ಬಾಂಗ್ಲಾದೇಶ: ಭಯೋತ್ಪಾದಕರಿಂದ ಹಿಂದೂ ದರ್ಜಿ ಹತ್ಯೆ!

ಹೊಸದಿಲ್ಲಿ,ಮೆ1:ಬಾಂಗ್ಲಾದೇಶದಲ್ಲಿ ದರ್ಜಿಯ ಅಂಗಡಿಗೆ ಬಂದ ಮೂವರು ಬೈಕ್ ಸವಾರರು ಅಂಗಡಿ ಮಾಲಕನನ್ನು ಹೊರಗೆ ಎಳೆದು ನಿರ್ದಯವಾಗಿ ಹತ್ಯೆಗೈದ ಘಟನೆ ವರದಿಯಾಗಿದೆ.ಪೊಲೀಸರು ಇವರನ್ನು ಐಸಿಸ್‌ನೊಂದಿಗೆ ಸಂಬಂಧ ಇರುವ ಭಯೋತ್ಪಾದಕರು ಎಂದು ಹೇಳಿದ್ದಾರೆ.
ರಾಯ್ಟಿರ್ಸ್ ವರದಿ ಪ್ರಕಾರ ಹತ್ಯೆಯಾದ ಅಂಗಡಿ ಮಾಲಕ ಹಿಂದೂ ಆಗಿದ್ದು, ಐವತ್ತು ವರ್ಷದ ನಿಖಿಲ್ ಚಂದ್ರ ಝಾ ಎಂದು ಗುರುತಿಸಲಾಗಿದೆ. ಈ ಘಟನೆ ಬಾಂಗ್ಲಾದೇಶದ ರಾಜಧಾನಿಯಿಂದ ಎಂಬತ್ತು ಕಿ.ಮೀ.ದೂರದಲ್ಲಿರುವ ತಂಗೈಲ್ ನಗರದಲ್ಲಿ ನಡೆದಿದ್ದು, ದುಷ್ಕರ್ಮಿಗಳು ಹತ್ಯೆ ನಡೆಸಿದ ಬಳಿಕ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಅಬ್ದುಲ್ ಜಲೀಲ್ ಎಂಬವರು ತಿಳಿಸಿರುವುದಾಗಿ ವರದಿಯಾಗಿದೆ.
Next Story





