Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾರ್ಮಿಕ ಕಲ್ಯಾಣ: ಬೆಳಕಿಗೆ ಬಾರದ...

ಕಾರ್ಮಿಕ ಕಲ್ಯಾಣ: ಬೆಳಕಿಗೆ ಬಾರದ ಅಂಬೇಡ್ಕರ್ ಮುಖ

ವಾರ್ತಾಭಾರತಿವಾರ್ತಾಭಾರತಿ30 April 2016 10:31 PM IST
share
ಕಾರ್ಮಿಕ ಕಲ್ಯಾಣ: ಬೆಳಕಿಗೆ ಬಾರದ ಅಂಬೇಡ್ಕರ್ ಮುಖ

ಭಾರತದಲ್ಲಿ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ವಾಸ್ತವವಾಗಿ ದೊರಕಿಸಿಕೊಟ್ಟ ನಾಯಕರಿದ್ದರೆ ಅದು ಆಧುನಿಕ ಭಾರತದ ಪಿತಾಮಹ ಹಾಗೂ ಕ್ರಾಂತಿಕಾರಿ ಡಾ.ಬಾಬಾಸಾಹೇಬ್ ಅಂಬೇಡ್ಕರ್. ಡಾ.ಅಂಬೇಡ್ಕರ್ ಅವರ ಪ್ರಯತ್ನ ಇರದಿದ್ದರೆ, ಇಂದು ಭಾರತೀಯ ಕಾರ್ಮಿಕರ ಭವಿಷ್ಯ ಕರಾಳವಾಗುತ್ತಿತ್ತು. ಭಾರತದ ಕಾರ್ಮಿಕ ವಲಯದ ಬಗ್ಗೆ ಬಹುಮುಖಿ ಚಿಂತನೆ ಹೊಂದಿದ್ದ ಮತ್ತು ದೂರದೃಷ್ಟಿ ಇರಿಸಿಕೊಂಡಿದ್ದ ಏಕೈಕ ನೇತಾರ ಅವರು. ಜಾತಿಪದ್ಧತಿ ಅತ್ಯಂತ ಸಂಕೀರ್ಣ ಹಾಗೂ ಆಳವಾಗಿ ಬೇರುಬಿಟ್ಟಿದ್ದ ಭಾರತದಂತಹ ದೇಶದಲ್ಲಿ ಹುಟ್ಟಿದ್ದರಿಂದ, ಪಟ್ಟಭದ್ರವಾದ ಮೇಲ್ಜಾತಿಯ ಮಂದಿ, ಆಧುನಿಕ ಭಾರತವನ್ನು ಕಟ್ಟುವಲ್ಲಿ ಅಂಬೇಡ್ಕರ್ ನೀಡಿದ ಕೊಡುಗೆಯ ಕೀರ್ತಿಯನ್ನು ಅವರಿಗೆ ನೀಡಿಲ್ಲ ಎಂದೇ ಹೇಳಬೇಕು. ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ ರೂಪುಗೊಳ್ಳಬೇಕಾದರೆ ಅದಕ್ಕೆ ಅಂಬೇಡ್ಕರ್ ಅವರ ಕೊಡುಗೆ ಕಾರಣ. ಅಂಬೇಡ್ಕರ್ ಅವರ ವಿಶಿಷ್ಟ ಆರ್ಥಿಕ ಚಿಂತನೆಗಳು ಬಲುದೊಡ್ಡ ಆರ್ಥಿಕ ಕುಸಿತದ ಸಂದರ್ಭದಲ್ಲೂ ಭಾರತದ ಆರ್ಥಿಕತೆಯನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿವೆ. ಅದು ಭಾರತೀಯ ರಿಸರ್ವ್ ಬ್ಯಾಂಕಿನ ಸಂಸ್ಥಾಪನೆಗೆ ಸಂಬಂಧಿಸಿದ ತತ್ವಗಳನ್ನು ರೂಪಿಸುವಲ್ಲಿ ಇರಬಹುದು ಅಥವಾ ಮುಕ್ತವ್ಯಾಪಾರ ನೀತಿ ಬಗೆಗೆ ಇರಬಹುದು. ಅತ್ಯಂತ ಶ್ರೇಷ್ಠ ಆರ್ಥಿಕ ಚಿಂತನೆಯನ್ನು ಈ ದೇಶಕ್ಕೆ ಅಂಬೇಡ್ಕರ್ ನೀಡಿದ್ದಾರೆ.

ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ವೌಲಿಕ ಚಿಂತನೆಯ ಬಗ್ಗೆ ಕೆಲವೊಂದು ಅಪರೂಪದ ಮಾಹಿತಿಗಳು ಇಲ್ಲಿವೆ. ಕಾರ್ಮಿಕರ ಹಕ್ಕಿಗಾಗಿ ಅವರು ನಡೆಸಿದ ಹೋರಾಟ, ಕಾರ್ಮಿಕ ಮುಖಂಡರಾಗಿ ಸಲ್ಲಿಸಿದ ಸೇವೆ ಹಾಗೂ 1942ರಿಂದ 1946ರವರೆಗೆ ವೈಸ್‌ರಾಯ್ ಆಡಳಿತ ಮಂಡಳಿಯ ಕಾರ್ಮಿಕ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅಪೂರ್ವ. 1942ರ ಜುಲೈ 7ರಂದು ಅವರು ವೈಸರಾಯ್ ಆಡಳಿತ ಮಂಡಳಿಯ ಕಾರ್ಮಿಕ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.
ಅಂಬೇಡ್ಕರ್ ಅವರ ಮೊಟ್ಟಮೊದಲ ಹಾಗೂ ಅಪೂರ್ವ ಸಾಧನೆ ಎಂದರೆ ಫ್ಯಾಕ್ಟರಿ ಕೆಲಸದ ಅವಧಿಯನ್ನು ಎಂಟು ಗಂಟೆಗಳಿಗೆ ಇಳಿಸಿರುವುದು. ಇಂದು ದೇಶಾದ್ಯಂತ ಕಾರ್ಮಿಕರ ಕೆಲಸದ ಅವಧಿ ಎಂಟು ಗಂಟೆಗೆ ಸೀಮಿತವಾಗಿದೆ. ಆದರೆ ಇದು ಸಾಧ್ಯವಾಗಿರುವುದು ಡಾ.ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಎನ್ನುವುದು ಎಷ್ಟು ಮಂದಿ ಕಾರ್ಮಿಕರಿಗೆ ತಿಳಿದಿದೆ ಎನ್ನುವುದು ಬೇರೆ ವಿಚಾರ. ದೇಶದಲ್ಲಿ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಜಾರಿಗೆ ತಂದ ಅವರು, ಈ ಹಿಂದೆ ಇದ್ದ 14 ಗಂಟೆಗಳ ಕೆಲಸದ ಅವಧಿಯ ಶೋಷಣೆಯಿಂದ ಕಾರ್ಮಿಕ ವಲಯವನ್ನು ಮುಕ್ತಗೊಳಿಸಿದರು. ಈ ಮೂಲಕ ಕಾರ್ಮಿಕ ಪಾಲಿನ ಆಶಾಕಿರಣವಾದರು. 1942ರ ನವೆಂಬರ್ 27ರಂದು ನವದೆಹಲಿಯಲ್ಲಿ ನಡೆದ ಏಳನೇ ಅಖಿಲ ಭಾರತ ಕಾರ್ಮಿಕ ಸಮಾವೇಶದಲ್ಲಿ ಈ ಐತಿಹಾಸಿಕ ನಿರ್ಣಯ ಜಾರಿಗೆ ಕಾರಣರಾದರು.

ಮಹಿಳಾ ಕಾರ್ಮಿಕ ಕಾನೂನು
ಮಹಿಳಾ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಅಂಬೇಡ್ಕರ್ ಹಲವು ಕಾಯ್ದೆಗಳ ಜಾರಿಗೆ ಕಾರಣರಾದರು. ಗಣಿ ಹೆರಿಗೆ ಪ್ರಯೋಜನ ಕಾಯ್ದೆ, ಮಹಿಳಾ ಕಾರ್ಮಿಕ ಕಲ್ಯಾಣ ನಿಧಿ, ಮಹಿಳಾ ಮತ್ತು ಬಾಲಕಾರ್ಮಿಕ ಸಂರಕ್ಷಣಾ ಕಾಯ್ದೆ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಸೌಲಭ್ಯದ ಪ್ರಯೋಜನಗಳ ಕಾಯ್ದೆ, ಕಲ್ಲಿದ್ದಲು ಗಣಿಗಳಲ್ಲಿ ಭೂಗತ ಗಣಿಗಾರಿಕೆಯಲ್ಲಿ ಮಹಿಳಾ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸುವ ಕಾಯ್ದೆ, ಭಾರತೀಯ ಫ್ಯಾಕ್ಟರಿ ಕಾಯ್ದೆಯಂಥ ಹತ್ತು ಹಲವು ಕಾಯ್ದೆಗಳು ಅಂಬೇಡ್ಕರ್ ಚಿಂತನೆಯ ಫಲ.
ಉದ್ಯೋಗ ವಿನಿಮಯ ಕೇಂದ್ರ
ಭಾರತದಲ್ಲಿ ಉದ್ಯೋಗ ವಿನಿಮಯ ಕೇಂದ್ರವನ್ನು ಅಸ್ತಿತ್ವಕ್ಕೆ ತರುವ ಸಂಬಂಧ ಕಾಯ್ದೆಯನ್ನು ರೂಪಿಸುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದರು. ಎರಡನೆ ಜಾಗತಿಕ ಸಮರದ ಬಳಿಕ ಬ್ರಿಟಿಷ್ ಭಾರತದಲ್ಲಿ ರಚನೆಯಾದ ಪ್ರಾಂತೀಯ ಸರಕಾರದಲ್ಲಿ ಕಾರ್ಮಿಕ ಸದಸ್ಯರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಉದ್ಯೋಗ ವಿನಿಮಯ ಕೇಂದ್ರದ ರಚನೆಗೆ ಕಾರಣಕರ್ತರಾದರು. ಅಂತೆಯೇ ಕಾರ್ಮಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿವಾದ ಹಾಗೂ ವ್ಯಾಜ್ಯಗಳನ್ನು ಪರಿಹರಿಸುವ ಸಲುವಾಗಿ ಕಾರ್ಮಿಕ ಸಂಘಟನೆ, ಉದ್ಯೋಗದಾತರು ಹಾಗೂ ಸರಕಾರದ ಪ್ರತಿನಿಧಿಗಳನ್ನು ಒಳಗೊಂಡ ತ್ರಿಪಕ್ಷೀಯ ಚರ್ಚಾ ವೇದಿಕೆಯನ್ನು ರೂಪಿಸುವಲ್ಲಿ ಕೂಡಾ ಮಹತ್ವದ ಪಾತ್ರ ವಹಿಸಿದ್ದರು.
ಸಾರ್ವಜನಿಕ ವಲಯದಲ್ಲಿ ಕೌಶಲ ಅಭಿವೃದ್ಧಿ ಯೋಜನೆಯ ಜಾರಿಗೆ ಬಂದದ್ದು ಕೂಡಾ ಅಂಬೇಡ್ಕರ್ ಚಿಂತನೆಯ ಫಲ. ರಾಷ್ಟ್ರೀಯ ಉದ್ಯೋಗ ಕೇಂದ್ರ ಸ್ಥಾಪನೆಗೆ ಅವರು ಬಹಳಷ್ಟು ಶ್ರಮಿಸಿದ್ದರು.
ಇಎಸ್‌ಐ ಸೌಲಭ್ಯ: ಕಾರ್ಮಿಕರ ವೈದ್ಯಕೀಯ ಆರೈಕೆಯ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಕಾರ್ಮಿಕರ ರಾಜ್ಯ ವಿಮಾ ಯೋಜನೆಯನ್ನು ಮೊಟ್ಟಮೊದಲ ಬಾರಿಗೆ ದೇಶದಲ್ಲಿ ಜಾರಿಗೆ ತರಲು ಅಂಬೇಡ್ಕರ್ ಕಾರಣಕರ್ತರಾದರು. ಕೆಲಸದ ವೇಳೆ ಅಂಗವೈಕಲ್ಯ ಉಂಟಾದಲ್ಲಿ ಅವರಿಗೆ ವೈದ್ಯಕೀಯ ರಜೆ ಹಾಗೂ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಮಾನವೀಯ ಸೇವೆ ಒದಗಿಸಬೇಕು ಎಂಬ ಸಲುವಾಗಿ ಇಎಸ್‌ಐ ಸ್ಥಾಪನೆಗೆ ಕಾರಣರಾದರು. ಪೂರ್ವ ಏಷ್ಯಾ ದೇಶಗಳ ಪೈಕಿ ಕಾರ್ಮಿಕ ವಿಮಾ ನೀತಿಯನ್ನು ಜಾರಿಗೆ ತಂದ ಮೊಟ್ಟಮೊದಲ ದೇಶ ಎಂಬ ಹೆಗ್ಗಳಿಕೆ ಭಾರತದ್ದು. ಇದರ ಕೀರ್ತಿ ಸಲ್ಲಬೇಕಾದ್ದು ಅಂಬೇಡ್ಕರ್ ಅವರಿಗೆ.
ಇದುವರೆಗೆ ದೇಶದಲ್ಲಿ ರಚನೆಯಾದ 13 ಹಣಕಾಸು ಆಯೋಗಗಳ ವರದಿಗೆ ಮೂಲಚಿಂತನೆ ಅಂಬೇಡ್ಕರ್ ಅವರ ಪಿಎಚ್‌ಡಿ ಪ್ರಬಂಧದ್ದು. ಅದನ್ನು ಆಧಾರವಾಗಿಟ್ಟುಕೊಂಡೇ ಹಣಕಾಸು ಆಯೋಗದ ಶಿಪಾರಸುಗಳು ಬಂದಿವೆ ಎನ್ನುವುದು ಗಮನಾರ್ಹ, ಅಂಬೇಡ್ಕರ್ ಅವರು 1923ರಲ್ಲೇ ''ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ರೂಪುಗೊಂಡ ಬಗೆ'' ಎಂಬ ಶೀರ್ಷಿಕೆಯಡಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.

ಜಲನೀತಿ ಹಾಗೂ ವಿದ್ಯುತ್ ಯೋಜನೆ: ದೇಶದಲ್ಲಿ ನೀರಾವರಿ ಅಭಿವೃದ್ಧಿ ಯೋಜನೆ ಹಾಗೂ ವಿದ್ಯುತ್ ಯೋಜನೆ ದೇಶವನ್ನು ಸದಾ ಕಾಡುತ್ತಾ ಬಂದ ವಿಚಾರ. ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಕಾರ್ಮಿಕ ವಿಭಾಗ ಮೊಟ್ಟಮೊದಲ ಬಾರಿಗೆ ಕೇಂದ್ರೀಯ ತಾಂತ್ರಿಕ ವಿದ್ಯುತ್ ಮಂಡಳಿ (ಸಿಟಿಪಿಬಿ) ರಚಿಸಲು ಮುಂದಾಯಿತು. ಇದು ದೇಶದ ವಿದ್ಯುತ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು, ಜಲ ವಿದ್ಯುತ್ ಕೇಂದ್ರಗಳಿಗೆ ಸೂಕ್ತವಾದ ಜಾಗವನ್ನು ಗುರುತಿಸುವುದು, ಜಲವಿದ್ಯುತ್ ಸಮೀಕ್ಷೆ ನಡೆಸುವುದು, ವಿದ್ಯುತ್ ಉತ್ಪಾದನೆಯ ಸಮಸ್ಯೆಗಳನ್ನು ವಿಶ್ಲೇಷಿಸುವುದು ಹಾಗೂ ಉಷ್ಣವಿದ್ಯುತ್ ಕೇಂದ್ರಗಳ ಬಗ್ಗೆ ತನಿಖೆ ನಡೆಸುವುದು ಮತ್ತಿತರ ಮಹತ್ವದ ಕಾರ್ಯಭಾರವನ್ನು ಈ ಮಂಡಳಿಗೆ ವಹಿಸಲಾಯಿತು. ಇದರ ಜತೆಗೆ ಅಂಬೇಡ್ಕರ್ ಅವರು ದೇಶದಲ್ಲಿ ವಿದ್ಯುತ್ ಗ್ರಿಡ್ ವ್ಯವಸ್ಥೆ ಆರಂಭಿಸುವ ಅಗತ್ಯತೆಯನ್ನೂ ಪ್ರತಿಪಾದಿಸಿದರು.

ಬೇಡ್ಕರ್ ಅವರು ಹುಟ್ಟುಹಾಕಿದ ಈ ವ್ಯವಸ್ಥೆ ಇಂದಿಗೂ ಯಶಸ್ವಿಯಾಗಿ ದೇಶದ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಇಂದು ವಿದ್ಯುತ್ ಇಂಜಿನಿಯರ್‌ಗಳು ತರಬೇತಿಗಾಗಿ ವಿದೇಶಗಳಿಗೆ ಹೋಗುತ್ತಿದ್ದರೆ ಅದರ ಗೌರವವೂ ಸಲ್ಲಬೇಕಾದ್ದು ಅಂಬೇಡ್ಕರ್ ಅವರಿಗೆ. ಕಾರ್ಮಿಕ ಇಲಾಖೆಯ ಮುಖ್ಯಸ್ಥರಾಗಿ ಅವರು, ಸಾಗರೋತ್ತರ ದೇಶಗಳಲ್ಲಿ ಭಾರತದ ವಿದ್ಯುತ್ ಇಂಜಿನಿಯರ್‌ಗಳಿಗೆ ಸೂಕ್ತ ತರಬೇತಿ ನೀಡಲು ವ್ಯವಸ್ಥೆ ಆರಂಭಿಸಿದರು. ಆದರೆ ದೇಶದ ಜಲನೀತಿ ಮತ್ತು ವಿದ್ಯುತ್ ನೀತಿಯನ್ನು ಸಮರ್ಪಕವಾಗಿ ರೂಪಿಸಿದ ಗೌರವವನ್ನು ಇಂದು ಆಧುನಿಕ ಭಾರತದ ಪಿತಾಮಹ ಎನಿಸಿದ ಅಂಬೇಡ್ಕರ್ ಅವರಿಗೆ ಸಲ್ಲಿಸದಿರುವುದು ನಿಜಕ್ಕೂ ನಾಚಿಕೆಗೇಡು. ಸುಖದೇವ್ ಥೋರಟ್ ಅವರ ''ದೇಶದ ಜಲ ಹಾಗೂ ವಿದ್ಯುತ್ ನೀತಿ ರೂಪಿಸುವಲ್ಲಿ ಡಾ.ಅಂಬೇಡ್ಕರ್ ಅವರ ಪಾತ್ರ'' ಎಂಬ ಕೃತಿಯಲ್ಲಿ ಈ ಬಗ್ಗೆ ಸಮಗ್ರ ವಿವರ ಇದೆ.
ಕಾರ್ಮಿಕರಿಗೆ ತುಟ್ಟಿಭತ್ತೆ, ಗುತ್ತಿಗೆ ಕಾರ್ಮಿಕರಿಗೆ ರಜಾ ಸೌಲಭ್ಯ, ಉದ್ಯೋಗಿಗಳಿಗೆ ವೇತನ ಪರಿಷ್ಕರಣೆಯಂಥ ಚಿಂತನೆ ಕೂಡಾ ಅಂಬೇಡ್ಕರ್ ಕೊಡುಗೆ.
ಕಲ್ಲಿದ್ದಲು ಮತ್ತು ಮೈಕಾ ಗಣಿ ಪಿಂಚಣಿ ನಿಧಿ: ದೇಶದ ಆರ್ಥಿಕತೆಯಲ್ಲಿ ಕಲ್ಲಿದ್ದಲು ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದ್ದ ಕಾಲಘಟ್ಟದಲ್ಲಿ, ಅಂಬೇಡ್ಕರ್ ಅವರು ಕಲ್ಲಿದ್ದಲು ಗಣಿ ಸುರಕ್ಷಾ ಕಾಯ್ದೆಯನ್ನು ಜಾರಿಗೆ ತಂದರು. ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿತದೃಷ್ಟಿಯಿಂದ 1944ರ ಜನವರಿ 31ರಂದು ಇದಕ್ಕೆ ಸೂಕ್ತ ತಿದ್ದುಪಡಿ ತಂದರು. 1946ರ ಎಪ್ರಿಲ್ 8ರಂದು, ಮೈಕಾ ಗಣಿ ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆಯನ್ನು ಜಾರಿಗೆ ತಂದು, ಈ ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಗೃಹನಿರ್ಮಾಣ, ನೀರು ಪೂರೈಕೆ, ಶಿಕ್ಷಣ, ಮನೋರಂಜನೆ ಹಾಗೂ ಸಹಕಾರ ಸಾಲ ವ್ಯವಸ್ಥೆ ಕಲ್ಪಿಸಲು ಮುಂದಾದರು.

ಕಾರ್ಮಿಕ ಕಲ್ಯಾಣ ನಿಧಿ: ಬಾಬಾಸಾಹೇಬ್ ಅಂಬೇಡ್ಕರ್ ಅವರು, ಕಾರ್ಮಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಲಹೆ ಹಾಗೂ ಶಿಫಾರಸು ಮಾಡುವ ಸಲುವಾಗಿ ಪಿ.ಬಿ.ಅಗರ್ಕರ್ ನೇತೃತ್ವದಲ್ಲಿ ಸಮಿಯನ್ನು ರಚಿಸಿದರು. ಬಳಿಕ 1944ರ ಜನವರಿಯಲ್ಲಿ ಈ ಸಮಿತಿ ಶಿಫಾರಸುಗಳನ್ನು ಜಾರಿಗೆ ತಂದರು.
ಯುದ್ಧೋತ್ತರ ಆರ್ಥಿಕ ಯೋಜನೆ: ಎರಡನೆ ಮಹಾಯುದ್ಧ ಮುಕ್ತಾಯದ ಹಂತದಲ್ಲಿ ಭಾರತ ಹಲವು ಸವಾಲುಗಳನ್ನು ಎದುರಿಸುತ್ತಿತ್ತು. ದೇಶದ ಆರ್ಥಿಕತೆಯನ್ನು ಪುನರ್ ರೂಪಿಸುವುದು, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವುದು, ಕೈಗಾರಿಕೆಗಳ ಅಭಿವೃದ್ಧಿ, ರಕ್ಷಣಾ ಸೇವೆಗಳ ಪುನರ್ವಸತಿ ಹಾಗೂ ನಿಯೋಜನೆ ಮತ್ತಿತರ ಸಾಲು ಸಾಲು ಸವಾಲುಗಳು ಭಾರತದ ಮುಂದಿದ್ದವು. ಇವೆಲ್ಲ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಮಂಡಳಿಯ ಪುನರ್ ನಿರ್ಮಾಣ ಸಮಿತಿ (ಆರ್‌ಸಿಸಿ) ರಚನೆಯಾಯಿತು. ಅಂಬೇಡ್ಕರ್ ಅವರು ಈ ಸಮಿತಿಯ ಸದಸ್ಯರಾಗಿದ್ದರು.

ಬೇಡ್ಕರ್ ಅವರಿಗೆ ''ನೀರಾವರಿ ಮತ್ತು ವಿದ್ಯುತ್ ನೀತಿ ರಚನಾ ಸಮಿತಿ''ಯ ಅಧ್ಯಕ್ಷರ ಹೊಣೆ ವಹಿಸಲಾಗಿತ್ತು. ಈ ಮಹತ್ವದ ಜವಾಬ್ದಾರಿಯನ್ನು ಅಂಬೇಡ್ಕರ್ ಯಶಸ್ವಿಯಾಗಿ ನಿಭಾಯಿಸಿದರೂ, ಆಧುನಿಕ ಭಾರತಕ್ಕೆ ಅಂಬೇಡ್ಕರ್ ಅವರ ಕೊಡುಗೆಯನ್ನು ವಿವರಿಸುವಲ್ಲಿ ಈ ಅಂಶವನ್ನು ಕಡೆಗಣಿಸಲಾಗಿದೆ. ಯುದ್ಧೋತ್ತರ ಆರ್ಥಿಕ ಯೋಜನೆ ರೂಪಿಸುವಲ್ಲಿ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದಲ್ಲಿ ಅಂಬೇಡ್ಕರ್ ಮಹತ್ವದ ಕೊಡುಗೆ ನೀಡಿದ್ದರು. ದೇಶದಲ್ಲಿ ನೀರಾವರಿ ಹಾಗೂ ವಿದ್ಯುತ್ ಸಂಪನ್ಮೂಲ ಅಭಿವೃದ್ಧಿಪಡಿಸುವಲ್ಲಿ ಅಗತ್ಯ ಯೋಜನೆಯನ್ನು ಅಂಬೇಡ್ಕರ್ ರೂಪಿಸಿದ್ದರು. ಈ ಮೂಲಕ ಅಂಬೇಡ್ಕರ್ ಅವರು ಆರ್ಥಿಕ ಯೋಜನೆ ಹಾಗೂ ಜಲವಿದ್ಯುತ್ ಯೋಜನೆ ರೂಪಿಸುವಲ್ಲಿ ಗಣನೀಯ ಕೊಡುಗೆ ನೀಡಿದ್ದರು. ಆದರೆ ಈ ಆಯಾಮದ ಬಗ್ಗೆ ಯಾವ ಅಧ್ಯಯನವೂ ನಡೆದಿಲ್ಲ.

ಭಾರತದ ಅಂಕಿ ಅಂಶ ಕಾನೂನು: 1942ರಲ್ಲಿ ಅಂಬೇಡ್ಕರ್ ಅವರು ಭಾರತೀಯ ಅಂಕಿ ಸಂಖ್ಯೆಗಳ ಕಾಯ್ದೆಯನ್ನು ರೂಪಿಸಿದರು. ಬಳಿಕ ಭಾರತದ ಮುಖ್ಯ ಮಾಹಿತಿ ಅಧಿಕಾರಿಯಾಗಿದ್ದ ಡಿ.ಕೆ.ಪೈಸೆಂದ್ರಿ ತಮ್ಮ ಕೃತಿಯಲ್ಲಿ, ''ಅಂಬೇಡ್ಕರ್ ಅವರು ಕಾರ್ಮಿಕ ಸ್ಥಿತಿಗತಿ ಹಾಗೂ ವೇತನ, ಇತರ ಆದಾಯ, ಹಣದುಬ್ಬರ, ಸಾಲ, ಗೃಹನಿರ್ಮಾಣ, ಉದ್ಯೋಗ, ಠೇವಣಿ ಮತ್ತು ಇತರ ನಿಧಿ, ಕಾರ್ಮಿಕ ವ್ಯಾಜ್ಯಗಳ ಬಗೆಗಿನ ಕಾನೂನುಗಳನ್ನು ರೂಪಿಸದಿದ್ದರೆ ಭಾರತದ ಅಂಕಿ ಸಂಖ್ಯೆಗಳ ಕಾಯ್ದೆಯನ್ನು ಸಿದ್ಧಪಡಿಸುವುದು ಸಾಧ್ಯವೇ ಇರಲಿಲ್ಲ'' ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕಾರ್ಮಿಕ ಸಂಘ (ತಿದ್ದುಪಡಿ) ಮಸೂದೆ: ಭಾರತದ ಕಾರ್ಮಿಕ ಕಾಯ್ದೆ 1926ರಲ್ಲಿ ಜಾರಿಗೆ ಬಂದಿತ್ತು. ಇದರಲ್ಲಿ ಕಾರ್ಮಿಕ ಸಂಘಟನೆಗಳ ನೋಂದಾವಣೆಗೆ ಮಾತ್ರ ಅವಕಾಶವಿತ್ತು. ಆದರೆ ಇದನ್ನು ಸರಕಾರ ಆಂಗೀಕರಿಸಿರಲಿಲ್ಲ. 1943ರ ನವೆಂಬರ್ 8ರಂದು ಅಂಬೇಡ್ಕರ್ ಅವರು ಭಾರತದ ಕಾರ್ಮಿಕ ಸಂಘಟನೆಗಳ (ತಿದ್ದುಪಡಿ) ಮಸೂದೆಯನ್ನು ಜಾರಿಗೆ ತಂದು, ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯವಾಗಿ ಮಾನ್ಯತೆ ನೀಡಬೇಕು ಎಂಬ ನೀತಿಯನ್ನು ಅನುಷ್ಠಾನಗೊಳಿಸಿದರು.

ದೇಶದ ಪ್ರಮುಖ ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳಾದ ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ, ಸೋನೆ ನದಿ ಕಣಿವೆ ಯೋಜನೆಗಳು ಕೂಡಾ ಅಂಬೇಡ್ಕರ್ ಚಿಂತನೆಯ ಫಲ. ಈ ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿದ್ದು ಮತ್ತು ರೂಪುರೇಷೆಯನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಥೆನ್ನೆಸ್ಸಿ ಕಣಿವೆ ಯೋಜನೆಯ ಮಾದರಿಯಲ್ಲಿ ದಾಮೋದರ ಕಣಿವೆ ಯೋಜನೆಯನ್ನು ಅಂಬೇಡ್ಕರ್ ರೂಪಿಸಿದರು. ಅಂತೆಯೇ ಹಿರಾಕುಡ್ ಯೋಜನೆಯನ್ನೂ ಸಿದ್ಧಪಡಿಸಿದರು. ಅವರು ಸೋನೆ ನದಿ ಕಣಿವೆ ಯೋಜನೆಯ ರೂಪುರೇಷೆಯನ್ನೂ ಸಿದ್ಧಪಡಿಸಿದರು. 1945ರಲ್ಲಿ ಆಗ ಕಾರ್ಮಿಕ ಪ್ರತಿನಿಧಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ, ಮಹಾನದಿ ನಿಯಂತ್ರಣದ ಲಾಭದ ಪ್ರಯೋಜನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಸಲುವಾಗಿ ವಿವಿಧೋದ್ದೇಶ ಯೋಜನೆಯಾಗಿ ಇದನ್ನು ಪರಿವರ್ತಿಸಿದರು.

ಸರಾಯ್ ಮಂಡಳಿಯಲ್ಲಿ ಕಾರ್ಮಿಕ ಪ್ರತಿನಿಧಿಯಾಗಿದ್ದ ಅಂಬೇಡ್ಕರ್ ಅವರ ಕಾರಣದಿಂದಾಗಿ, ಭಾರತಕ್ಕೆ ದೊಡ್ಡ ಅಣೆಕಟ್ಟು ಯೋಜನೆಗಳ ತಂತ್ರಜ್ಞಾನವನ್ನು ಪರಿಚಯಿಸಲು ಸಾಧ್ಯವಾಯಿತು. ನೀವು ಯಾವುದೇ ಶಾಲಾ ವಿದ್ಯಾರ್ಥಿಗಳನ್ನು, ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ ಹಾಗೂ ಸೋನೆ ನದಿ ಕಣಿವೆ ಯೋಜನೆ ಎಲ್ಲಿದೆ ಅಥವಾ ಯಾರು ಉದ್ಘಾಟಿಸಿದರು ಎಂದು ಪ್ರಶ್ನಿಸಿದರೆ, ಈ ಯೋಜನೆಗಾಗಿ ಏನೂ ಮಾಡದಿದ್ದರೂ, ನೆಹರೂ- ಗಾಂಧಿ ಕುಟುಂಬದ ಸದಸ್ಯರ ಹೆಸರನ್ನಷ್ಟೇ ಉತ್ತರವಾಗಿ ನೀಡುತ್ತಾರೆ. ಉದಾಹರಣೆಗೆ ವಿಕಿಪೇಜ್‌ನಲ್ಲಿ ಕೂಡಾ ಈ ಯೋಜನೆಗಳ ಬಗ್ಗೆ ವೈಯಕ್ತಿಕ ಆಸಕ್ತಿ ವಹಿಸಿದವರು ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಡಾ.ಬಿ.ಸಿ.ರಾಯ್ ಹಾಗೂ ಬಿಹಾರದ ಸಿಎಂ ಆಗಿದ್ದ ಕೃಷ್ಣ ಸಿನ್ಹಾ ಎಂಬ ಮಾಹಿತಿ ಸಿಗುತ್ತದೆ. ನಾವು ಶಾಲೆಯಲ್ಲಿ ಕಲಿಯುವಾಗ ಕೂಡಾ ಈ ಯೋಜನೆಗಳ ಬಗ್ಗೆ ಪಾಠಗಳಿದ್ದರೂ, ಅದರಲ್ಲಿ ಅಂಬೇಡ್ಕರ್ ಅವರ ಹೆಸರಿನ ಉಲ್ಲೇಖವೂ ಇರಲಿಲ್ಲ.

1930ರ ಬಳಿಕ ಇಂಜಿನಿಯರಿಂಗ್ ಪದ್ಧತಿಯನ್ನು ಜಾರಿಗೊಳಿಸಲಾಯಿತು. ಇದರಲ್ಲಿ ಒಂದು ನದಿಪಾತ್ರದ ಜಲ ಜಲಸಮಗ್ರತೆಯನ್ನು ಅಧ್ಯಯನ ಮಾಡಲು ಇಡೀ ಕಣಿವೆ ಪ್ರದೇಶವನ್ನು ಜಲಸಂಪನ್ಮೂಲ ಅಭಿವೃದ್ಧಿಯ ಘಟಕವಾಗಿ ಪರಿಗಣಿಸಲಾಗಿತ್ತು. ಹೀಗೆ ವಿವಿಧೋದ್ದೇಶ ಯೋಜನೆಗಳನ್ನು ರೂಪಿಸಿದ ಕೀರ್ತಿ ನೀರಾವರಿ ಹಾಗೂ ವಿದ್ಯುತ್ ವಿಭಾಗದ ಮುಖ್ಯಸ್ಥರಾಗಿದ್ದ ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಇಂಥ ಬೃಹತ್ ಪ್ರಮಾಣದ ಯೋಜನೆಗಳು ದೇಶಕ್ಕೆ ವ್ಯಾಪಕವಾಗಿ ಬೇಕಾಗಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ತಾಂತ್ರಿಕ ಅನುಭವ ಸಮರ್ಪಕವಾಗಿಲ್ಲ ಹಾಗೂ ಭಾರತಕ್ಕೆ ಸಾಕಷ್ಟು ಇಲ್ಲ ಎನ್ನುವುದು ಅಂಬೇಡ್ಕರ್ ಅವರ ಚಿಂತನೆ. ಈ ಕಾರಣದಿಂದಲೇ ಅವರು ಕೇಂದ್ರೀಯ ಜಲ ಮಾರ್ಗ ಹಾಗೂ ನೀರಾವರಿ ಸಮಿತಿಯನ್ನು 1944ರಲ್ಲಿ ರಚಿಸಿದರು. ಬಳಿಕ ಇದಕ್ಕಾಗಿ 1945ರ ಎಪ್ರಿಲ್ 4ರಂದು ವೈಸರಾಯ್ ಸಮಿತಿಯೂ ರಚನೆಯಾಯಿತು. ಈ ಮೂಲಕ ಅಂಬೇಡ್ಕರ್ ಅವರು ದೇಶಕ್ಕೆ ಪ್ರಬಲವಾದ ತಾಂತ್ರಿಕ ಸಂಸ್ಥೆಯನ್ನು ರಚಿಸುವಲ್ಲಿ ಗಣನೀಯ ಕೊಡುಗೆ ನೀಡಿದರು.

ಇಂದು ನಮ್ಮ ಮನೆಗಳು ಪ್ರಖರವಾಗಿ ಬೆಳಗುತ್ತಿವೆ ಹಾಗೂ ಹೊಲ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿವೆ ಎಂದಾದರೆ ಅದಕ್ಕೆ ಅಂಬೇಡ್ಕರ್ ಅವರ ದೂರದೃಷ್ಟಿಯ ಇಂಥ ಯೋಜನೆಗಳು ಕಾರಣ. ಇದು ದೇಶದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿಯೂ ರೂಪುಗೊಂಡಿದೆ. ಭಾರತದ ಅಭಿವೃದ್ಧಿ ಹಾಗೂ ಜಲ ಸಂಪನ್ಮೂಲ ನಿರ್ವಹಣೆಯಂತಹ ಪರಿಕಲ್ಪನೆಗಳು ಕೂಡಾ ಅಂಬೇಡ್ಕರ್ ಚಿಂತನೆಯ ಫಲ. ಅಂಬೇಡ್ಕರ್ ಅವರು ಭಾರತದ ಅಭಿವೃದ್ಧಿಗೆ ನೈಸರ್ಗಿಕ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬ ಚಿಂತನೆ ಹೊಂದಿದ್ದರು. ಅಂಥ ಚಿಂತನೆ ಇಲ್ಲದಿದ್ದರೆ ಇಂದು ಭಾರತದ ವಿದ್ಯುತ್ ಸ್ಥಿತಿ ಹೇಗಿರುತ್ತಿತ್ತು ಎಂದು ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ಜಾತಿಪದ್ಧತಿ ಕೇವಲ ಶ್ರಮ ವಿಭಜನೆಗೆ ಮಾತ್ರ ಕಾರಣವಾಗಿಲ್ಲ; ಶ್ರಮಿಕರ ವಿಭಜನೆಗೂ ಇದು ಕಾರಣವಾಗಿದೆ ಎನ್ನುವುದನ್ನು ಅಂಬೇಡ್ಕರ್ ಬಲವಾಗಿ ನಂಬಿದ್ದರು. ಇದರ ಆಧಾರದಲ್ಲಿ ಅಸಮಾನತೆ ಇದೆ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು. ಅಂಬೇಡ್ಕರ್ ಅವರು ತಮ್ಮ ''ಅನ್ಹಿಲೇಶನ್ ಆಫ್ ಕಾಸ್ಟ್'' ಎಂಬ ಕೃತಿ ಹಾಗೂ ಭಾಷಣಗಳಲ್ಲಿ, ''ಇತರ ಯಾವುದೇ ದೇಶಗಳಲ್ಲೂ ಶ್ರಮ ವಿಭಜನೆ ಹಾಗೂ ಕಾರ್ಮಿಕರ ಗ್ರೇಡಿಂಗ್ ಪದ್ಧತಿ ಇಲ್ಲ. ಜಾತಿ ವ್ಯವಸ್ಥೆಯನ್ನು ವಿರೋಧಿಸಲು ಇದು ಕೂಡಾ ಒಂದು ಪ್ರಮುಖ ಅಂಶ. ಇಂತಹ ಶ್ರಮ ವಿಭಜನೆ ಕೂಡಾ ಸ್ವಯಂಪ್ರೇರಿತವಲ್ಲ. ಇದು ಸಹಜ ಮನೋಪ್ರವೃತ್ತಿಗೆ ಅನುಗುಣವಾಗಿಲ್ಲ, ಒಬ್ಬ ತನ್ನ ಸ್ವಂತ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಸಾಮಾಜಿಕ ಹಾಗೂ ವೈಯಕ್ತಿಕ ಸಾಮರ್ಥ್ಯ ಮಾನದಂಡವಾಗಬೇಕು.

ಆದರೆ ಜಾತಿ ಪದ್ಧತಿಯಲ್ಲಿ ಈ ವ್ಯವಸ್ಥೆಯನ್ನು ಉಲ್ಲಂಘಿಸಲಾಗಿದೆ. ಇಲ್ಲಿ ಕೆಲ ವರ್ಗಗಳ ಮೇಲೆ ವೃತ್ತಿಯನ್ನು ಮೊದಲೇ ಹೇರಲಾಗುತ್ತದೆ. ಆತ ಮೂಲಭೂತವಾಗಿ ತರಬೇತಿ ಪಡೆದ ಅಥವಾ ಆತನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡದೇ, ಆತನ ಪೋಷಕರ ಸಾಮಾಜಿಕ ಸ್ಥಿತಿಗತಿಯ ಮಾನದಂಡದಲ್ಲಿ ಆಯ್ಕೆ ಮಾಡಲಾಗುತ್ತದೆ. ಇಂಥ ಜಾತಿಪದ್ಧತಿಯ ವೃತ್ತಿಹಂಚಿಕೆಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ, ಇದು ವಿನಾಶಕಾರಿ. ಕೈಗಾರಿಕೆ ಎನ್ನುವುದು ಚಲನಶೀಲ. ಈ ಕ್ಷೇತ್ರದಲ್ಲಿ ಕ್ಷಿಪ್ರ ಹಾಗೂ ದಿಢೀರ್ ಬದಲಾವಣೆಗಳು ಆಗುತ್ತಿವೆ. ಇಂಥ ಬದಲಾವಣೆಗಳಲ್ಲಿ ವ್ಯಕ್ತಿಗಳು ಕೂಡಾ ತಮ್ಮ ವೃತ್ತಿ ವಿಚಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಂಥ ಬದಲಾವಣೆ ಅವಕಾಶವನ್ನು ವ್ಯಕ್ತಿಗಳಿಗೆ ನೀಡದಿದ್ದರೆ, ತಮ್ಮ ಜೀವನಾಧಾರವನ್ನು ಗಳಿಸಿಕೊಳ್ಳುವುದು ಕೂಡಾ ಅವರಿಗೆ ಮುಂದೊಂದು ದಿನ ಕಷ್ಟಕರವಾಗುತ್ತದೆ. ಈಗಿನ ಜಾತಿಪದ್ಧತಿಯಲ್ಲಿ ಹಿಂದೂಗಳು ವಂಶಪಾರಂಪರ್ಯವಾಗಿ ಯಾವ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೋ, ಆ ಜಾತಿಯ ಯುವಕರು ಬೇರೆ ಉದ್ಯೋಗಗಳನ್ನು ಪಡೆಯಲು ಅವಕಾಶ ಇಲ್ಲ. ಇಂದು ಹಿಂದೂಗಳು ಹೊಸ ಉದ್ಯೋಗ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಾಗದೇ ನರಳುತ್ತಿದ್ದಾರೆ ಎಂದಾದರೆ ಅದಕ್ಕೆ ಜಾತಿ ಪದ್ಧತಿ ಕಾರಣ. ಆತನಿಗೆ ಉದ್ಯೋಗ ಬದಲಾವಣೆಗೆ ಅವಕಾಶ ನೀಡದೇ, ಈ ದೇಶದಲ್ಲಿ ಜಾತಿ ಎನ್ನುವುದು ನಿರುದ್ಯೋಗಕ್ಕೆ ಮೂಲಕ ಕಾರಣವಾಗಿದೆ. ಇದು ಜಾತಿಪದ್ಧತಿ ಆಧರಿತ ಶ್ರಮ ವಿಂಗಡಣೆಯ ಇನ್ನೊಂದು ದೊಡ್ಡ ದೋಷ. ಇಲ್ಲಿ ಆಯ್ಕೆಗೆ ಅನುಗುಣವಾಗಿ ಶ್ರಮ ವಿಭಜನೆಯಾಗದೇ, ವೈಯಕ್ತಿಕ ಭಾವನಾತ್ಮಕ ಅಂಶಗಳು, ವೈಯಕ್ತಿಕ ಆದ್ಯತೆಗೆ ಇಲ್ಲಿ ಅವಕಾಶವಿಲ್ಲ. ಇದು ದೈವದತ್ತ ಎಂಬ ಹುಸಿನಂಬಿಕೆಗೆ ಅನುಗುಣವಾಗಿದೆ.''


ಭಾರತದ ಮೊಟ್ಟಮೊದಲ ಮೇ ದಿನದ ನೆನಪು
ಭಾರತದಲ್ಲಿ ಮೇ ದಿನ (ಕಾರ್ಮಿಕ ದಿನಾಚರಣೆ) ಮೊಟ್ಟಮೊದಲ ಬಾರಿಗೆ ಆಚರಣೆಯಾದದ್ದು ಒಂದು ಸ್ಮರಣೀಯ ಘಟನೆ. 1923ರಲ್ಲಿ ಮದ್ರಾಸ್‌ನಲ್ಲಿ ಮೊಟ್ಟಮೊದಲ ಬಾರಿಗೆ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ಥಾನ್, ಮೇ ದಿನಾಚರಣೆ ಹಮ್ಮಿಕೊಂಡಿತು. ಎರಡು ಕಡೆಗಳಲ್ಲಿ ಇದನ್ನು ಆಚರಿಸಲಾಯಿತು. ಒಂದು ಮದ್ರಾಸ್ ಹೈಕೋರ್ಟ್ ಎದುರಿನ �

share
ವಾರ್ತಾಭಾರತಿ
ವಾರ್ತಾಭಾರತಿ
Next Story
X