ಮತದಾರರನ್ನು ಎಚ್ಚರಿಸಿದ ಸೂಪರ್ ಸ್ಟಾರ್
ಓಟಿಗೆ ನೋಟು ಪಡೆದರೆ ಕಳ್ಳನನ್ನೇ ನಾಯಕನಾಗಿ ಪಡೆಯುವಿರಿ

ಚೆನ್ನೈ, ಎ. 30: ಮತ ನೀಡುವುದಾಗಿ ಹೇಳಿ ಹಣ ಪಡೆಯದಂತೆ ಮತದಾರರನ್ನುವಿನಂತಿಸಿದ ಖ್ಯಾತ ನಟ ಕಮಲ್ ಹಾಸನ್ ‘‘ಓಟಿಗೆ ನೋಟು ಪಡೆದರೆ ನೀವು ಕಳ್ಳನನ್ನೇ ನಾಯಕನಾಗಿ ಪಡೆಯುವಿರಿ,’’ ಎಂದು ಎಚ್ಚರಿಸಿದರು.
‘‘ಯಾರು ಅಥವಾ ಯಾವ ಪಕ್ಷ ಹಣ ನೀಡುತ್ತಿದೆಯೆಂಬುದರ ಬಗ್ಗೆ ನನಗೆ ಪರಿವೆಯಿಲ್ಲ, ಆದರೆ ಅದನ್ನು ಪಡೆದುಕೊಳ್ಳುವವರು ನಾಚಿಕೆ ಪಟ್ಟುಕೊಳ್ಳಬೇಕಲ್ಲವೇ?’’ಎಂದು ತಮಿಳು ಟಿವಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಾ ಕಮಲ್ ಹೇಳಿದರು.
ಮತ ನೀಡಲು ಹಣ ಪಡೆದಲ್ಲಿ ಸಚಿವ ಅಥವಾ ನಾಯಕನೊಬ್ಬ ಪರಿಣಾಮಕಾರಿಯಾಗಿ ತನ್ನ ಕರ್ತವ್ಯ ನಿರ್ವಹಿಸದೇ ಇದ್ದಲ್ಲಿ ಅಥವಾಭ್ರಷ್ಟಾಚಾರದಲ್ಲಿ ತೊಡಗಿದಲ್ಲಿ ಆತನನ್ನುಪ್ರಶ್ನಿಸುವ ಅಧಿಕಾರವನ್ನು ಕಳೆದುಕೊಂಡಂತೆ,’’ಎಂದು ಅವರು ಹೇಳಿದರು.
‘‘ನನ್ನ ಮನೆ, ನನ್ನ ದೇಶ’’ ಎಂಬ ತಮ್ಮ ತನದ ಭಾವನೆ ಜನರಿಗಿರಬೇಕು ಎಂದು ಹೇಳಿದ ಅವರು ಮತಕ್ಕಾಗಿ ಹಣ ನೀಡುವ ರಾಜಕಾರಣಿಗಳು ಹಣ ಸ್ವೀಕರಿಸಿದ ಜನರ ಸಮಸ್ಯೆಗಳನ್ನು ಪರಿಹರಿಸುವುದಿಲ್ಲವೆಂದರು.
Next Story





