ಕೋಮುಗಲಭೆ ನಿಯಂತ್ರಣದಲ್ಲಿ ಮುಖ್ಯ ಪಾತ್ರವಹಿಸಿದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಸನ್ಮಾನ

ಶಿ ವಮೊಗ್ಗ,ಎ.30: ಕೊಲೆ, ಸುಲಿಗೆ, ದರೋಡೆ, ಕಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಿಸುಮಾರು 35 ಆರೋಪಿಗಳ ಬಂಧನ ಹಾಗೂ ಕೋಮುಗಲಭೆೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಿದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಮರ್ದಾನ್ ದಿನ್ ಕಿರವಾಡಿಗೆ 2015 ನೆ ಸಾಲಿನ ಉತ್ತಮ ಸೇವಾ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಪೊಲೀಸ್ ಇಲಾಖೆ ಗೌರವಿಸಿದೆ.
nಇತ್ತೀಚೆಗೆ ರಾಜ್ಯ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕ ಓಂಪ್ರಕಾಶ್ ರಾವ್‌ರವರು ಶಿವಮೊಗ್ಗ ನಗರಕ್ಕೆ ಭೇಟಿ ನೀಡದ್ದ ವೇಳೆ, ಮರ್ದಾನ್ ದಿನ್ ಕಿರವಾಡಿಗೆ ಬಹುಮಾನ ನೀಡಿ ಅಭಿನಂದಿಸಿದ್ದಾರೆ. ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ. ಈ ಕುರಿತಂತೆ ಅವರು ಪತ್ರಿಕಾ ಪ್ರಕಟನೆೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್ ಸಾಹಸಗಾಥೆಯ ವಿವರ ನೀಡಿದ್ದಾರೆ. ತಪ್ಪಿದ ಗಲಭೆ:
ಮರ್ದಾನ್ ದಿನ್ ಕಿರವಾಡಿಯವರು ಕಳೆದ 10 ವರ್ಷಗಳ ಹಿಂದೆ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ನಾಗಿ ನೇಮಕಗೊಂಡಿದ್ದರು. ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಣೆ ಮಾಡಿರುವ ಅವರು, ಪ್ರಸ್ತುತ ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 2015 ನೆ ಸಾಲಿನ ಫೆಬ್ರವರಿ ತಿಂಗಳಲ್ಲಿ ಶಿವಮೊಗ್ಗ ನಗರದಲ್ಲಿ ಜರಗಿದ ಕೋಮುಗಲಭೆಯ ನಿಯಂತ್ರಣಕ್ಕೆ ತರುವಲ್ಲಿ ಮರ್ದಾನ್‌ರವರು ಪ್ರಮುಖ ಪಾತ್ರವಹಿಸಿದ್ದರು. ನಗರದ ಗೋಪಾಳದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಭೇದಿಸಿ, ಕೋಮುಗಲಭೆ ಕಾರಣದಿಂದ ನಡೆದ ಕೊಲೆಯಲ್ಲ ಕುಟುಂಬ ವೈಷಮ್ಯದಿಂದ ನಡೆದ ಹತ್ಯೆ ಎಂಬವುದನ್ನು ಬಹಿರಂಗಪಡಿಸಿದ್ದರು ಎಂದು ಎಸ್ಪಿಯವರು ಪತ್ರಿಕಾ ಪ್ರಕಟನೆೆಯಲ್ಲಿ ಮಾಹಿತಿ ನೀಡಿದ್ದಾರೆ.







