Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಐಆರ್‌ಎನ್‌ಎಸ್‌ಎಸ್-1ಜಿ ಉಪಗ್ರಹ ಯಶಸ್ವಿ...

ಐಆರ್‌ಎನ್‌ಎಸ್‌ಎಸ್-1ಜಿ ಉಪಗ್ರಹ ಯಶಸ್ವಿ ಉಡಾವಣೆ

ವಾರ್ತಾಭಾರತಿವಾರ್ತಾಭಾರತಿ28 April 2016 11:58 PM IST
share
ಐಆರ್‌ಎನ್‌ಎಸ್‌ಎಸ್-1ಜಿ ಉಪಗ್ರಹ ಯಶಸ್ವಿ ಉಡಾವಣೆ

ಇಸ್ರೋದಿಂದ ಮಹತ್ವದ ಸಾಧನೆ

ಭಾರತದ ಸ್ವಂತ ಜಿಪಿಎಸ್ ಕನಸು ನನಸು

ಶ್ರೀಹರಿಕೋಟಾ,ಎ.28: ಭಾರತವು ಗುರುವಾರ ತನ್ನ ಏಳನೆ ಮತ್ತು ಅಂತಿಮ ಪಥದರ್ಶಕ ಉಪಗ್ರಹ ಐಆರ್‌ಎನ್‌ಎಸ್‌ಎಸ್-1ಜಿ ಅನ್ನು ಇಲ್ಲಿಯ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ತನ್ನ ಹೆಮ್ಮೆಯ ಪಿಎಸ್‌ಎಲ್‌ವಿ ರಾಕೆಟ್‌ನ ಮೂಲಕ ಯಶಸ್ವಿಯಾಗಿ ಬಾಹ್ಯಾಕಾಶ ಕಕ್ಷೆಗೆ ಸೇರಿಸಿತು. ಇದರೊಂದಿಗೆ ಭಾರತವು ತನ್ನದೇ ಆದ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ(ಐಆರ್‌ಎನ್‌ಎಸ್‌ಎಸ್)ಯನ್ನು ಪೂರ್ಣಗೊಳಿಸಲು ಎಲ್ಲ ಏಳೂ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ಸು ಸಾಧಿಸಿದೆ.ಇದರೊಂದಿಗೆ ಸ್ವಂತ ಪಥ ನಿರ್ದೇಶಕ ವ್ಯವಸ್ಥೆಗಳನ್ನು ಹೊಂದಿರುವ ರಾಷ್ಟ್ರಗಳ ಗುಂಪಿಗೆ ಭಾರತವು ಸೇರಲು ಇನ್ನೊಂದೇ ಹೆಜ್ಜೆ ಬಾಕಿಯುಳಿದಿದೆ.

ಮಧ್ಯಾಹ್ನ ಸರಿಯಾಗಿ 12:50ಕ್ಕೆ ಕಿತ್ತಳೆ ಬಣ್ಣದ ಜ್ವಾಲೆಗಳನ್ನುಗುಳುತ್ತ ನಭಕ್ಕೇರಿದ 44.4 ಮೀ.ಎತ್ತರ ಮತ್ತು 320 ಟನ್ ತೂಕದ ಪಿಎಸ್‌ಎಲ್‌ವಿ ಉಡಾವಣಾ ಕೇಂದ್ರದಲ್ಲಿ ನೆರೆದಿದ್ದ ಇಸ್ರೋ ಅಧಿಕಾರಿಗಳ ಹರ್ಷದ ನಡುವೆಯೇ ಪ್ರತೀ ಸೆಕೆಂಡ್‌ಗೂ ವೇಗವನ್ನು ವರ್ಧಿಸಿಕೊಳ್ಳುತ್ತ ತನ್ನ ಗಮ್ಯದತ್ತ ಸಾಗಿದರೆ ಇತ್ತ ನಿಯಂತ್ರಣ ಕೇಂದ್ರದಲ್ಲಿ ತಮ್ಮ ಕಂಪ್ಯೂಟರ್ ಪರದೆಗಳಿಗೆ ಅಂಟಿಕೊಂಡಿದ್ದ ವಿಜ್ಞಾನಿಗಳು ಅದು ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದ ಪಾರಾಗುವುದನ್ನೇ ಕಾಯುತ್ತಿದ್ದರು. 20 ನಿಮಿಷಗಳಾಗುತ್ತಿದಂತೆ ರಾಕೆಟ್‌ನಿಂದ ಉಪಗ್ರಹ ಬೇರ್ಪಟ್ಟಿತು. ತಕ್ಷಣ ಉಪಗ್ರಹದ ಸೌರ ರೆಕ್ಕೆಗಳನ್ನು ಕಾರ್ಯಾರಂಭಗೊಳಿಸಿದ್ದು, ಕರ್ನಾಟಕದ ಹಾಸನದಲ್ಲಿರುವ ನಿಯಂತ್ರಣ ಕೇಂದ್ರ(ಎಂಸಿಎಫ್)ವು ಉಪಗ್ರಹವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.

ಉಪಗ್ರಹದಲ್ಲಿರುವ ಮೋಟಾರ್‌ಗಳನ್ನು ಉರಿಸುವ ಮೂಲಕ ಎಂಸಿಎಫ್ ಅದನ್ನು ಇನ್ನೆರಡು ದಿನಗಳಲ್ಲಿ ನಿಗದಿತ ಕಕ್ಷೆಗೆ ಸೇರಿಸಲಿದೆ.

‘ಭಾರತೀಯ ಜಿಪಿಎಸ್’ ಎಂದು ಕರೆಯಬಹುದಾದ ಭಾರತೀಯ ಪ್ರಾದೇಶಿಕ ಪಥ ದರ್ಶಕ ಉಪಗ್ರಹ ವ್ಯವಸ್ಥೆಯು ಭೂಮಿ,ವಾಯು ಮತ್ತು ಸಮುದ್ರ ಪಥ ನಿರ್ದೇಶನ,ವಾಹನಗಳ ಗುರುತಿಸುವಿಕೆ,ಚಾರಣಿಗರು ಮತ್ತು ಪ್ರವಾಸಿಗಳಿಗೆ ಮಾರ್ಗದರ್ಶನ,ವಿಪತ್ತು ನಿರ್ವಹಣೆ,ಮೊಬೈಲ್ ಫೋನ್‌ಗಳೊಂದಿಗೆ ಸಮನ್ವಯತೆ, ನಕಾಶೆ ರೂಪಿಸುವಿಕೆ,ಹವಾಮಾನ ಮುನ್ಸೂಚನೆ,ನಾಗರಿಕ ಮತು ್ತಮಿಲಿಟರಿ ಚಟುವಟಿಕೆ ಇತ್ಯಾದಿಗಳಿಗೆ ನೆರವಾಗಲಿದೆ.

ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಹರ್ಷ ವ್ಯಕ್ತಪಡಿಸಿದರು.

12 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಉಪಗ್ರಹವು ನೇವಿಗೇಷನ್ ಮತ್ತು ರೇಂಜಿಂಗ್ ಹೀಗೆ ಎರಡು ಪೇ ಲೋಡ್‌ಗಳನ್ನು ಹೊಂದಿದೆ.
ಯುದ್ಧ ಅಥವಾ ಯುದ್ಧಸದೃಶ ಸಂದರ್ಭಗಳಲ್ಲಿ ಇಂತಹುದೇ ವ್ಯವಸ್ಥೆಗಳನ್ನು ಹೊಂದಿರುವ ರಾಷ್ಟ್ರಗಳು ನಿಖರವಾದ ಸ್ಥಿತಿಗತಿ ಮಾಹಿತಿಯನ್ನು ನೀಡಲು ನಿರಾಕರಿಸಬಹುದಾದ್ದರಿಂದ ಭಾರತದ ಸ್ವಂತ ಪಥ ನಿರ್ದೇಶಕ ವ್ಯವಸ್ಥೆ ನಿರ್ಣಾಯಕವಾಗಿದೆ.

ಐಆರ್‌ಎನ್‌ಎಸ್‌ಎಸ್ ದೇಶಾದ್ಯಂತ ಯಾವುದೇ ವಸ್ತುವಿನ ನಿಖರ ಇರುವಿಕೆ ಮಾಹಿತಿಯನ್ನು ತನ್ನ ಬಳಕೆದಾರರಿಗೆ ನೀಡಲಿದೆ. ಈಗಾಗಲೇ ತಮ್ಮ ನಿಗದಿತ ಕಕ್ಷೆಯನ್ನು ಸೇರಿರುವ ಸರಣಿಯ ಆರು ಉಪಗ್ರಹಗಳು 20 ಮೀ.ವ್ಯತ್ಯಾಸದಷ್ಟು ಮಾಹಿತಿಯನ್ನು ನಿಖರವಾಗಿ ನೀಡುತ್ತಿದ್ದು, ಏಳನೆ ಮತ್ತು ಅಂತಿಮ ಉಪಗ್ರಹ ತನ್ನ ನಿಗದಿತ ಕಕ್ಷೆಯನ್ನು ಸೇರಿಕೊಂಡು ವ್ಯವಸ್ಥೆಯು ಪೂರ್ಣಗೊಂಡ ನಂತರ ಈ ವ್ಯತ್ಯಾಸ ಕೇವಲ 10 ಮೀ.ಗಿಳಿಯಲಿದೆ.

ಉಪಗ್ರಹ ಉಡಾವಣೆಗಳು
 ಐಆರ್‌ಎನ್‌ಎಸ್‌ಎಸ್-1ಎ - ಜುಲೈ 2013, ಐಆರ್‌ಎನ್‌ಎಸ್‌ಎಸ್-1ಬಿ - ಎಪ್ರಿಲ್,2014 ಐಆರ್‌ಎನ್‌ಎಸ್‌ಎಸ್-1ಸಿ - ಅಕ್ಟೋಬರ್,2014 ಐಆರ್‌ಎನ್‌ಎಸ್‌ಎಸ್-1ಡಿ - ಮಾರ್ಚ್ 2015 ಐಆರ್‌ಎನ್‌ಎಸ್‌ಎಸ್-1ಇ - ಜನವರಿ,2016 ಐಆರ್‌ಎನ್‌ಎಸ್‌ಎಸ್-1ಎಫ್ - ಮಾರ್ಚ್,2016 ಐಆರ್‌ಎನ್‌ಎಸ್‌ಎಸ್-1ಜಿ - ಎಪ್ರಿಲ್ 28,2016

***
ಮಧ್ಯಾಹ್ನ ಸರಿಯಾಗಿ 12:50ಕ್ಕೆ ಕಿತ್ತಳೆ ಬಣ್ಣದ ಜ್ವಾಲೆಗಳನ್ನುಗುಳುತ್ತ ನಭಕ್ಕೇರಿದ 44.4 ಮೀ.ಎತ್ತರ ಮತ್ತು 320 ಟನ್ ತೂಕದ ಪಿಎಸ್‌ಎಲ್‌ವಿ.

 20 ನಿಮಿಷಗಳ ನಂತರ 488.9 ಕಿ.ಮೀ.ಎತ್ತರದಲ್ಲಿ ರಾಕೆಟ್‌ನಿಂದ ಬೇರ್ಪಟ್ಟ 1425 ಕೆ.ಜಿ.ತೂಕದ ಐಆರ್‌ಎನ್‌ಎಸ್‌ಎಸ್-1ಜಿ.

ಅಮೆರಿಕದ ಜಿಪಿಎಸ್, ರಷ್ಯದ ಗ್ಲೋನಾಸ್, ಯುರೋಪಿನ ಗೆಲಿಲಿಯೋ ಮತ್ತು ಚೀನಾದ ಬೀಡೊಕ್ಕೆ ಸರಿಸಮನಾಗಿ ಕಾರ್ಯ ನಿರ್ವಹಿಸಲಿರುವ ಸ್ವದೇಶಿ ಐಆರ್‌ಎನ್‌ಎಸ್‌ಎಸ್.

ಸರಣಿಯಲ್ಲಿನ ಏಳು ಉಪಗ್ರಹಗಳ ತಲಾ ವೆಚ್ಚ 150 ಕೋ.ರೂ., ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಆವೃತ್ತಿಯ ವೆಚ್ಚ 130 ಕೋ.ರೂ., ಯೋಜನೆಯ ಒಟ್ಟು ವೆಚ್ಚ 1,420 ಕೋ.ರೂ. ವಿಶ್ವದ ಇತರ ವ್ಯವಸ್ಥೆಗಳು 20ಕ್ಕೂ ಅಧಿಕ ಉಪಗ್ರಹಗಳನ್ನು ಹೊಂದಿದ್ದರೆ ಭಾರತದ ಐಆರ್‌ಎನ್‌ಎಸ್‌ಎಸ್ ಕೇವಲ ಏಳು ಉಪಗ್ರಹಗಳನ್ನು ಹೊಂದುವ ಮೂಲಕ ವೈಶಿಷ್ಟವನ್ನು ಮೆರೆದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X