ಅಪ್ರಾಪ್ತೆಯ ಮದುವೆಗೆ ಯತ್ನಿಸಿದ ತಂದೆ ತಾಯಿಯರನ್ನು 5ಗಂಟೆ ಠಾಣೆಯಲ್ಲಿ ಕುಳ್ಳಿರಿಸಿದ ಪೊಲೀಸರು!

ಕಾನ್ಪುರ, ಎಪ್ರಿಲ್ 30: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಗ್ವಾಲ್‌ಟೋಲಿ ಠಾಣೆ ವ್ಯಾಪ್ತಿಯಲ್ಲಿ ಓರ್ವ ಅಪ್ರಾಪ್ತ ಬಾಲಕಿಯ ವಿವಾಹ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿರುವುದಾಗಿ ವರದಿಯಾಗಿದೆ. ಪ್ರಕರಣದ ಮಾಹಿತಿ ಸಿಕ್ಕಿದೊಡನೆ ಪೊಲೀಸರು ಹುಡುಗಿಯ ತಂದೆ-ತಾಯಿ ಮತ್ತು ಸಂಬಂಧಿಕರನ್ನು ಐದು ಗಂಟೆ ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಿದ್ದಾರೆ. ನಂತರ ಮಹಿಳಾ ಪರಿಷತ್ ಹೇಳಿದ ಮೇಲೆ ಅವರನ್ನು ಎಚ್ಚರಿಕೆ ಕೊಟ್ಟು ಬಿಟ್ಟುಬಿಟ್ಟರೆಂದು ವರದಿಗಳು ತಿಳಿಸಿವೆ.
ವರದಿಯಾಗಿರು ಪ್ರಕಾರ ಕಾನ್ಪುರ ಜಿಲ್ಲೆಯ ಪಾರಮಟ್ ಪ್ರದೇಶದ ನಿವಾಸಿ ಹುಡುಗಿಯ ವಯಸ್ಸು ಹದಿನೆಂಟು ವರ್ಷ 9 ತಿಂಗಳಾಗಿತ್ತು. ಪೊಲೀಸರು ಸರ್ಟಿಫಿಕೇಟ್ ನೋಡಿದಗ ಅವಳ ವಯಸ್ಸು 13ವರ್ಷ 9 ತಿಂಗಳಾಗಿತ್ತು. ತಂದೆ ಹುಡುಗಿ 1998ರಲ್ಲಿ ಜನಿಸಿದ್ದಾಳೆ. ಅವಳಿಗೆ ಹದಿನೆಂಟು ವರ್ಷಭರ್ತಿ ಯಾಗಿದೆ ಎಂದು ಹೇಳುತ್ತಿದ್ದಾರೆ. ಹುಡುಗಿ ತಾಯಿ ಅಂಜನಾ ತನ್ನ ಆರೋಗ್ಯ ಆಗಾಗ ಕೆಡುತ್ತಿದೆ ಆದ್ದರಿಂದ ಮಗಳ ವಿವಾಹಕ್ಕೆ ಮುಂದಾದೆವು ಎಂದು ಹೇಳುತ್ತಿದ್ದಾರೆ. ಅವರ ಅನಾರೋಗ್ಯದಿಂದಾಗಿ ಏನಾದರೂ ಸಂಭವಿಸಿದರೆ ಮಗಳನ್ನು ನೋಡಿಕೊಳ್ಳುವವರು ಯಾರು ಎಂದು ಅಂಜನಾರ ಚಿಂತೆಯಾಗಿದೆ.
ಹುಡುಗಿಯ ವಿವಾಹವನ್ನು ಗೋವಿಂದ ನಗರ ನಿವಾಸಿ ಸಂಜು(25) ಎಂಬವನೊಂದಿಗೆ ನಿಶ್ಚಯಿಸಿ ರಾಮ್ ಗೆಸ್ಟ್‌ಹೌಸ್‌ನಲ್ಲಿ ಮದುವೆ ತಯಾರಿ ನಡೆದಿತ್ತು. ಇನ್ನೇನು ದಿಬ್ಬಣ ಬರಬೇಕಿತ್ತು. ಅಷ್ಟರಲ್ಲಿ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಲಾಗುತ್ತಿದೆ ಎಂದು ಕೆಲವರು ಭೇಟಿ ಬಚಾವೋ ಭೇಟಿ ಪಡಾವೋ ಮೂಲಕ ದೂರು ನೀಡಿದರು. ಆದ್ದರಿಂದ ಕ್ರಮಕೈಗೊಳ್ಳಬೇಕಾಯಿತು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಶಾಹಿದ್ ಸಿದ್ದೀಕಿ ಹೇಳಿದ್ದಾರೆ. ಒಂದು ವೇಳೆ ಮದುವೆ ಆಗಿದ್ದರೆ ತಂದೆ ತಾಯಿಯರನ್ನು ಜೈಲಿಗೆ ಕಳುಹಿಸಬೇಕಾದ ಪ್ರಸಂಗ ಒದಗುತ್ತಿತ್ತು ಎಂದು ಅವರು ತಿಳಿಸಿದ್ದಾರೆಂದು ವರದಿಯಾಗಿದೆ.







