ಇಂದಿನಿಂದ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರಮಟ್ಟದ ಸಮ್ಮೇಳನ
ಮಂಗಳೂರು, ಎ.28: ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ವತಿಯಿಂದ ‘ಬ್ಯುಸಿನೆಸ್ ಎಜುಕೇಶನ್ ಆ್ಯಂಡ್ ಎಂಪ್ಲೊಯೆಬಿಲಿಟಿ: ಚಾಲೆಂಜಸ್ ಆ್ಯಂಡ್ ನ್ಯೂ ಡೈರೆಕ್ಷನ್ಸ್’ ಎಂಬ ವಿಷಯದ ಕುರಿತಾದ 2 ದಿನಗಳ ರಾಷ್ಟ್ರಮಟ್ಟದ ಸಮ್ಮೇಳನ ಹಾಗೂ ‘ಮ್ಯಾಗ್ನಮ್-2016’ ಎಂಬ ಉತ್ಸವ ಎ.29, 30ರಂದು ನಡೆಯಲಿದೆ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೈ.ಮುನಿರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿ ಕುಲಪತಿ ಪ್ರೊ.ಕೆ.ಬೈರಪ್ಪ ಅಧ್ಯಕ್ಷತೆ ವಹಿಸುವವರು ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಘಟಕರಾದ ಜಯ್‌ಪ್ರಶಾಂತ್, ಶುಶೀತ್, ಪೂಜಾ ಹೆಬ್ಬಾರ್, ಪ್ರಶಾಂತ್ ಉಪಸ್ಥಿತರಿದ್ದರು.
Next Story





