ಪಂಪ್ ದುರಸ್ತಿ ವೇಳೆ ಶಾಕ್ ತಗಲಿ ಯುವಕ ಮೃತ್ಯು
ಸುಳ್ಯ, ಎ.29: ಪಂಪ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೀಡಾಗಿ ಯುವಕನೋರ್ವ ಮೃತಪಟ್ಟ ಘಟನೆ ಬೊಳುಬೈಲು ಬಳಿ ನಡೆದಿದೆ.
ಜಾಲ್ಸೂರು ಗ್ರಾಮದ ಪಿಲಿಕ್ಕೋಡಿ ವೆಂಕಪ್ಪನಾಯ್ಕರ ಪುತ್ರ ಹರೀಶ್ (30) ಮೃತಪಟ್ಟ ದುರ್ದೈವಿ. ಹರೀಶ್ ತನ್ನ ಮನೆಯ ಪಂಪ್‌ನ್ನು ದುರಸ್ತಿ ಮಾಡುತ್ತಿದ್ದ ಮಾಡುತ್ತಿದ್ದಾಗ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟರು.
ಹರೀಶ್ ಪೈಚಾರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ ಹಾಗೂ ಪುಟ್ಟ ಮಗುವನ್ನು ಅಗಲಿದ್ದಾರೆ.
Next Story





