ಅಫ್ರೀದಿಯನ್ನು ಪಾಕಿಸ್ತಾನದ ಜೈಲಿಂದ ಎರಡೇ ನಿಮಿಷದಲ್ಲಿ ಹೊರತರುವೆ!: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್,ಮೇ 1: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಡೋನಾಲ್ಡ್ ಟ್ರಂಪ್ ವಿವಾದ ಹೇಳಿಕೆಗಳನ್ನು ನೀಡುವುದರಲ್ಲಿ ಸಿದ್ಧ ಹಸ್ತರು. ಟ್ರಂಪ್ ಈಸಲ " ತಾನು ಅಮೆರಿಕದ ಅಧ್ಯಕ್ಷನಾದ ಮೇಲೆ ಉಸಾಮ ಬಿನ್ ಲಾದನ್‌ನನ್ನು ಕೊಲ್ಲಲು ಅಮೆರಿಕದ ಸಿಐಎಗೆ ಸಹಕರಿಸಿದ ಪಾಕಿಸ್ತಾನದ ವೈದ್ಯ ಶಕೀಲ್ ಅಫ್ರಿದಿಯವರನ್ನು ಎರಡೇ ನಿಮಿಷದಲ್ಲಿ ಬಿಡುಗಡೆ ಮಾಡುವೆನು" ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವುದಾಗಿ ವರದಿಗಳು ತಿಳಿಸಿವೆ.
ಟ್ರಂಪ್ ಅಧ್ಯಕ್ಷರಾದ ಮೇಲೆ ಪಾಕಿಸ್ತಾನಕ್ಕೆ ಅಫ್ರಿದಿಯನ್ನು ಬಿಡುಗಡೆಗೊಳಿಸಲು ಹೇಳಲಿದ್ದಾರೆ. ಅಮೆರಿಕ ಪಾಕಿಸ್ತಾನಕ್ಕೆ ಕೋಟ್ಯಂತರ ಡಾಲರ್ ನೆರವು ನೀಡಿರುವುದನ್ನು ನೆನಪಿಸಲಿರುವ ಟ್ರಂಪ್ 2013ರಿಂದ ಪಾಕಿಸ್ತಾನದಲ್ಲಿ ಜೈಲುಪಾಲಾಗಿರುವ ಅಫ್ರಿದಿಯನ್ನು ಬಿಡುಗಡೆಗೊಳಿಸಲು ಸೂಚಿಸಲಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಅಫ್ರಿದಿ ಅಮೆರಿಕದ ಸಿಐಎಗೆ ಲಾದೆನ್‌ನ್ನು ಪತ್ತೆಹಚ್ಚಲು ನೆರವಾದ ತಪ್ಪಿತಸ್ಥ ಎಂದು ಪಾಕಿಸ್ತಾನದ ಜೈಲಿಗೆ ದೂಡಲಾಗಿದೆ.
Next Story





