಪರ ಕೃಷಿಕ ಪ್ರೇಮ್‌ಸಿಂಗ್‌ನ ಹೊಲ ಮಾತ್ರ ಇದಕ್ಕೆ ಹೊರತಾಗಿದೆ.
 ಹಸಿರಿನಿಂದ ನಳನಳಿಸುತ್ತಿರುವ ಈ ತೋಟದ ಕೆರೆಗಳಲ್ಲಿ ಈ ಕಡು ಬೇಸಿಗೆಯಲ್ಲೂ ಯಥೇಚ್ಛ ನೀರಿದೆ. ಹಣ್ಣಿನ ಮರಗಳಿಂದ ತುಂಬಿರುವ ಈ ತೋಟದಲ್ಲಿ 32 ಬಿಗಾ ಜಮೀನಿನಲ್ಲಿ ಪ್ರೇಮ್‌ಸಿಂಗ್ ವೈವಿಧ್ಯಮಯ ಸಾವಯವ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಉತ್ತಮವಾಗಿ ಪೋಷಿಸಿದ ಮಣ್ಣು ಹಾಗೂ ಪ್ರಾಕೃತಿಕ ರಸಗೊಬ್ಬರಗಳಿಂದ ಶೋಭಿಸುತ್ತಿರುವ ಈ ಜಮೀನು ಪ್ರೇಮ್‌ಸಿಂಗ್ ಅವರಿಗೆ ನಿರಂತರವಾಗಿ ಸ್ಥಿರ ಆದಾಯವನ್ನು ತಂದುಕೊಡುತ್ತಿವೆ. ಪ್ರೇಮ್‌ಸಿಂಗ್ ಈ 32 ಬಿಗಾ ಜಮೀನನ್ನು ತನ್ನ ಮೂವರು ಸಹೋದರರೊಂದಿಗೆ ಹಂಚಿಕೊಂಡಿದ್ದಾರೆ.ತನ್ನ ಜಮೀನು ಒಂದು ರೀತಿಯಲ್ಲಿ ಗ್ರಾಮೀಣ ಮ್ಯೂಸಿಯಂ ಆಗಿದೆಯೆಂದು ಸಿಂಗ್ ಹೆಮ್ಮೆಯಿಂದ ಹೇಳುತ್ತಾರೆ.
   ಬಂಡಾ ಜಿಲ್ಲೆಯ ಬಾಡೋಖಾರ್ ಖುರ್ದ್ ಗ್ರಾಮದ ನಿವಾಸಿಯಾದ ಈ ರೈತ ಆಧುನಿಕ ಯುಗದಲ್ಲಿಯೂ ಸಾಂಪ್ರದಾಯಿಕ ಹಾಗೂ ಸುಸ್ಥಿರ ಕೃಷಿ ಪದ್ಧತಿಯನ್ನು ಅನುಸರಿಸಿ ಹೇರಳ ಲಾಭ ಪಡೆಯಲು ಸಾಧ್ಯವಿದೆಯೆಂದು ಹೇಳುತ್ತಾರೆ. ಸಾವಯವ ಕೃಷಿಯು ರೈತರ ಕುಟುಂಬ, ಪರಿಸರ ಸಮತೋಲನ ಹಾಗೂ ಆಹಾರ ಭದ್ರತೆಯನ್ನು ಖಾತರಿಪಡಿಸುವುದೆಂದು ಅವರು ಅಭಿಪ್ರಾಯಿಸುತ್ತಾರೆ. ತಾನು ಅನುಸರಿಸುತ್ತಿರುವ ಪ್ರಯೋಗಶೀಲ ಕೃಷಿ ಪದ್ಧತಿಯನ್ನು ಪ್ರೇಮ್‌ಸಿಂಗ್, ‘ಆವರ್ತನಶೀಲ್ ಖೇತಿ’ ಎಂದು ಕರೆಯುತ್ತಾರೆ. ಸಾಮಾನ್ಯರ ಗ್ರಹಿಕೆಗೆ ತಕ್ಕಂತೆ ಹೇಳುವುದಾದರೆ ಕಾಲಕ್ಕೆ ಅನುಗುಣವಾದ ಕೃಷಿ ಎಂದು ಹೇಳಬಹುದಾಗಿದೆ.
ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದು, ಸಾವಯವ ಕೃಷಿ, ಪಶುಸಂಗೋಪನೆ, ಆಹಾರ ಸಂಸ್ಕರಣೆ, ಗಿಡ ನೆಡುವಿಕೆ, ಮಣ್ಣಿನ ಫಲವತ್ತತೆ ಹಾಗೂ ಧಾನ್ಯದ ಗುಣಮಟ್ಟದ ಅಭಿವೃದ್ಧಿಗಾಗಿ ಸಂಶೋಧನೆ ಅವರು ಅನುಸರಿಸುತ್ತಿರುವ ಈ ವಿಶಿಷ್ಟ ಕೃಷಿ ಪದ್ಧತಿಯ ಪ್ರಮುಖ ಅಂಶಗಳಾಗಿವೆ.ಮಾರುಕಟ್ಟೆ ಮೇಲೆ ಕೃಷಿಕರ ಅವಲಂಬನೆಯನ್ನು ಕಡಿಮೆಗೊಳಿಸಿ ಅವರ ಜೀವನಮಟ್ಟವನ್ನು ಸುಧಾರಿಸುವುದೇ ಅದರ ಮುಖ್ಯ ಉದ್ದೇಶವಾಗಿದೆ.

 ಆವರ್ತನಶೀಲ ಕೃಷಿಯಲ್ಲಿ ರೈತನು ತನ್ನ ಜಮೀನನ್ನು ವಿಭಾಗಗಳಾಗಿ ಭಾಗ ಮಾಡಿ ಅವುಗಳನ್ನು ಬಳಸಿಕೊಳ್ಳುತ್ತಾನೆ. ಈ ಪೈಕಿ ಮೂರನೆ ಒಂದರಷ್ಟು ಜಮೀನನ್ನು ಹಣ್ಣುಗಳು ಹಾಗೂ ಬೆಳೆಗಳನ್ನು ಬೆಳೆಯಲು ಬಳಸುತ್ತಾನೆ. ಇನ್ನೊಂದು ಭಾಗದಲ್ಲಿ ಮರಗಳನ್ನು ಹಾಗೂ ಉಳಿದ ಭಾಗವನ್ನು ಜಾನು ವಾರುಗಳ ಸಾಕಣೆೆಗೆ ಬಳಸಿಕೊಳ್ಳುತ್ತಾನೆ. ಕಳೆದ ಒಂದು ದಶಕದಿಂದ ಸಿಂಗ್ ಈ ಬಹುಸ್ತರದ ಕೃಷಿ ತಂತ್ರಜ್ಞಾನವನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ಪ್ರಗತಿಶೀಲ ಕೃಷಿಕರೆಂದೇ ಹೆಸರುಪಡೆದಿರುವ ಪ್ರೇಮ್‌ಸಿಂಗ್, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಾರದು. ಬದಲಿಗೆ ಅದನ್ನು ಸಂಸ್ಕರಿಸಿ ಮಾರಾಟ ಮಾಡಬೇಕೆಂದು ಕಿವಿಮಾತು ಹೇಳುತ್ತಾರೆ. ಉದಾಹರಣೆಗೆ, ರೈತನೊಬ್ಬ ಹಾಲನ್ನು ಮಾರಾಟ ಮಾಡದೆ, ಅದರಿಂದ ಖೀರನ್ನು ತಯಾರಿಸಿ ಮಾರಬೇಕು ಎನ್ನುತ್ತಾರವರು. ‘‘ಈ ತಂತ್ರಜ್ಞಾನವು ರೈತನನ್ನು ಅಡುಗೆಮನೆಯೊಂದಿಗೆ ಸಂಪರ್ಕಿಸುತ್ತದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಉತ್ಪನ್ನಗಳನ್ನು ನೀಡಲು ಇದರಿಂದ ಸಾಧ್ಯವಾಗುತ್ತದೆ’’ ಎಂದು ಹೇಳುತ್ತಾರೆ. ನೆಲ್ಲಿಕಾಯಿಯ ಉಪ್ಪಿನಕಾಯಿ, ದನದ ತುಪ್ಪ, ಸಾಸಿವೆ ಎಣ್ಣೆ, ಸಾವಯವ ಅಕ್ಕಿ ಹಾಗೂ ಹಿಟ್ಟು (ಗೋಧಿ,ಬಾರ್ಲಿ ಹಾಗೂ ಹೆಸರುಬೇಳೆ) ಅವರು ತನ್ನ ತೋಟದಲ್ಲಿ ಉತ್ಪಾದಿಸುವ ಇತರ ಕೆಲವು ಉತ್ಪನ್ನಗಳಾಗಿವೆ. ಆದರೆ ಸಣ್ಣ ರೈತರಿಗೂ ಹೀಗೆ ಮಾಡಲು ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಸಿಂಗ್ ಹೌದು ಎಂದೇ ಉತ್ತರಿಸುತ್ತಾರೆ.
1964ರಲ್ಲಿ ಕೃಷಿಕ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಸಿಂಗ್ ಅಲಹಾಬಾದ್ ವಿವಿಯಲ್ಲಿ ತತ್ವಶಾಸ್ತ್ರದ ಅಧ್ಯಯನ ಮಾಡಿದ್ದರು. ಆದಾಗ್ಯೂ ಅವರು ಕೊನೆಗೆ ಅಯ್ದುಕೊಂಡದ್ದು ತನ್ನ ಪೂರ್ವಜರ ಪಾರಂಪರಿಕ ವೃತ್ತಿಯಾದ ಕೃಷಿಯನ್ನು. 1995ರಲ್ಲಿ ಅವರು ತನ್ನ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರು. ಯಥೇಚ್ಛವಾಗಿ ಕೀಟನಾಶಕ, ರಸಗೊಬ್ಬರಗಳನ್ನು ಬಳಸಿ, ಅಧಿಕ ಇಳುವರಿಯನ್ನು ಪಡೆಯುವ ಹಸಿರು ಕ್ರಾಂತಿಯು ವಾಸ್ತವದಲ್ಲಿ ಪರಿಸರಕ್ಕೆ ಹಾಗೂ ರೈತರಿಗೆ ಮಾರಕವೆಂಬುದನ್ನು ಅವರು ಅರಿತಿದ್ದರು.
  ಕೃಷಿಯ ಸಾಂಪ್ರದಾಯಿಕ ಸ್ವರೂಪವನ್ನು ನಾಶಪಡಿಸುವಲ್ಲಿ ಹಾಗೂ ಸುಸ್ಥಿರವಲ್ಲದ ಕೃಷಿಪದ್ಧತಿಗಳ ಅವಲಂಬನೆಗೆ ರೈತನನ್ನು ತಳ್ಳುವಲ್ಲಿ ಹಸಿರುಕ್ರಾಂತಿ ಹಾಗೂ ಸರಕಾರದ ಕೆಲವು ಕೃಷಿ ನೀತಿಗಳು ಪ್ರಮುಖ ಪಾತ್ರ ವಹಿಸಿರುವುದಾಗಿ ಅವರು ಹೇಳುತ್ತಾರೆ. ಸತತ ಮೂರು ವರ್ಷಗಳಿಂದ ಬರಗಾಲ, ಅಕಾಲಿಕ ಮಳೆ ಹಾಗೂ ಆಲಿಕಲ್ಲುಮಳೆಯು ಬುಂದೇಲ್‌ಖಂಡದ ರೈತನ ನೈತಿಕತೆಯನ್ನೇ ನಾಶಪಡಿಸಿದೆಯೆಂದವರು ವಿಷಾದಿಸುತ್ತಾರೆ.
ಕೆಲವು ತಜ್ಞರ ಹೊರಗಿನ ತಿಳುವಳಿಕೆಗಳನ್ನು ರೈತರ ಮೇಲೆ ಹೇರಲಾಗುತ್ತದೆ. 1980ರವರೆಗೂ, ಬುಂದೇಲ್‌ಖಂಡದ ರೈತರು ಒಂದೇ ಒಂದು ಚೀಲ ಯೂರಿಯಾವನ್ನು ಖರೀದಿಸುತ್ತಿರಲಿಲ್ಲ. ಆದರೆ ಸರಕಾರದ ನೀತಿಗಳಿಂದಾಗಿ ರೈತರು ಸಾಂಪ್ರದಾಯಿಕ ಹಾಗೂ ಸುಸ್ಥಿರ ಪದ್ಧತಿಗಳನ್ನು ಬಲವಂತವಾಗಿ ಕೈಬಿಡಬೇಕಾಗಿ ಬಂದಿದೆ. ಇದರಿಂದಾಗಿ ಅವರು ಸಾಲದ ಬಲೆಗೆ ಸಿಲುಕಿದ್ದಾರೆಂದು ಸಿಂಗ್ ಹೇಳುತ್ತಾರೆ.
‘‘ಪ್ರತಿ ಸಲ ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಆತನಿಗೆ ಸಾಲದಿಂದ ಬಾಧಿತನಾಗಿದ್ದನೆಂದು ಸರಕಾರ ಸಮಜಾಯಿಷಿ ನೀಡುತ್ತಿದೆ. ರೈತ ಸಾಲ ಮಾಡುವುದಕ್ಕೆ ಮುಖ್ಯ ಕಾರಣವಾದರೂ ಏನು?. ಸರಕಾರದ ಯೋಜನೆಗಳನ್ನು ಅನಿವಾರ್ಯವಾಗಿ ಅನುಸರಿಸಬೇಕಾಗಿ ಬಂದುದರಿಂದ ಅವರು ಸಾವಿಗೆ ಶರಣಾಗುತ್ತಿದ್ದಾರೆ. ಇದು ನಿಜವಾದ ಅನ್ಯಾಯ’’ ಎಂದವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
  ಬುಂದೇಲ್‌ಖಂಡಕ್ಕೆ ಬರಗಾಲವು ಹೊಸದೇನಲ್ಲ. ಹೊಸ ದಾಖಲೆಗಳ ಪ್ರಕಾರ, ಕಳೆದ ಶತಮಾನದಲ್ಲಿ ಈ ಪ್ರಾಂತವು 17 ಪ್ರಮುಖ ಬರಗಾಲಗಳಿಗೆ ಸಾಕ್ಷಿಯಾದವು. ಅವುಗಳಲ್ಲಿ 10 ಮಳೆಯ ಕೊರತೆಯಿಂದಾದವು. ಆದರೆ ಸಾಂಪ್ರದಾಯಿಕ ಜಲಮರುಪೂರಣ ಪದ್ಧತಿಗಳು, ಕೊಳಗಳು ಹಾಗೂ ಜನಸಾಮಾನ್ಯರ ಸಹಜ ಕೊಯ್ಲು ತಂತ್ರಜ್ಞಾನದ ಅನುಪಸ್ಥಿತಿಯು ಪೂರ್ವಜರ ದಶಕಗಳ ಕೆಲಸವನ್ನು ಅಮಾನ್ಯಗೊಳಿಸಿದೆಯೆಂದು ಸಿಂಗ್ ಹೇಳುತ್ತಾರೆ.
 ‘‘ಆಗ ಬೆಳೆಯುತ್ತಿದ್ದ ಬೆಳೆಗಳಿಗೆ ಹೆಚ್ಚಿನ ನೀರಿನ ಅಗತ್ಯವಿರಲಿಲ್ಲ. ಹಸಿರುಕ್ರಾಂತಿಯಿಂದಾಗಿ, ಹೊಸತಳಿಯ ಬೀಜಗಳ ನೀರಿನ ದಾಹವನ್ನು ತಣಿಸಲು ಅಂತರ್ಜಲವನ್ನು ವ್ಯಾಪಕವಾಗಿ ಶೋಷಿಸಲಾಯಿತು. ಸ್ಥಳೀಯ ಧಾನ್ಯಬೀಜಗಳು ಬರಗಾಲವನ್ನು ಎದುರಿಸುವ ಸಾಮರ್ಥ್ಯ ಪಡೆದಿವೆ. ಆದರೆ ಸರಕಾರವು ಪರಿಚಯಿಸಿದ ಬೀಜಗಳಿಗೆ, ಬೆಳವಣಿಗೆ ಹೊಂದಲು ಅಧಿಕ ನೀರು ಹಾಗೂ ಯೂರಿಯಾದ ಅಗತ್ಯವಿದೆ. ಟ್ರಾಕ್ಟರ್‌ಗಳ ಬಳಕೆಯು ರೈತನ ಕೃಷಿ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಿದವು ಎಂದು ಸಿಂಗ್ ಹೇಳುತ್ತಾರೆ.
ಇವೆಲ್ಲದರ ನಡುವೆಯೇ ಆಡಳಿತ ವರ್ಗವು ರೈತರ ಬಗ್ಗೆ ಪೂರ್ವಾಗ್ರಹಪೀಡಿತವಾಗಿದೆ. ಕೃಷಿ ನೀತಿಗಳನ್ನು ರೂಪಿಸುವಾಗ ರೈತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ. ಕೈಗಾರಿಕಾ ಹಾಗೂ ಸೇವಾವಲಯದ ಅತಿರೇಕದ ಕ್ರಮಗಳಿಂದಾಗಿ ಸರಕಾರವು ಅದರ ಫಲವನ್ನು ಉಣ್ಣುತ್ತಿವೆಯೆಂದು ಸಿಂಗ್ ಹೇಳುತ್ತಾರೆ.

share
ಉಮ್ಮರ್ ರಶೀದ್
ಉಮ್ಮರ್ ರಶೀದ್
Next Story
X