ಇಂದೇ ಮೊದಲ ಹಂತದ ನೀಟ್: ರದ್ದುಗೊಳಿಸಲು ಸುಪ್ರೀಂ ನಕಾರ

ಹೊಸದಿಲ್ಲಿ, ಎ.30: ನಾಳೆ ನಡೆಯಲಿರುವ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ತನ್ನ ಗುರುವಾರದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ವಿದ್ಯಾರ್ಥಿಗಳ ಗುಂಪೊಂದಕ್ಕೆ ನಿಗದಿಯಂತೆಯೇ ಪರೀಕ್ಷೆ ನಡೆಯಲಿದೆಯೆಂದು ಅದು ಸ್ಪಷ್ಟಪಡಿಸಿದೆ.
ತನ್ನ ಮೊದಲ ಆದೇಶಕ್ಕೆ ತಿದ್ದುಪಡಿ ತರಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಪ್ರೌಢ ಶಿಕ್ಷಣದ ಕೇಂದ್ರೀಯ ಮಂಡಳಿ ಹಾಗೂ ರಾಜ್ಯ ಮಂಡಳಿಗಳ ಪಠ್ಯಕ್ರಮಗಳಲ್ಲಿ ವ್ಯತ್ಯಾಸವಿರುತ್ತದೆ. ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯವಿಲ್ಲ ಎಂಬುದು ಆದೇಶ ಬದಲಾಯಿಸಬೇಕೆನ್ನುವವರ ವಾದವಾಗಿದೆ.
ಮೊದಲ ಹಂತದ ನೀಟ್ ಪರೀಕ್ಷೆ ಮೇ 1ರಂದು ನಡೆಯಲಿದ್ದು ಸುಮಾರು 6.5ಲಕ್ಷ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. 2ನೆ ಹಂತದ ನೀಟ್ ಪರೀಕ್ಷೆ ಜು.24ಕ್ಕೆ ನಿಗದಿಯಾಗಿದ್ದು, 2.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎರಡೂ ಹಂತಗಳ ಫಲಿತಾಂಶ ಆ.17ರಂದು ಪ್ರಕಟವಾಗಲಿದೆ. ನೀಟ್ ಆಧಾರಿತ ಪ್ರವೇಶ ಪ್ರಕ್ರಿಯೆ ಸೆ.30ರೊಳಗೆ ಕೊನೆಗೊಳ್ಳಲಿದೆ.
Next Story





