ಭೀಕರ ರಸ್ತೆ ಅಪಘಾತ: ಕಾಲು ಕಳೆದುಕೊಂಡ ಏಳು ಮಹಿಳೆಯರು!

ಮಧ್ಯಪ್ರದೇಶ: ಎಪ್ರಿಲ್ 30: ಇಲ್ಲಿನ ಖಾಂಡ್ವಾ ಜಿಲ್ಲೆಯ ರಸ್ತೆ ಅಘಾತವೊಂದರಲ್ಲಿ ಏಳು ಮಹಿಳೆಯರು ತಮ್ಮ ಕಾಲುಕಳಕೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಈ ಮಹಿಳೆಯರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಶುಕ್ರವಾರ ಸಂಜೆ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳುತ್ತಿದ್ದಾಗ ಕಾಲನ್ನು ಹೊರಗೆ ಹಾಕಿ ಕುಳಿತಿದ್ದರು. ಭಾರೀ ವೇಗದಿಂದ ಬಂದ ಟ್ರಕ್ ಟ್ರಾಲಿಯೊಂದು ಇವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು.
ಸಿವಿಲ್ ಸರ್ಜನ್ ಡಾ. ಒಪಿ ಜಗುತಾವತ್‌ರು "ಈಗ ಮಹಿಳೆಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಪುರುಷರೂ ಇದ್ದಾರೆ ಅವರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ. ಅಪಘಾತದ ಬಳಿಕ ಕೋಲಾಹಲವೇ ಉಂಟಾಗಿತ್ತು. ಮಹಿಳೆಯರ ತುಂಡಾದ ಕಾಲಿನ ಭಾಗವೂ ದೊರಕಿಲ್ಲ ಎಂದು ಹೇಳಲಾಗಿದೆ. ಗಾಯಾಳುಗಳಿಗೆ ಕೂಡಲೇ ಯಾವುದೇ ರೀತಿಯ ನೆರವು ಸಿಕ್ಕಿರಲಿಲ್ಲ. ಯಾರಬಳಿಯೂ ಮೊಬೈಲ್ ಫೋನ್ ಇರಲಿಲ್ಲ. ಕೊನೆಗೆ ರಸ್ತೆಯಲ್ಲಿ ಸಾಗುತ್ತಿದ್ದ ಜನರು ಪೊಲೀಸರಿಗೆ ಅಪಘಾತದ ಮಾಹಿತಿ ನೀಡಿದ್ದರು. ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತಲುಪಿಸಲಾಯಿತು.ಆದರೆ ಅಷ್ಟರಲ್ಲಿ ಬಹಳಷ್ಟು ಮಂದಿಯ ಶರೀರದಿಂದ ರಕ್ತ ಹರಿದಿತ್ತು. ಖಂಡ್ವಾ ಪೊಲೀಸ್ ಅಧೀಕ್ಷಕ ಎಂಎಸ್ ಸಿಕರವಾರ್‌ರು ಈ ಜನರಿಗೆ ನೆರವು ಸಿಗಲು ತಡವಾಯಿತು. ಈ ಘಟನೆ ಸುದ್ದಿ ತಿಳಿದ ಕೂಡಲೇ ಪೊಲೀಸರು ಮತ್ತು ಆ್ಯಂಬುಲೆನ್ಸ್ ಸ್ಥಳಕ್ಕೆ ಕಳುಹಿಸಲಾಯಿತು. ಎಲ್ಲ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.





