ದಿಗ್ವಿಜಯ್ ಸಿಂಗ್‌ಗೆ ಪುತ್ರಿ ವಿಯೋಗ

ಹೊಸದಿಲ್ಲಿ, ಎ.29: ಕಾಂಗ್ರೆಸ್ ಧುರಿಣ ದಿಗ್ವಿಜಯ್ ಸಿಂಗ್ ಪುತ್ರಿ ಕಾರ್ನಿಕಾ(37) ಅಸೌಖ್ಯದಿಂದಾಗಿ ನಿಧನರಾದರು.
ದಿಗ್ವಿಜಯ್ ಸಿಂಗ್‌ರ ಮೊದಲ ಪತ್ನಿ ಮಗಳು ಕಾರ್ನಿಕ್ ಕ್ಯಾನ್ಸರ್ ಕಾಯಿಲೆಗೆ ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಕೊನೆಯುಸಿರೆಳೆದರು. ದಿಗ್ವಿಜಯ್ ಸಿಂಗ್‌ರ ನಾಲ್ವರು ಪುತ್ರಿಯರ ಪೈಕಿ ಈಕೆ ಕೊನೆಯವರು.
ಕಾರ್ನಿಕ್ ಅವರು ಪತಿ ಮತ್ತು ಏಳರ ಹರೆಯದ ಪುತ್ರನನ್ನು ಅಗಲಿದ್ದಾರೆ.
ಕಾರ್ನಿಕ್ ತಾಯಿ ಆಶಾ ಕ್ಯಾನ್ಸರ್‌ನಿಂದಾಗಿ 2013ರಲ್ಲಿ ಮೃತಪಟ್ಟಿದ್ದರು.
Next Story





