ಸಂಘ ಸಂಸ್ಥೆ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು: ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ

ಕಿನ್ನಿಗೊಳಿ, ಎ.30: ಯುವ ಜನತೆ ಸಂಘ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಕಿನ್ನಿಗೋಳಿ ಸ್ವಾವಿು ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಹೇಳಿದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ಜಾತ್ರೆ ಪ್ರಯುಕ್ತ ಸುರಗಿರಿ ಯುವಕ ಮಂಡಲದ 46 ನೇ ವಾರ್ಷಿಕೋತ್ಸವಸಮಾರಂಭದ ಅಧ್ಯಕ್ಷತೆ
ವಹಿಸಿ ಮಾತನಾಡಿದರು.
ಈ ಸಂದರ್ಭ “ಕೋಡು ಗುರುರಾಜ ಭಟ್” ಪುರಸ್ಕಾರವನ್ನು ಹಿರಿಯ ಧಾರ್ಮಿಕ ಮುಂದಾಳು ವೈ. ಯೋಗೀಶ್ ರಾವ್ ಅವರಿಗೆ ನೀಡಿ ಪುರಸ್ಕರಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಕೃಷ್ಣ ಕಾರಂತ, ಐಕಳ ಪೊಂಪೈ ಪದವಿ ಕಾಲೇಜು ಉಪನ್ಯಾಸಕ ಜಗದೀಶ ಹೊಳ್ಳ , ಸುರಗಿರಿ ದೇವಳಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ , ಸುರಗಿರಿ ಯುವಕ ಮಂಡಲ ಅಧ್ಯಕ್ಷ ಸಚಿನ್ ಶೆಟ್ಟಿ, ಸುರಗಿರಿ ಯುವತಿ ಮಂಡಲ ಅಧ್ಯಕ್ಷೆ ನಿರ್ಮಲ ವಿ. ನಾಯಕ್ , ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಉಪಸ್ಥಿತರಿದ್ದರು.
Next Story





