ಮಂಗಳೂರು ಬಾರ್ ಅಸೋಸಿಯೇಶನ್ ನಿಂದ ಪ್ರಾದೇಶಿಕ ವಕೀಲರ ಸಮ್ಮೇಳನ

ಮಂಗಳೂರು, ಎ. 30: ಮಂಗಳೂರು ಬಾರ್ ಅಸೋಸಿಯೇಶನ್ ನಿಂದ ಇಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಪ್ರಾದೇಶಿಕ ವಕೀಲರ ಸಮ್ಮೇಳನವನ್ನು ಜಸ್ಟಿಸ್ ಕೆ.ಎಸ್. ಹೆಗ್ಡೆ ವೇದಿಕೆಯಲ್ಲಿ ಹೈಕೋರ್ಟ್ ನ್ಯಾಯಾಧೀಶ ಎ.ಎನ್ .ಗೋಪಾಲಗೌಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹೈ ಕೋರ್ಟ್ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್, ಆಂಧ್ರಪ್ರದೇಶ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಕೆ.ಎಲ್. ಮಂಜುನಾಥ್, ಕರ್ನಾಟಕ ಸರಕಾರದ ಅಡ್ವೋಕೇಟ್ ಜನರಲ್ ಮಧುಸೂದನ್ ಆರ್ ನಾಯಕ್, ದ.ಕ. ಜಿಲ್ಲಾ ಸತ್ರ ನ್ಯಾಯಾಧೀಶ ಉಮಾ ಎಂ.ಜಿ., ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಪಿ.ಚೆಂಗಪ್ಪ, ಕಾರ್ಯದರ್ಶಿ ರಾಘವೇಂದ್ರ, ಉಪಾಧ್ಯಕ್ಷ ಯಶೋಧರ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





