ಮಹಾರಾಷ್ಟ್ರ: ಪ್ರತ್ಯೇಕ ವಿದರ್ಭ ರಾಜ್ಯದ ಬೇಡಿಕೆ ಮುಂದಿಟ್ಟು ಬಾವುಟ ಹಾರಿಸಿದ ಬೆಂಬಲಿಗರು!

ನಾಗಪುರ, ಮೆ. 1: ಮಹಾರಾಷ್ಟ್ರದ ಮಾಜಿ ಅಡ್ವೋಕೇಟ್ ಜನರಲ್ ಶ್ರೀಹರಿ ಅಣೆಯವರ ನೇತೃತ್ವದಲ್ಲಿ ಪ್ರತ್ಯೇಕ ವಿದರ್ಭ ರಾಜ್ಯದ ಬೆಂಬಲಿಗರು ಇಂದು ಇಲ್ಲಿ ವಿದರ್ಭದ ಬಾವುಟ ಹಾರಿಸಿದ್ದಾರೆಂದು ವರದಿಯಾಗಿದೆ. ವಿದರ್ಭದ ಬೆಂಲಬಲಿಗರು ಮತ್ತು ಕಾರ್ಯಕರ್ತರು ನಗರ ಖಾಸಗಿ ರೆಸಾರ್ಟ್‌ನಲ್ಲಿ ಸೇರಿ, ಪ್ರತ್ಯೇಕ ರಾಜ್ಯದ ತಮ್ಮ ಆಂದೋಲನವನ್ನು ತೀವ್ರಗೊಳಿಸುವುದಾಗಿ ಹೇಳಿದರು.
ಮಹಾರಾಷ್ಟ್ರದಲ್ಲಿ 1960 ಜೂನ್‌ನಲ್ಲಿ ವಿದರ್ಭ, ಮಧ್ಯಪ್ರಾಂತ, ಸೆಂಟ್ರಲ್ ಪಾವಿನ್ಸ್ ಮತ್ತು ಬೆರಾರ್‌ನ ವಿಲೀನದ ವಿರೋಧ ಪ್ರತೀಕವಾಗಿ ವಿಶೇಷವಾಗಿ ತಯಾರಿಸಿದ ಬಹುಬಣ್ಣದ ಬಾವುಟವನ್ನು ಹಾರಿಸಿದ್ದು ವಿದರ್ಭರಾಜ್ಯವನ್ನು ಬೆಂಬಲಿಸಿ ಘೋಷಣೆಯನ್ನು ಕೂಗಿದ್ದಾರೆ. ವಿದರ್ಭದಲ್ಲಿ 24 ವಿಭಿನ್ನ ಸ್ಥಳಗಳಲ್ಲಿ ಈರೀತಿಯ ಬಾವುಟ ಹಾರಿಸಲಾಗಿದೆ. ಈ ಸಂದರ್ಭದಲ್ಲಿ ಮಾತಾಡಿದ ಅಣೆ ಪ್ರತ್ಯೇಕ ವಿದರ್ಭ ರಾಜ್ಯದ ಬೇಡಿಕೆಯನ್ನು ಮುಂದಿಟ್ಟು ಕಳೆದು ಮೂರುವರ್ಷಗಳಿಂದ ಬಾವುಟ ಹಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅವರ ಪ್ರತ್ಯೇಕ ಮರಾಠವಾಡ ಮತ್ತು ಪ್ರತ್ಯೇಕ ವಿದರ್ಭದ ಬೇಡಿಕೆಯಿಂದಾಗಿ ಮಹಾರಾಷ್ಟ್ರದ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಯಾಗಿತ್ತು.ಮತ್ತು ರಾಜ್ಯದ ಅಡ್ವೋಕೇಟ್ ಜನರಲ್ ಪದಕ್ಕೆ ಅವರು ರಾಜಿನಾಮೆ ನೀಡಬೇಕಾಗಿ ಬಂದಿತ್ತು. ಈ ವರ್ಷ ಪ್ರತ್ಯೇಕ ವಿದರ್ಭ ರಾಜ್ಯದ ಆಂದೋಲನ ಹೆಚ್ಚು ಬಿರುಸು ಪಡೆದುಕೊಂಡಿದೆ. ಶಿವಸೇನೆ ಕೂಡಾ ವಿರೋಧಿಸುತ್ತಿದೆ. "ನಾವು ವಿದರ್ಭರಾಜ್ಯ ನಿರ್ಮಾಣವನ್ನು ವಿರೋಧಿಸುವ ಯಾವುದೇ ರಾಜಕೀಯ ಪಕ್ಷಕ್ಕೆ ಹೆದರುವುದಿಲ್ಲ" ಎಂದು ಅಣೆ ಹೇಳಿರುವುದಾಗಿ ವರದಿಯಾಗಿದೆ.





