ಆರ್‌ಟಿಐ ಆಯುಕ್ತರಾಗಿ ನರಸಿಂಹರಾಜು

ನಾಳೆ ಪ್ರಮಾಣ ವಚನ
ಬೆಂಗಳೂರು, ಎ. 30: ರಾಜ್ಯ ಮಾಹಿತಿ ಹಕ್ಕು ಆಯೋಗದ ನೂತನ ಆಯುಕ್ತರಾಗಿ ನೇಮಕವಾಗಿರುವ ಡಿ.ಎನ್.ನರಸಿಂಹರಾಜು ಅವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅಧಿಕಾರ ಪ್ರಮಾಣ ವಚನವನ್ನು ಮೇ 2ರ ಬೆಳಗ್ಗೆ 10ಗಂಟೆಗೆ ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೋಧಿಸಲಿದ್ದಾರೆ.
ಬೀಳ್ಕೊಡುಗೆ: ಸರಕಾರಿ ಸೇವೆಯಿಂದ ನಿವೃತ್ತರಾದ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನರಸಿಂಹ ರಾಜು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಶುಭ ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಈ ವೇಳೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Next Story





