ಸೌದಿ: 3 ಭಯೋತ್ಪಾದಕರ ಹತ್ಯೆ

ಜಿದ್ದಾ, ಎ. 30: ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದವು ಹಾಗೂ ಓರ್ವ ಭಯೋತ್ಪಾದಕ ತನ್ನನ್ನು ತಾನು ಸ್ಫೋಟಿಸಿಕೊಂಡನು ಎಂದು ಸೌದಿ ಅರೇಬಿಯದ ಆಂತರಿಕ ಸಚಿವಾಲಯ ಶುಕ್ರವಾರ ಘೋಷಿಸಿದೆ.
ಸೌದಿ ಅರೇಬಿಯದ ಓರ್ವ ಉನ್ನತ ಅಧಿಕಾರಿಯನ್ನು ಕೊಂದ ಹಾಗೂ ದೇಶ ವಿರೋಧಿ ಕೃತ್ಯಗಳನ್ನು ನಡೆಸಿದ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದರು. ಜನವರಿಯಲ್ಲಿ ಪ್ರಕಟಗೊಂಡ ಪೊಲೀಸರಿಗೆ ಅತ್ಯಂತ ಬೇಕಾದವರ ಪಟ್ಟಿಯಲ್ಲಿ ಈ ಮೂವರು ಉಗ್ರರ ಹೆಸರುಗಳಿದ್ದವು.
ಅಲ್-ಕುವಯಿಯಾದ ಅಲ್-ಮುಬಾಹತ್‌ನ ಮಹಾ ನಿರ್ದೇಶಕ ಕರ್ನಲ್ ಕಿತಾಬ್ ಅಲ್-ಉಟೈಬಿಯ ಹತ್ಯೆಯಲ್ಲಿ ಅವರು ಶಾಮೀಲಾಗಿದ್ದರು ಎಂದು ಸಚಿವಾಲಯ ತಿಳಿಸಿದೆ.
ಬಿಶಾದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅವರು ಹತರಾದರು.
ಭಯೋತ್ಪಾದಕರನ್ನು ಸುತ್ತುವರಿದ ಭದ್ರತಾ ಪಡೆಗಳು ಅವರ ಮೇಲೆ ಗುಂಡು ಹಾರಿಸಿದವು. ಗುಂಡು ಹಾರಾಟದಲ್ಲಿ ಇಬ್ಬರು ಮೃತಪಟ್ಟರು. ಓರ್ವ ತಾನು ಧರಿಸಿದ್ದ ಸ್ಫೋಟಕಗಳಿಂದ ಕೂಡಿದ ಬೆಲ್ಟನ್ನು ಸ್ಫೋಟಿಸಿಕೊಂಡು ಸತ್ತನು.
Next Story





