ಇರಾನ್: 2ನೆ ಸುತ್ತಿನ ಚುನಾವಣೆಯಲ್ಲಿ ಅಧ್ಯಕ್ಷರ ಮಿತ್ರಪಕ್ಷಗಳಿಗೆ ಮುನ್ನಡೆ
ಟೆಹರಾನ್ (ಇರಾನ್), ಎ. 30: ಇರಾನ್ ಸಂಸದೀಯ ಚುನಾವಣೆಯ ಎರಡನೆ ಸುತ್ತಿನಲ್ಲಿ ಅಧ್ಯಕ್ಷ ಹಸನ್ ರೂಹಾನಿಯೊಂದಿಗೆ ಮೈತ್ರಿ ಹೊಂದಿರುವ ಸುಧಾರಣಾವಾದಿ ಹಾಗೂ ಉದಾರವಾದಿ ರಾಜಕಾರಣಿಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಚುನಾವಣೆ ನಡೆದ 68 ಸ್ಥಾನಗಳ ಪೈಕಿ ಕನಿಷ್ಠ 33 ಸ್ಥಾನಗಳನ್ನು ರೂಹಾನಿಯ ಮಿತ್ರ ಪಕ್ಷಗಳು ಗೆದ್ದಿವೆ. ಅದೇ ವೇಳೆ, ಕನ್ಸರ್ವೇಟಿವ್ ಮೈತ್ರಿಕೂಟದಿಂದ 21 ಸಂಸದರು ಆಯ್ಕೆಯಾಗಿದ್ದಾರೆ.
290 ಸದಸ್ಯ ಬಲದ ಸಂಸತ್ತಿಗೆ ಫೆಬ್ರವರಿ 26ರಂದು ಚುನಾವಣೆ ನಡೆದಿತ್ತು. ಆದರೆ, ಆ ಚುನಾವಣೆಯಲ್ಲಿ 68 ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತ ಪಡೆದು ಯಾರೂ ಗೆದ್ದಿರಲಿಲ್ಲ. ಹಾಗಾಗಿ, ಶುಕ್ರವಾರ ಎರಡನೆ ಸುತ್ತಿನ ಮತದಾನವನ್ನು ನಡೆಸಲಾಗಿತ್ತು.
33 ಕ್ಷೇತ್ರಗಳನ್ನು ರೂಹಾನಿ ಮಿತ್ರಪಕ್ಷಗಳು ಗೆದ್ದಿವೆ. ಉಳಿದ 14 ಸ್ಥಾನಗಳನ್ನು ಪಕ್ಷೇತರರು ಗೆದ್ದುಕೊಂಡಿದ್ದಾರೆ.
Next Story





