ಮನಾಲ್ ಕೋಚಿಂಗ್ ಆ್ಯಂಡ್ ಸ್ಟಡಿ ಸೆಂಟರ್ ಉದ್ಘಾಟನೆ
ಮಂಗಳೂರು, ಎ. 29: ನಗರದ ಪಾಂಡೇಶ್ವರದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಪ್ರೊ.ಡಾ.ಕಾಪು ಮುಹಮ್ಮದ್ ನೇತೃತ್ವದ ಮನಾಲ್ ಕೋಚಿಂಗ್ ಆ್ಯಂಡ್ ಸ್ಟಡಿ ಸೆಂಟರ್ ಹಾಗೂ ಮನಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ನ ಉದ್ಘಾಟನೆ ಇಂದು ಸಂಜೆ ನೆರವೇರಿತು.
ಈ ಸಂದರ್ಭ ಪಾಂಡೇಶ್ವರ ವಾರ್ಡ್ನ ಕಾರ್ಪೊರೇಟರ್ ದಿವಾಕರ್, ಮಂಗಳೂರು ಮಿಸ್ಬಾ ಮಹಿಳಾ ಕಾಲೇಜಿನ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ, ಲೆಕ್ಕಪರಿಶೋಧಕ ವಿವಿಯನ್ ಪಿಂಟೊ, ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಮುಸ್ತಫಾ ಬಸ್ತಿಕೋಡಿ ಉಪಸ್ಥಿತರಿದ್ದು, ನೂತನ ಶೈಕ್ಷಣಿಕ ಸಂಸ್ಥೆಗೆ ಶುಭ ಹಾರೈಸಿದರು. ಕಟ್ಟಡದ ಅಧ್ಯಕ್ಷ ಅಬೂಸ್ವಾಲಿಹ್ ಉಪಸ್ಥಿತರಿದ್ದರು.
ಸ್ವಾಗತಿಸಿ ಮಾತನಾಡಿದ ಸಂಸ್ಥೆಯ ಜನರಲ್ ಮೆನೇಜರ್ ಕಾಪು ಹನೀಫ್, ಸರಾಸರಿ ಮತ್ತು ಅದಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಈ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿ ನೀಡಿ ಉತ್ತಮ ತರಬೇತಿ ನೀಡಲಾಗುವುದು. ಅಲ್ಲದೆ, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ದಾಖಲಾತಿ ಪಡೆಯ ಬಯಸಿದ ಯಾವ ಹೆತ್ತರನ್ನು ವಾಪಸ್ ಕಳುಹಿಸುವುದಿಲ್ಲ ಎಂದರು.
ಮಂಜುನಾಥ ನಿಸರ್ಗ ಕಾರ್ಯಕ್ರಮ ನಿರೂಪಿಸಿದರು.