ಎರಡು ವಾರಗಳ ಬಳಿಕ ಈಕ್ವೆಡಾರ್ ಭೂಕಂಪದಿಂದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 72 ವರ್ಷದ ವೃದ್ಧನ ರಕ್ಷಣೆ

ಕ್ವಿಟೋ, ಮೇ 1: ಎರಡು ವಾರಗಳ ಹಿಂದೆ ಈಕ್ವೆಡಾರ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮವಾಗಿ ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 72 ವರ್ಷದ ವೃದ್ಧರೊಬ್ಬರನ್ನು ಎರಡು ವಾರಗಳ ಬಳಿಕ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಶನಿವಾರ ಈಕ್ವೆಡಾರ್ನ ಮನಬಿ ಪ್ರಾಂತ್ರದಲ್ಲಿ ರಕ್ಷಣಾ ಕಾರ್ಯಕರ್ತರು ಅವಶೇಷಗಳನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಮಾನುವೆಲ್ ವಾಸ್ಕ್ವೆಜ್ ಎಂಬವರು ಕಟ್ಟಡದದ ಅವಶೇಷಗಳಡಿ ಸಿಲುಕಿರವುದು ಬೆಳಕಿಗೆ ಬಂತು. ರಕ್ಷಣಾ ಕಾರ್ಯಕರ್ತರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.
ಮಾನುವೆಲ್ ಅವರ ಕಾಲ್ಬೆರಳುಗಳು ಕೊಳೆತಿದ್ದು ಮೂತ್ರಿಪಿಂಡದ ವೈಫಲ್ಯ,ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎಪ್ರಿಲ್ 16 ರಂದು ಸಂಭವಿಸಿದ್ದ 7.8 ತೀವ್ರತೆಯ ಭೂಕಂಪದ ಪರಿಣಾಮವಾಗಿ ಇದುವರೆಗೆ 660 ಜನರು ಮೃತಪಟ್ಟಿದ್ದಾರೆ, ಸಾವಿರಾರು ಜನರು ಗಾಯಗೊಂಡಿದ್ದಾರೆ. ಮತ್ತು ಸಹಸ್ರಾರು ಮಂದಿ ಮನೆಮಠ ಕಳೆದುಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ.
Next Story





