ಯುವಕರೇ ನಿಮ್ಮ ಹಾರ್ಟ್ ಎಷ್ಟು ಸೇಫ್, ಗೊತ್ತಿದೆಯೇ?

ಮುಂಬೈ, ಮೇ 1: ಜಡ ಜೀವನಶೈಲಿ, ದೇಹದ ದಾರ್ಢ್ಯತೆ ಕನಿಷ್ಠಮಟ್ಟದಲ್ಲಿರುವುದು ಹಾಗೂ ಫಾಸ್ಟ್ ಫುಡ್ ಸಂಸ್ಕೃತಿಯ ಜೀವನಕ್ಕೆ ಒಗ್ಗಿಕೊಂಡಿರುವ ಯುವಕರಿಗೆ ಇದು ಬ್ಯಾಡ್‌ನ್ಯೂಸ್. ದೇಶದಲ್ಲಿ ಗಣನೀಯ ಪ್ರಮಾಣದ ಯುವಕರು ಹೃದ್ರೋಗಗಳಿಗೆ ತುತ್ತಾಗುತ್ತಿದ್ದಾರೆ.
2015ರಲ್ಲಿ ಅಂಜಿಯೊಪ್ಲಾಸ್ಟಿ ಪ್ರಕ್ರಿಯೆಗೆ ಒಳಗಾಗಿರುವ ಪ್ರತಿ 10 ಮಂದಿಯ ಪೈಕಿ ಒಬ್ಬರು 40ಕ್ಕಿಂತ ಕಡಿಮೆ ವಯಸ್ಸಿನವರು. ಈ ಅವಧಿಯಲ್ಲಿ ಒಟ್ಟು ದಾಖಲಾದ 3.35 ಆಂಜಿಯೊಪ್ಲಾಸ್ಟಿ ಪ್ರಕರಣಗಳನ್ನು ವಿಶ್ಲೇಷಿಸಿ, ನ್ಯಾಷನಲ್ ಇಂಟನ್‌ವೆನಕ್ಷನಲ್ ಕೌನ್ಸಿಲ್ ಈ ನಿರ್ಧಾರಕ್ಕೆ ಬಂದಿದೆ. ಹೃದಯ ರಕ್ತನಾಳಗಳಲ್ಲಿ ತಡೆಗಳು ಉಂಟಾದಾಗ ಹೃದಯಾಘಾತವಾಗುವುದನ್ನು ತಡೆಯಲು ವೈದ್ಯರು ರಕ್ತನಾಳಗಳ ಜಾಗದಲ್ಲಿ ಸ್ಟೆಂಟ್ ಅಳವಡಿಸುವುದನ್ನು ಆಂಜಿಯೊಪ್ಲಾಸ್ಟಿ ಎನ್ನುತ್ತೇವೆ. ದೇಶದ 614 ಹೃದ್ರೋಗ ಚಿಕಿತ್ಸಾ ಕೇಂದ್ರಗಳಿಂದ ಮಾಹಿತಿ ಪಡೆದು ಅದನ್ನು ವಿಶ್ಲೇಷಣೆಗೆ ಗುರಿಪಡಿಸಲಾಗಿದೆ.
ಜಡ ಜೀವನಶೈಲಿ, ತಂಬಾಕು ಬಳಕೆ ಹಾಗೂ ಫಾಸ್ಟ್‌ಫುಡ್ ಸಂಸ್ಕೃತಿ ಭಾರತದ ತರುಣರಲ್ಲಿ ಈ ರೋಗ ಹೆಚ್ಚಲು ಕಾರಣ. ಹಿಂದಿನ ಎರಡು ವರ್ಷಗಳಲ್ಲಿ ಈ ಪ್ರಮಾಣ ದುಪ್ಪಟ್ಟು ಆಗಿರುವುದನ್ನೂ ಅಧ್ಯಯನ ಬಿಂಬಿಸಿದೆ.





