ಕೊರಿಯದಲ್ಲಿ ಯುದ್ಧ ಸ್ಫೋಟಗೊಳ್ಳಲು ಬಿಡೆ: ಚೀನಾ
ಬೀಜಿಂಗ್, ಎ. 28: ಕೊರಿಯ ಪರ್ಯಾಯ ದ್ವೀಪದಲ್ಲಿ ಅರಾಜಕತೆ ಮತ್ತು ಯುದ್ಧ ಸ್ಫೋಟಗೊಳ್ಳಲು ಚೀನಾ ಬಿಡುವುದಿಲ್ಲ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಏಶ್ಯದ ವಿದೇಶ ಸಚಿವರ ಗುಂಪೊಂದಕ್ಕೆ ಗುರುವಾರ ತಿಳಿಸಿದರು. ''ಪರ್ಯಾಯ ದ್ವೀಪದ ಹತ್ತಿರದ ನೆರೆಕರೆಯಾಗಿರುವ ನಾವು ಅಲ್ಲಿ ಯುದ್ಧ ಮತ್ತು ಅರಾಜಕತೆ ಉಂಟಾಗಲು ಬಿಡುವುದಿಲ್ಲ. ಇದರಿಂದ ಯಾರಿಗೂ ಪ್ರಯೋಜನವಿಲ್ಲ'' ಎಂದು 'ಏಶ್ಯದಲ್ಲಿ ಸಂವಹನ ಮತ್ತು ವಿಶ್ವಾಸ ನಿರ್ಮಾಣ ಕ್ರಮಗಳ ಕುರಿತ ಸಮ್ಮೇಳನ'ದಲ್ಲಿ ಮಾತನಾಡಿದ ಚೀನಾ ಅಧ್ಯಕ್ಷರು ಹೇಳಿದರು. ಚೀನ ಉತ್ತರ ಕೊರಿಯದ ಏಕೈಕ ಪ್ರಮುಖ ಮಿತ್ರ ದೇಶವಾಗಿದೆ. ಆದರೆ, ಉತ್ತರ ಕೊರಿಯ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಚೀನಾ ಬೆಂಬಲಿಸುವುದಿಲ್ಲ. ಕಳೆದ ತಿಂಗಳು ಉತ್ತರ ಕೊರಿಯದ ವಿರುದ್ಧ ವಿಶ್ವಸಂಸ್ಥೆ ವಿಧಿಸಿದ ದಿಗ್ಬಂಧನಗಳಿಗೆ ಚೀನಾ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು.
Next Story





