ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ
ಪ್ರಯೋಗಾಲಯ ಮತ್ತು ವಾಚನಾಲಯದ ವಿಸ್ತರಣೆ

ಬಂಟ್ವಾಳ, ಮೇ 1: ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯನ್ನು ರಾಜ್ಯ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ್ ರೈ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಕಾಲೇಜಿನ ಅಭಿವೃದ್ಧಿಯನ್ನು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಸಂಸ್ಥೆಯ ಮುಂದಿನ ವಿಸ್ತರಣೆಯು ದಅ್ವಾ ಕಾಲೇಜು ಮತ್ತು ಪ್ರಾರ್ಥನಾಲಯದ ಸೌಲಭ್ಯ ಎಂದು ಹೇಳಿದರು.
ಎಟಿಎಚ್ ಗ್ರೂಪ್ಸ್‌ನ ಅಧ್ಯಕ್ಷ ಬಿ.ಡಬ್ಲು. ಕುಂಞಿ ಅಹ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪಿ.ಸಿ ಹಾಶಿಕ್, ಎಸ್. ಅಬ್ಬಾಸ್, ಹಮೀದ್ ಮಾಸ್ಟರ್, ಶರೀಫ್ ಬಜ್ಪೆ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ಅಂತಿಮ ಪದವಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ನಶತ್ ನೀಝಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ನಾಯಕಿ ಸ್ವಾಗತಿಸಿದರು. ಹಫೀಫ ವಂದಿಸಿದರು.
Next Story





