ವೀಡಿಯೊದಲ್ಲಿ ಇದ್ದದ್ದು ನಾನೇ,ಹಣ ಕೊಡುವೆ ಎಂದಿಲ್ಲ : ಹರೀಶ್ ರಾವತ್

ಝಾರ್ಕಂಡ್, ಮೆ 1: ಭಿನ್ನಮತೀಯ ಕಾಂಗ್ರೆಸ್ ಶಾಸಕರು ಹೊರಗೆ ಬಿಟ್ಟ ವೀಡಿಯೊದಲ್ಲಿ ತಾನಿದ್ದೆ.ಆದರೆ ಅವರಿಗೆ ಹಣದ ವಾಗ್ದಾನ ಮಾಡಿಲ್ಲ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದಾರೆ. ಒಂದು ವೇಳೆ ತಾನು ಲಂಚ ವಾಗ್ದಾನ ನೀಡಿದ್ದೆ ಎಂದು ಸಾಬೀತಾದರೆ ತನ್ನನ್ನು ಬಹಿರಂಗವಾಗಿ ಗಲ್ಲಿಗೇರಿಸಬಹುದು. ಪತ್ರಕರ್ತನೊಂದಿಗೆ ಭೇಟಿ ಮಾಡಿದ್ದೇ ಅದರಲ್ಲಿ ಏನು ತಪ್ಪಿದೆ ಎಂದು ರಾವತ್ ಪ್ರಶ್ನಿಸಿದರು.
ಈ ಹಿಂದೆ ಹರೀಶ್ ರಾವತ್ ಲಂಚದ ಭರವಸೆ ನೀಡಿದ್ದಾರೆ ಎಂದು ತೋರಿಸಿದ ಭಿನ್ನಮತೀಯರು ವೀಡಿಯೊ ತೋರಿಸಿದ್ದರು. ಇದು ನಕಲಿ ವೀಡಿಯೊ. ಬಿಜೆಪಿ ಭಿನ್ನಮತೀಯ ಶಾಸಕರಿಗೆ ಲಂಚ ಕೊಟ್ಟಿದೆ ಎಂದೂರಾವತ್ ಸ್ಪಷ್ಟಪಡಿಸಿದ್ದಾರೆ.
Next Story





