ಮೃತ ಮುಹಮ್ಮದ್ ಸೈಫಾನ್ ಮನೆಗೆ ಯು.ಟಿ. ಖಾದರ್ ಭೇಟಿ
 123.jpg)
ಮಂಗಳೂರು, ಮೇ 1: ಉಳ್ಳಾಲ ದರ್ಗಾ ಭೇಟಿ ನೀಡಿದ ಸಚಿವ ಯು.ಟಿ. ಖಾದರ್ ನಂತರ ಉಳ್ಳಾಲದಲ್ಲಿ ದುಷ್ಕರ್ಮಿಗಳ ತಲವಾರು ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟ ಮುಹಮ್ಮದ್ ಸೈಫಾನ್ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು.
ಈ ಸಂದರ್ಭ ಮಾತನಾಡಿದ ಅವರು ಪರಿಸರದಲ್ಲಿ ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡಿದರು. ಮೃತ ಕುಟುಂಬಕ್ಕೆ ಎಲ್ಲಾ ರೀತಿಯಲ್ಲಿ ಪರಿಹಾರ ನೀಡುವ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು. ಈ ಸಂದರ್ಭ ಸ್ಥಳೀಯ ಹಲವರು ಉಪಸ್ಥಿತರಿದ್ದರು.
Next Story





