ಹೊಟ್ಟೆ ಸೀಳಿ ಮಗು ಹೊರತೆಗೆದ ಮಹಿಳೆಗೆ ಅಮೆರಿಕದಲ್ಲಿ 100ವರ್ಷ ಜೈಲು ಶಿಕ್ಷೆ!

ಅಮೆರಿಕ, ಎಪ್ರಿಲ್ 30: ಅಮೆರಿಕದ ನ್ಯಾಯಾಲಯವೊಂದು ಓರ್ವ ಮಹಿಳೆ ಇನ್ನೋರ್ವ ಮಹಿಳೆಯ ಹೊಟ್ಟೆಯನ್ನು ಸಿಗಿದು ಮಗುವನ್ನು ಹೊರತೆಗೆದ ಆರೋಪದಲ್ಲಿ ನೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಅಭೂತಪೂರ್ವ ಘಟನೆ ವರದಿಯಾಗಿದೆ. 35ವರ್ಷದ ಡಾಯ್ನೆಲ್ ಎಸಗಿದ ಈ ಅಪರಾಧವನ್ನು ಕಂಡು ಇಡೀ ಅಮೇರಿಕವೇ ಬೆಚ್ಚಿಬಿದ್ದಿತ್ತು. ಘಟನೆ ಕಳೆದ ಫೆಬ್ರವರಿಯಲ್ಲಿ ಮಹಿಳೆಯ ಮೇಲಿನ ಆರೋಪಗಳು ಸಾಬೀತಾಗಿತ್ತು ಎಂದು ವರದಿಗಳು ತಿಳಿಸಿವೆ.
ಡಾಯ್ನೆಲ್ ಹತ್ಯೆ ಪ್ರಯತ್ನ ಮತ್ತು ಕಾನೂಬಾಹಿರ ಗರ್ಭಪಾತ ಆರೋಪ ಹೊರಿಸಲಾಗಿತ್ತು. ಈ ಎರಡು ಆರೋಪದಲ್ಲಿ ಅತ್ಯಧಿಕ ಶಿಕ್ಷೆಯನ್ನು ನೀಡಬಹುದಾಗಿತ್ತು. ಅದನ್ನು ಈಮಹಿಳೆಗೆ ನೀಡಲಾಗಿದೆ. ಡೆಯ್ನೆಲ್ 2015 ಮಾರ್ಚ್‌ನಲ್ಲಿ ಗರ್ಭಿಣಿ ಮಹಿಳೆ ಮಿಶೆಲ್ ವಿಲ್ಕಿನ್ಸ್‌ಳನ್ನು ಪುಸಲಾಯಿಸಿ ಮನೆಗೆ ಕರೆದು ಅವಳಿಗೆ ಹೊಡೆದದ್ದಲ್ಲದೆ ಚಾಕುವಿನಿಂದ ತಿವಿದಿದ್ದಳು. ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಹೊಟ್ಟೆಗೆ ಚಾಕು ಹಾಕಿ ಮಗುವನ್ನು ಹೊರಗೆ ತೆಗೆದಿದ್ದಳು ನಂತರ ಮಗು ಸತ್ತಿತ್ತು.
ಡೆಯ್ನೆಲ್‌ಳ ಹಲ್ಲೆಯಿಂದ ಬದುಕುಳಿದಿದ್ದ ವಿಲ್ಕಿನ್ಸ್ ಡೆಯ್ನೆಲ್ ಭ್ರಮಿತಳಾಗಿ ಬದುಕುತ್ತಿದ್ದಳು ಎಂದು ಕೋರ್ಟ್‌ಗೆ ತಿಳಿಸಿದ್ದಳು. ಆದರೆ ವಿಲ್ಕಿನ್ಸ್‌ಳ ವಕೀಲರು ಡಾಯ್ನೆಲ್‌ಳ ಮೇಲೆ ಹತ್ಯೆ ಆರೋಪ ಹೊರಿಸಿರಲಿಲ್ಲ. ಆದರೆ ಪ್ರಕರಣವನ್ನುಆಲಿಸಿದ ನ್ಯಾಯಾಧೀಶೆ ಮಾರಿಯಾ ಡಾಯ್ನೆಲ್ ಮಾಡಿದ ಕೃತ್ಯ ಬರ್ಬರ ಅಪರಾಧವಾಗಿದೆ. ನಿರ್ದಯವಾಗಿದೆ. ಹೀಗೆ ಯೋಚಿಸಲಿಕ್ಕೂ ಸಾಧ್ಯವಿಲ್ಲ ಎಂದು ಹೇಳಿ ಡೆಯ್ನಲ್‌ಳಿಗೆ ನೂರು ವರ್ಷ ಶಿಕ್ಷೆ ವಿಧಿಸಿ ತೀರ್ಪಿತ್ತರೆಂದು ವರದಿಗಳು ತಿಳಿಸಿವೆ.





