ಅಪಾಯ! ಇದು ಶ್ವಾಸಕೋಶದ ಕಾಯಿಲೆಯ ಟೈಮ್ ಬಾಂಬ್

ಶ್ವಾಸಕೋಶಗಳು ನಿಮ್ಮ ರಕ್ತನಾಳಗಳಿಗೆ ಆಮ್ಲಜನಕವನ್ನು ಹರಿಸುತ್ತದೆ. ಹಾಗೆ ನಿಮ್ಮೆಲ್ಲಾ ಅವಯವಗಳು ಚೆನ್ನಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಅವುಗಳಿಗೆ ಹಾನಿಯಾದಲ್ಲಿ ಗಂಭೀರ ಸಮಸ್ಯೆಯಾಗಲಿದೆ. ಶ್ವಾಸಕೋಶಗಳಿಗೆ ಗಂಭೀರವಾದ ಸಮಸ್ಯೆ ಎಂದದೆ ಇಂಟರ್ಸ್ಟೆನಿಯಲ್ ಲಂಗ್ ಡಿಸೀಸ್ (ಐಎಲ್‌ಡಿ). ಇದು ದೇಹದ ನಿರ್ಣಾಯಕ ಕಾರ್ಯಕ್ಕೇ ಸಮಸ್ಯೆ ತರಬಹುದು.
ಮೊದಲಿಗೆ ಶ್ವಾಸಕೋಶದ ಕಾರ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಎರಡೂ ಶ್ವಾಸಕೋಶಗಳಿಗೆ ವಿಸ್ತರಣೆಗೊಂಡ ಇಂಟರ್ಸ್ಟಿಟಿಯಂ ಎನ್ನುವ ಲೇಸ್ ನಂತಹ ಜಾಲವೊಂದು ಇದೆ. ಅದು ಪ್ರಾಥಮಿಕವಾಗಿ ಅಲ್ವೆಯೊಲಿ ಎನ್ನುವ ಮೈಕ್ರೋಸ್ಕೋಪಿಕ್ ಏರ್ ಸಾಕ್ಸ್ ಗೆ ಬಲ ನೀಡುತ್ತದೆ. ಇಂಟರ್ಸ್ಟಿಟಿಯಂ ಮೂಲಕ ಸಣ್ಣದಾದ ರಕ್ತ ನಾಳಗಳು ಚಾಚಿಕೊಂಡಿವೆ. ಅವುಗಳು ಆಮ್ಲಜನಕವನ್ನು ರಕ್ತನಾಳಗಳಿಗೆ ಪಂಪ್ ಮಾಡುತ್ತವೆ. ಅಲ್ವೆಯೊಲಿ ಮೂಲಕ ಆಮ್ಲಜನಕವು ಕ್ಯಾಪಿಲರಿಗಳ ಮೂಲಕ ದೇಹಕ್ಕೆ ಹರಿಯುತ್ತದೆ. ಐಎಲ್‌ಡಿ ಕ್ಯಾಪಿಲರಿ ಮೆಂಬ್ರೇನನ್ನು ದಪ್ಪನಾಗಿಸುತ್ತದೆ ಮತ್ತು ಫೈಬ್ರೋಸ್ ಮಾಡುತ್ತದೆ. ಹಾಗೆಯೇ ಆಮ್ಲಜನಕವು ಅಲ್ವೆಯೊಲಿ ಮತ್ತು ಕ್ಯಾಪಿಲರಿಗಳಿಂದ ಪ್ರಸಾರವಾಗುವುದನ್ನು ಕಡಿಮೆ ಮಾಡುತ್ತದೆ.
ಇಂಟರ್ಸ್ಟಿಶಿಯಲ್ ಲಂಗ್ ಡಿಸೀಸ್ ಒಂದು ಮಾರಕ ಸ್ಥಿತಿಯಾಗಿದೆ. ಅದನ್ನು ಶ್ವಾಸಕೋಶಕ್ಕೆ ನಷ್ಟವುಂಟು ಮಾಡುವ ರೋಗಗಳ ಗುಂಪಿಗೆ ಸೇರಿಸಲಾಗಿದೆ. ಅದನ್ನು ಪಲ್ಮನರಿ ಫೈಬ್ರೋಸಿಸ್ ಎಂದೂ ಕರೆಯಲಾಗಿದೆ. ಸೈಕೊಸೆನ್ಸಿಟಿವಿಟಿ ನ್ಯುಮೊನಿಟಿಸ್, ಇಡಿಯೊಪ್ಯಾಥಿಕ್ ಪಲ್ಮನರಿ ಫೈಬ್ರೋಸಿಸ್, ಕನೆಕ್ಟಿವ್ ಟಿಶ್ಯೂ ಡಿಸೀಸ್ ಎಲ್‌ಐಡಿ ಮತ್ತು ಸಾರ್ಕೋಐಡೊಸಿಸ್ ಕೆಲವು ಸಾಮಾನ್ಯ ಐಎಲ್‌ಡಿಗಳು. ಐಎಲ್‌ಡಿಗಳು ಶ್ವಾಸಕೋಶದ ಟಿಶ್ಯೂಗಳಿಗೆ ಗಾಯ ಮಾಡುತ್ತವೆ. ಅವುಗಳು ಆಮ್ಲಜನಕವನ್ನು ರಕ್ತನಾಳಗಳಿಗೆ ಹರಡುವ ಸಾಮರ್ಥ್ಯ ಕಳೆದುಕೊಳ್ಳುವಂತೆ ಮಾಡುತ್ತದೆ. ಃಆಗೆ ಮೆದುಳು ಮತ್ತು ಇತರ ಅವಯವಗಳ ಕಾರ್ಯಗಳ ಮೇಲೆ ಪರಿಣಾಮವಾಗುತ್ತದೆ. ಉಸಿರಾಡಲು ಕಷ್ಟವಾಗುತ್ತದೆ. ಒಮ್ಮೆ ಶ್ವಾಸಕೋಶಕ್ಕೆ ಹಾನಿಯಾದರೆ ಸರಿಪಡಿಸಲು ಸಾಧ್ಯವಿಲ್ಲ.
ಸಾಮಾನ್ಯ ಚಿಹ್ನೆಗಳು ಒಣ ಕೆಮ್ಮು ಮತ್ತು ನಡೆಯುವಾಗ, ಓಡುವಾಗ ಅಥವಾ ಮೆಟ್ಟಿಲು ಹತ್ತುವಾಗ ಉಸಿರಾಡಲು ಕಷ್ಟವಾಗುವುದು. ಸಾಮಾನ್ಯವಾಗಿ ಈ ಚಿಹ್ನೆಗಳು ನಿಧಾನವಾಗಿ ಬೆಳೆಯುತ್ತವೆ.
ರೋಗ ಪತ್ತೆ ಕಷ್ಟವೇಕೆ?
ಮುಂಬೈನ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪಲ್ಮನರಿ ವೈದ್ಯ ಇಲಾಖೆಯ ಮುಖ್ಯಸ್ಥ ಡಾ ಸಲೀಲ್ ಬೇಂದ್ರೆ ಪ್ರಕಾರ ಐಎಲ್‌ಡಿ ಒಣ ಕೆಮ್ಮಿನ ಚಿಹ್ನೆಗಳನ್ನು ಹೊಂದಿರುತ್ತದೆ. ಹೀಗಾಗಿ ರೋಗಿಗಳು ಹೆಚ್ಚು ಚಿಂತಿಸದೆ ಅಲಕ್ಷಿಸುತ್ತಾರೆ. ಚಿಹ್ನೆಗೆ ತಕ್ಕ ಚಿಕಿತ್ಸೆ ತೆಗೆದುಕೊಳ್ಳುತ್ತಾರೆ. ನಂತರ ಉಸಿರಾಡಲು ಕಷ್ಟವಾಗುತ್ತದೆ. ಬಹಳಷ್ಟು ಕಾಲ ಈ ರೋಗ ಮತ್ತು ಅಲರ್ಜಿಗೆ ಸಂಬಂಧಿಸಿದ ಕ್ರೋನಿಕ್ ಅಬ್ಸಟ್ರಕ್ಟಿವ್ ಲಂಗ್ ಡಿಸೀಸ್ ನಡುವೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಹೀಗಾಗಿ ರೋಗಿ ತಡವಾಗಿ ವೈದ್ಯರ ಬಳಿ ಬರುವ ಕಾರಣ ರೋಗ ಬಲಿತಿರುತ್ತದೆ. ಸಾಮಾನ್ಯವಾಗಿ ಮಾಲಿನ್ಯ ಮತ್ತು ಸೋಂಕಿನಿಂದ ಬರುವ ಶ್ವಾಸಕೋಶ ಸಮಸ್ಯೆಯೆಂದು ವೈದ್ಯರಿಗೂ ರೋಗ ಅರಿವಿಗೆ ಬಾರದಿರಬಹುದು.
ಫೋರ್ಟಿಸ್ ಆಸ್ಪತ್ರೆಯ ಪಲ್ಮನೊಲಜಿಸ್ಟ್ ಡಾ ಪ್ರಶಾಂತ್ ಛಾಜೆಡ್ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಪ್ರಮುಖ ಅಧ್ಯಯನಗಳು ಮತ್ತು ಚಿಕಿತ್ಸೆಗಳು ಈ ರೋಗಕ್ಕೆ ಬಂದಿವೆ. ಐಎಲ್‌ಡಿ ರೋಗ ಪತ್ತೆ ಮಾಡುವುದು ಸುಲಭವಲ್ಲ. ಅದರ ಉಪ ರೋಗಗಳಿದ್ದು, ಚಿಕಿತ್ಸೆ ಭಿನ್ನವಾಗಿರುತ್ತದೆ. ಉಪರೋಗ ಪತ್ತೆ ಮಾಡಿ ಅದನ್ನು ಆಧರಿಸಿ ಚಿಕಿತ್ಸೆ ನೀಡಬೇಕು. ಕುಟುಂಬಕ್ಕೆ ಚಿಕಿತ್ಸೆ ಬಗ್ಗೆ ತಿಳಿದಿರಬೇಕು
ಕೆಲವು ಐಎಲ್‌ಡಿಗಳು ವೇಗವಾಗಿ ಬೆಳೆದರೆ, ಇನ್ನು ಕೆಲವು ನಿಧಾನಗತಿಯಲ್ಲಿ ಬೆಳೆಯುತ್ತವೆ.
ಎದೆಯ ಎಕ್ಸರೇ ಪರೀಕ್ಷೆ, ಸಿಟಿ ಸ್ಕಾನ್ ಜೊತೆಗೆ ಶ್ವಾಸಕೋಶ ಕಾರ್ಯ ಪರೀಕ್ಷೆಗಳೂ ರೋಗ ಪತ್ತೆಗೆ ಬೇಕು. 6 ನಿಮಿಷ ನಡಿಗೆ ಪರೀಕ್ಷೆಯೂ ಇದೆ. ರೋಗಿಯನ್ನು 6 ನಿಮಿಷ ನಡೆಸಿ ಆಮ್ಲಜನಕ ಕಡಿತವಾಗುವುದನ್ನು ಪರೀಕ್ಷಿಸಲಾಗುವುದು.
ಪಾರಿವಾಳದ ಹಿಕ್ಕೆಗಳ ಸಮಸ್ಯೆ
ಸೈಕೋಸೆನ್ಸಿಟಿವಿಟಿ ನ್ಯುಮೊನಿಟಿಸ್ ಮುಖ್ಯವಾಗಿ ಪಾರಿವಾಳದ ಹಿಕ್ಕೆಗಳಿಂದ ಉಂಟಾಗುತ್ತದೆ. ಮುಖ್ಯವಾಗಿ ನಗರಗಳಲ್ಲಿ ಪಾರಿವಾಳಗಳ ಹಿಕ್ಕೆಯು ಉಸಿರಿನ ಜೊತೆಗೆ ಹೋದಲ್ಲಿ ಗಂಭೀರ ಪ್ರತಿಕ್ರಿಯೆ ಬರುತ್ತದೆ. ಶ್ವಾಸಕೋಶಕ್ಕೆ ಗಾಯವಾಗುತ್ತದೆ. ಕೆಲವೊಂದು ಹೊಗೆ, ಫಂಗಸ್ ಮತ್ತು ಪೈಂಟಿಗೂ ಹೈಪರ್ ಸೆನ್ಸಿಟಿವ್ ಇರಬಹುದು. ನಾನು ರೋಗಿಗಳಿಗೆ ತಮ್ಮ ಮನೆ ಸುತ್ತ ಪಾರಿವಾಳ ಇಲ್ಲದಂತೆ ಗಮನಹರಿಸಲು ಹೇಳುತ್ತೇನೆ. ಪಾರಿವಾಳಗಳಿಗೆ ಆಹಾರ ಕೊಡದಿರಲು ಹೇಳುತ್ತೇನೆ ಎನ್ನುತ್ತಾರೆ ಡಾ ಚಾಜೆಡ್.
ಕೃಪೆ: http://timesofindia.indiatimes.com







