ಮುಂಬೈಯಲ್ಲಿ ಕಟ್ಟಡ ಕುಸಿದು ಆರು ಸಾವು
ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ
ಮುಂಬೈ, ಎ.30: ಇಲ್ಲಿನ ಗ್ರಾಂಟ್‌ರೋಡ್‌ನ ಕಾಮಾಟಿಪುರದಲ್ಲಿ ಎರಡು ಮಹಡಿಗಳ ಕಟ್ಟಡವೊಂದು ಇಂದು ಮಧ್ಯಾಹ್ನ 2 ಗಂಟೆಯ ವೇಳೆ ಕುಸಿದು 6 ಮಂದಿ ಸಾವಿಗೀಡಾಗಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ.
ಅವಶೇಷಗಳಡಿಯಿಂದ ಐವರನ್ನು ರಕ್ಷಿಸಲಾಗಿದೆ ಯೆಂದು ಅಗ್ನಿ ಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೆಜೆ ಹಾಗೂ ನಾಯಕ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದ ಇಬ್ಬರು ಗಾಯಾಳುಗಳು ಕೊನೆಯುಸಿರೆಳೆದಿದ್ದಾರೆ. ಇತರ ಗಾಯಾಳುಗಳ ಸ್ಥಿತಿಯೂ ಚಿಂತಾಜನಕವಾಗಿದೆಯೆಂದು ಬಿಎಂಸಿ ವಿಕೋಪ ನಿಯಂತ್ರಣ ಕೊಠಡಿಯ ಅಧಿಕಾರಿಗಳು ಹೇಳಿದ್ದಾರೆ. ಆ ಕಟ್ಟಡದಲ್ಲಿ ಒಂದು ಬಿಯರ್ ಬಾರ್ ಹಾಗೂ ಕಾರ್ಖಾನೆಯಿತ್ತು. ಇನ್ನೂ ಹಲವರು ಅವಶೇಷಗಳಡಿ ಇರುವ ಶಂಕೆಯುದೆಯೆಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ 8 ಅಗ್ನಿ ಶಾಮಕ ವಾಹನ ಹಾಗೂ 3 ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆಯೆಂದು ಅವರು ಹೇಳಿದ್ದಾರೆ.
Next Story





