ರಿಸರ್ವ್ ಬ್ಯಾಂಕ್‌ನ ರಘುರಾಂ ರಾಜನ್ ಹುಟ್ಟುವಾಗಲೇ ಡಾಕ್ಟರ್‌ಆಗಿದ್ದರಂತೆ!

ಭೋಪಾಲ, ಮೆ 1: ರಿಸರ್ವ್ ಬ್ಯಾಂಕ್ ಆಫ್ ಇಂಡಿಯದ ಗವರ್ನರ್ ರಘುರಾಂ ರಾಜನ್‌ರ ಜನನ ಸರ್ಟಿಫಿಕೇಟ್‌ಕುರಿತು ವಿವಾದ ಸೃಷ್ಟಿಯಾಗಿದೆ. ಸರ್ಟಿಫಿಕೇಟ್‌ನಲ್ಲಿ ಅವರ ಜೊತೆ ಡಾ. ಎಂದು ಬರೆಯಲಾಗಿದೆ. ರಾಜನ್ ಹುಟ್ಟುವಾಗಲೇ ಡಾಕ್ಟರ್ ಆಗಿ ಹುಟ್ಟಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆಯೆಂದು ವರದಿಯಾಗಿದೆ. ಕಾಂಗ್ರೆಸ್ ನಾಯಕ ಅಜಯ್ ಸಿಂಗ್ ಮಧ್ಯಪ್ರದೇಶ ಸರಕಾರವನ್ನು ಟೀಕಿಸುತ್ತಾ "ಕೊನೆಗೂ ಹೇಗೆ ರಘುರಾಂ ರಾಜನ್ ಹುಟ್ಟು ಡಾಕ್ಟರ್ ಆಗಿದ್ದಾರೆ" ಎಂದು ಕುಟುಕಿದ್ದಾರೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲದ ಸಂದರ್ಶನಕ್ಕೆ ಶುಕ್ರವಾರ ಬಂದಿದ್ದ ರಘುರಾಂ ರಾಜನ್‌ರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಬರ್ತ್ ಸರ್ಟಿಫಿಕೇಟ್ ಕೊಡುಗೆ ನೀಡಲು ಬಯಸಿದ್ದರು. ಆದರೆ ರಘುರಾಂ ರಾಜನ್‌ರ ಜನನ ಪ್ರಮಾಣ ಪತ್ರದಲ್ಲಿ ಇದ್ದ ಕೆಲವುತಪ್ಪುಗಳಿಂದಾಗಿ ಮುಖ್ಯಮಂತ್ರಿಗೆ ನೀಡಲು ಸಾಧ್ಯವಾಗಿಲ್ಲ.
ಭೋಪಾಲದ ನಗರ ನಿಗಮದ ಆಯುಕ್ತ ಛವಿ ಭಾರದ್ವಾಜ್ ಈ ಸರ್ಟಿಫಿಕೇಟು ಸಂಪೂರ್ಣ ನಕಲಿ ಎಂದು ಹೇಳಿದ್ದಾರೆ. "ನಗರ ನಿಗಮ ಯಾರಿಗೂ ಅರ್ಜಿ ಸಲ್ಲಿಸದೆ ಜನನ ಪ್ರಮಾಣ ಪತ್ರ ನೀಡುವುದಿಲ್ಲ" ಎಂದು ಹೇಳಿದ್ದಾರೆ. ವರದಿಯಾಗಿರುವ ಪ್ರಕಾರ ಈ ಪ್ರಮಾಣ ಪತ್ರವನ್ನು ನಗರ ನಿಗಮ ಎಪ್ರಿಲ್ 28ರಂದು ಜಾರಿ ಮಾಡಿದೆ. ರಾಜನ್ ಭೋಪಾಲದಲ್ಲಿ 1963 ಫೆಬ್ರವರಿ ಮೂರರಂದು ಜನಿಸಿದ್ದರು ಮತ್ತು ಬಾಲ್ಯದ ಕೆಲವು ವರ್ಷ ಅವರು ಅಲ್ಲಿ ವಾಸಿಸಿದ್ದರು ಎಂದು ವರದಿ ತಿಳಿಸಿದೆ.





