ಹೇಮಮಾಲಿನಿ ಬಂದ ಮೇಲೆ ನನ್ನ ಕಿಮ್ಮತ್ತೇ ಕಡಿಮೆಯಾಯಿತು: ಕೇಂದ್ರ ಸಚಿವ ವೀರೇಂದ್ರ ಸಿಂಗ್!

ಜೀಂದ್, ಎಪ್ರಿಲ್ 30: ರಾಜೀವ್ ಗಾಂಧಿ ಪದವಿ ಪ್ರಧಾನ ಸಮಾರಂಭಕ್ಕೆ ಬಂದ ಖ್ಯಾತ ನಟಿ ಹೇಮಾ ಮಾಲಿನಿಯನ್ನು ನೋಡಿ ಕೇಂದ್ರ ಸಚಿವ ಬೀರೇಂದ್ರ ಸಿಂಗ್ ಅಚ್ಚರಿಯ ಮಾತನ್ನು ಹೇಳಿದ್ದಾರೆಂದು ವರದಿಯಾಗಿದೆ. ಸರಕಾರಿ ಉದ್ಯೋಗಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಹೇಮಾಮಾಲಿನಿ ಜೊತೆ ನಿಂತು ಫೋಟೊ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ ಎಂದು ಹಾಸ್ಯವಾಗಿ ಮಾತಾಡಿದ ಕೇಂದ್ರ ಸಚಿವರು ಹೇಮಾಮಾಲಿನಿ ಬಂದ ಮೇಲೆ ತನ್ನ ಕಿಮ್ಮತ್ತು ಕಡಿಮೆಯಾಯಿತು ಎಂದು ಪ್ರಲಾಪಿಸಿದರು.
ಸಮಾರಂಭದಲ್ಲಿ 45 ವಿದ್ಯಾರ್ಥಿ ಮತ್ತು 80 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು. ಕ್ರೀಡೆ,ಶಿಕ್ಷಣದಲ್ಲಿ ಮುಂದಿರುವ 145 ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು. ಕನಸಿನ ಕನ್ಯೆ ಹೇಮಾಮಾಲಿನಿ ಪದವಿ ಪಡೆಯುವುದು, ಕೆಲಸ ಗಳಿಸಿಕೊಳ್ಳುವುದು ಮತ್ತು ಹಣ ಸಂಪಾದಿಸುವುದು ಮಾತ್ರ ಜೀವನದ ಉದ್ದೇಶವಾಗಬಾರದು ಎಂದರು. ವಿದ್ಯಾರ್ಥಿಗಳು ಒಳಗಿನ ನೈತಿಕ ಗುಣಗಳನ್ನು ಸೃಜನಶೀಲಗೊಳಿಸಿ ದೇಶ ಕಟ್ಟುವ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.





