10,000 ಸಿರಿಯ ನಿರಾಶ್ರಿತರಿಗೆ ಆಶ್ರಯ ನೀಡುವ ಭರವಸೆಗೆ ಬದ್ಧ : ಒಬಾಮ

ವಾಶಿಂಗ್ಟನ್, ಎ. 29: ಸೆಪ್ಟಂಬರ್ 30ರ ಒಳಗೆ 10,000 ಸಿರಿಯ ನಿರಾಶ್ರಿತರಿಗೆ ಆಶ್ರಯ ನೀಡುವ ತನ್ನ ಗುರಿಯನ್ನು ಈಡೇರಿಸಲು ಅಮೆರಿಕ ಸಮರ್ಥವಾಗಿದೆ ಎಂದು ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಕಳೆದ ವರ್ಷ ತಾನು ಹಾಕಿಕೊಂಡ ಗುರಿ ಸವಾಲಿನದ್ದಾಗಿದೆ. ವಿಶೇಷವಾಗಿ ನಿರಾಶ್ರಿತರನ್ನು ಸಂಪೂರ್ಣವಾಗಿ ತಪಾಸಣೆ ನಡೆಸಲಾಗುವುದು ಎಂಬುದನ್ನು ಅಮೆರಿಕದ ಜನತೆಗೆ ಮನವರಿಕೆ ಮಾಡಬೇಕಾಗಿದೆ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಒಬಾಮ ತಿಳಿಸಿದರು.
ಪುನರ್ವಸತಿ ಕಾರ್ಯಕ್ಕೆ ವೇಗ ನೀಡುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಅವರು ನುಡಿದರು.
Next Story





