Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ರೈತರ ಸಮಸ್ಯೆಗಳತ್ತ ಸರಕಾರ ಕಣ್ಣು...

ರೈತರ ಸಮಸ್ಯೆಗಳತ್ತ ಸರಕಾರ ಕಣ್ಣು ತೆರೆಯಲಿ

ಸಿದ್ದಾಪುರದಲ್ಲಿ ಜಿಲ್ಲಾ ರೈತ ಸಂಘದಿಂದ ಧರಣಿ

ವಾರ್ತಾಭಾರತಿವಾರ್ತಾಭಾರತಿ1 May 2016 12:26 AM IST
share
ರೈತರ ಸಮಸ್ಯೆಗಳತ್ತ ಸರಕಾರ ಕಣ್ಣು ತೆರೆಯಲಿ

ಸಿದ್ಧಾಪುರ, ಎ.30: ವಾರಾಹಿ ಯೋಜ ನೆಯೂ ಸೇರಿದಂತೆ ಜಿಲ್ಲೆಯ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳತ್ತ ಸರಕಾರದ ಗಮನ ಸೆಳೆಯಲು ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ರೈತರ ಸಂಘ ಇಂದು ಸಿದ್ದಾಪುರದ ಸತ್ಯಾಗ್ರಹ ಸರ್ಕಲ್‌ನಲ್ಲಿ ದಿನವಿಡೀ ಧರಣಿ, ಸಮಾಲೋಚನಾ ಸಭೆ ನಡೆಸಿತು.
1979-80ರಲ್ಲಿ ಪ್ರಾರಂಭಗೊಂಡ ವಾರಾಹಿ ನೀರಾವರಿ ಯೋಜನೆ ಮೂಲ ಉದ್ದೇಶವಿದ್ದುದು 9.54 ಕೋ.ರೂ. ವೆಚ್ಚದಲ್ಲಿ ಕುಂದಾಪುರ ಮತ್ತು ಉಡುಪಿ ತಾಲೂಕುಗಳ 15,702 ಹೆಕ್ಟೇರ್ ಭೂಮಿಗೆ ನೀರುಣಿಸುವುದು. ಆದರೆ ಜಿಲ್ಲೆಯ ರೈತರ ಇಚ್ಛಾಶಕ್ತಿಗೆ ಸವಾಲಿನಂತೆ ಬೆಳೆದು ನಿಂತಿರುವ ಈ ಯೋಜನೆ 600 ಕೋ. ರೂ. ನುಂಗಿದರೂ ಉದ್ದೇಶಿತ ಗುರಿಯ ಸಮೀಪಕ್ಕೂ ಬಂದಿಲ್ಲ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರತಾಪ್‌ಚಂದ್ರ ಶೆಟ್ಟಿ ನುಡಿದರು.
ಉಡುಪಿ ಜಿಲ್ಲಾ ರೈತ ಸಂಘ ಹಾಗೂ ಜಿಲ್ಲೆಯ ರೈತರ ಒತ್ತಾಸೆಯ ಫಲವಾಗಿ 35 ವರ್ಷಗಳ ಬಳಿಕ ಕಳೆದ ವರ್ಷ 2015ರ ಮೇ 4ರಂದು ಯೋಜನೆ ಉದ್ಘಾಟನೆಗೊಂಡಿತು. ಆದರೆ ಅದಾಗಿ ಒಂದು ವರ್ಷ ಕಳೆಯುತ್ತಾ ಬಂದರೂ ಅಂದು ಸುಮಾರು 48 ಕಿ.ಮೀ. ತನಕ ನೀರು ಹರಿದ ಬಳಿಕ ಇಂದಿನವರೆಗೂ ಯೋಜನೆ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ. ಬದಲಾಗಿ ನೀರು ರೈತರಿಗೆ ತುರ್ತಾಗಿ ಅಗತ್ಯ ಇರುವ ಎಪ್ರಿಲ್‌ನ ಬೇಸಿಗೆಯಲ್ಲಿ ಶಿಖರದಲ್ಲೇ ಕಾಲುವೆಯಲ್ಲಿ ನೀರು ಹಾಯಿಸುವುದನ್ನು ನಿಲ್ಲಿಸಲಾಗಿದೆ. ಇದು ರೈತರಿಗೆ ಆತಂಕ ತಂದಿದೆ ಎಂದರು.
ಗುತ್ತಿಗೆದಾರರಿಗೆ ಅನುಕೂಲ: ಈ ಯೋಜನಾ ಪ್ರದೇಶದಲ್ಲಿ ಹಿತಾಸಕ್ತಿ ಯನ್ನು ಹೊಂದಿರುವ ವಿದ್ಯುತ್ ಉತ್ಪಾದನಾ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಮೂಲ ಯೋಜನೆಯನ್ನೇ ನನೆಗುದಿಗೆ ಹಾಕುವ ಮೂಲಕ ಕ್ರಮೇಣ ಯೋಜನೆಯನ್ನೇ ನಿಷ್ಪ್ರಯೋಜಕ ಎಂದು ಸ್ಥಗಿತಗೊಳಿಸುವ ಸೂಚನೆಗಳು ಸಿಗಲಾರಂಭಿಸಿವೆ. ರಾಜ್ಯ ಸರಕಾರ ರೈತರ ಹಿತಾಸಕ್ತಿಯನ್ನು ರಕ್ಷಿ ಸಬೇಕೇ ಹೊರತು ಗುತ್ತಿಗೆದಾರರ ಒಳಿತನು ್ನ ರಕ್ಷಿಸಲು ಮುಂದಾಗಬಾರದು ಎಂದರು.
ಮೂಲ ಯೋಜನೆಯನ್ವಯ ಬಲ ದಂಡೆ ಕಾಲುವೆ ನೀರು ಹರಿಸಬೇಕಿ ರುವ ಗ್ರಾಮಗಳಾದ ಉಳ್ಳೂರು, ಸಿದ್ದಾಪುರ, ಶಂಕರನಾರಾಯಣ, ಕುಳ್ಳಂಜೆ, ಅಂಪಾರು, ಕಾವ್ರಾಡಿ, ಹಳ್ನಾಡು (ಒಟ್ಟು 4,920 ಎಕರೆ), ಎಡದಂಡೆ ಕಾಲುವೆ ನೀರು ಹರಿ ಯಬೇಕಾದ ಗ್ರಾಮಗಳಾದ ಹಾಲಾಡಿ, 76, ಕುಳ್ಳಂಜೆ, ಕಕ್ಕುಂಜೆ, ವಂಡಾರು, ಬಿಲ್ಲಾಡಿ, ಶಿರಿಯಾರ, ಹಾಲಾಡಿ 28, ಹಾರ್ದಳ್ಳಿ-ಮಂಡಳ್ಳಿ, ಹಳ್ಳಾಡಿ- ಹರ್ಕಾಡಿ, ಯಡಾಡಿ- ಮತ್ಯಾಡಿ, ಮೊಳಹಳ್ಳಿ, ಹೆಸ್ಕತ್ತೂರು, ಹೊಂಬಾಡಿ- ಮೊಂಡಾಡಿ, ಕೂರ್ಗಿ, ಬೇಳೂರು, ಕೆದೂರು, ಜಪ್ತಿ, ಕಂದಾವರ, ಕಾಳಾವರ, ವಕ್ವಾಡಿ, ಆಸೋಡು, ಕೋಣಿ, ತೆಕ್ಕಟ್ಟೆ, ಬಳ್ಕೂರು, ಹಂಗಳೂರು, ಕೋಟೇಶ್ವರ, ಬಸ್ರೂರು, ಆನಗಳ್ಳಿ (ಒಟ್ಟು 18,626 ಎಕರೆ) ಹಾಗೂ ಏತ ನೀರಾವರಿ ಹರಿಯಬೇಕಾದ ಗ್ರಾಮಗಳಾದ ಹಾಲಾಡಿ 76, ಆವರ್ಸೆ, ಬಿಲ್ಲಾಡಿ, ಅಚ್ಲಾಡಿ, ಕಾವಡಿ, ಶಿರಿಯಾರ, ಶಿರೂರು, ವಂಡಾರು, ಹೆಗ್ಗುಜಂ, ನಡೂರು, ಯಡ್ತಾಡಿ (ಒಟ್ಟು 6,730.74 ಎಕರೆ) ಗ್ರಾಮಗಳು ನೀರಿನಿಂದ ವಂಚಿತವಾಗಿವೆ. ಈ ಯೋಜನಾ ಪ್ರದೇಶಗಳ ರೈತರು ಪಕ್ಷಭೇದ ಮರೆತು ಒಗ್ಗಟ್ಟಾಗಿ ಚರ್ಚಿಸಿ ಮುಂದುವರಿಯಬೇಕು ಎಂದರು.
ಈ ಧರಣಿ ಹಾಗೂ ಸಮಾಲೋಚನಾ ಸಭೆಯಲ್ಲಿ ಭಾಕಿಸಂನ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ, ಉಮೇಶ್ ಶೆಟ್ಟಿ, ಮಲ್ಯಾಡಿ ಜಯರಾಮ ಶೆಟ್ಟಿ ಮುಂತಾದ ವರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X