Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕೆನಡಾ ಕಂಪೆನಿಯಿಂದ ಕ್ಯಾನ್ ನಲ್ಲಿ ಶುದ್ಧ...

ಕೆನಡಾ ಕಂಪೆನಿಯಿಂದ ಕ್ಯಾನ್ ನಲ್ಲಿ ಶುದ್ಧ ಗಾಳಿ : ಪ್ರತಿ ಉಸಿರಿಗೆ 12-50 ರೂಪಾಯಿ !

ಉಸಿರೇ, ಉಸಿರೇ...

ವಾರ್ತಾಭಾರತಿವಾರ್ತಾಭಾರತಿ2 May 2016 8:55 AM IST
share
ಕೆನಡಾ ಕಂಪೆನಿಯಿಂದ ಕ್ಯಾನ್ ನಲ್ಲಿ ಶುದ್ಧ ಗಾಳಿ : ಪ್ರತಿ ಉಸಿರಿಗೆ 12-50 ರೂಪಾಯಿ !

ಹೊಸದಿಲ್ಲಿ, ಮೇ 2: ಇದು ಗಾಳಿ ಮಾತು ಎಂದು ಸುಮ್ಮನಾಗಬೇಡಿ. ಉಸಿರಾಟದ ಶುದ್ಧ ಗಾಳಿಯ ಬೆಲೆ ನಿಮಗೆ ಗೊತ್ತೇ? ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ವಿಶ್ವದ ಅತ್ಯಂತ ವಾಯುಮಾಲಿನ್ಯದ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ದೆಹಲಿಯ ಜನರನ್ನು ಕೇಳಿ ನೋಡಿ. ಬಹುಶಃ ಅವರ ಪ್ರಕಾರ ಶುದ್ಧ ಗಾಳಿಗೆ ಬೆಲೆ ಕಟ್ಟಲಾಗದು. ಆದರೆ ಕೆನಡಾ ಕಂಪೆನಿಯೊಂದು ಒಂದು ಉಸಿರಾಟದ ಶುದ್ಧ ಗಾಳಿಯ ಮೌಲ್ 12.5 ರೂಪಾಯಿ ಎಂದು ಅಂದಾಜು ಮಾಡಿದೆ.

ಕೆನಡಾದ ಪಶ್ಚಿಮ ಪ್ರಾಂತ್ಯ ಅಲ್ಬೆರ್ಟಾದ ವೈಟಾಲಿಟಿ ಏರ್ ಎಂಬ ಆರಂಭಿಕ ಕಂಪನಿಯೊಂದು ಕ್ಯಾನ್‌ಗಳಲ್ಲಿ ತುಂಬಿಸಿದ ಶುದ್ಧ ಗಾಳಿಯನ್ನು ಭಾರತದ ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಚೀನಾ ಮಾರುಕಟ್ಟೆಗೆ 2015ರಲ್ಲಿ ಪ್ರವೇಶಿಸಿದಾಗ ಇದು ದೊಡ್ಡ ಸುದ್ದಿ ಮಾಡಿತ್ತು. ಬೀಜಿಂಗ್‌ನಲ್ಲಿ ಹೊಗೆ ಮಿಶ್ರಿತ ಮಂಜು ಅತ್ಯಧಿಕವಾಗಿದ್ದು, ಮಾಲಿನ್ಯ ಪ್ರಮಾಣ ದೆಹಲಿಗೆ ಸಮನಾಗಿದೆ.

"ಕಳೆದ ಬೇಸಿಗೆಯಲ್ಲಿ ಇದನ್ನು ವಿನೂತನ ಪ್ರಯತ್ನವಾಗಿ ಆರಂಭಿಸಲಾಯಿತು. ಕ್ಯಾಲ್ಗರಿಯಲ್ಲಿ ಕಾಳ್ಗಿಚ್ಚು ವ್ಯಾಪಿಸಿದಾಗ ಇಡೀ ದಟ್ಟಹೊಗೆಯಿಂದ ತುಂಬಿತ್ತು. ಜನ ನಮ್ಮ ಉತ್ಪನ್ನ ಬಳಸಲು ಆರಂಭಿಸಿದರು" ಎಂದು ಕಂಪನಿಯ ಸಂಸ್ಥಾಪಕ ಮೊಸೆಸ್ ಲ್ಯಾಮ್ ಹೇಳುತ್ತಾರೆ. ಖನಿಜಯುಕ್ತ ನೀರಿನ ಬಾಟಲಿಯ ಮಾದರಿಯಲ್ಲೇ ಇದು ಕೂಡಾ ಜನಪ್ರಿಯವಾಗುತ್ತದೆ ಎಂಬ ಆಶಯ ಅವರದ್ದು.

ಬೀಜಿಂಗ್ ಹಾಗೂ ಶಾಂಘೈ ಸೇರಿದಂತೆ ಚೀನಾದ ಏಳು ನಗರಗಳಲ್ಲಿ ಇದೀಗ ಈ ಸೌಲಭ್ಯ ಒದಗಿಸಲಾಗುತ್ತಿದೆ. ಈಗಾಗಲೇ ಚೀನಾಗೆ 12 ಸಾವಿರ ಕ್ಯಾನ್‌ಗಳನ್ನು ಕಳುಹಿಸಲಾಗಿದೆ. ಈ ಕ್ಯಾನ್‌ನಲ್ಲಿ ಕಂಪ್ರೆಸ್ಟ್ ಏರ್ ಇದ್ದು, ಇದನ್ನು ಮಾಸ್ಕ್ ಮೂಲಕ ಉಸಿರಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಸುಗಂಧಿತ ಪ್ರಕಾರಗಳಲ್ಲಿ ಲಭ್ಯವಿದ್ದು, ಬ್ನಫ್ ಹಾಗೂ ಲೇಕ್ ಲೂಸ್ ಎಂಬ ಉತ್ಪನ್ನಗಳಿವೆ. ಬ್ನಫ್ ಎನ್ನುವುದು ಅಲ್ಬೆರ್ಟಾದ ರಾಷ್ಟ್ರೀಯ ಉದ್ಯಾನವನವಾಗಿದ್ದು, ಕೆನಡಾದ ನೈಸರ್ಗಿಕ ಖಜಾನೆ ಎನಿಸಿಕೊಂಡಿದೆ. ಈ ಗಾಳಿಯನ್ನು 3 ಹಾಗೂ 8 ಲೀಟರ್‌ಗಳ ಕ್ಯಾನ್‌ಗಳಲ್ಲಿ ನೀಡಲಾಗುತ್ತದೆ. ಇದರ ದರ 1450 ರೂಪಾಯಿ ಹಾಗೂ 2800 ರೂಪಾಯಿ.

ಆದರೆ ಗಾಳಿಯನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎನ್ನುವುದ ವ್ಯಾಪಾರ ರಹಸ್ಯ. ಬೃಹರ್ ವ್ಯಾಕ್ಯೂಮ್ ಪ್ರಕ್ರಿಯೆ ಮೂಲಕ ಎಂದು ಕಂಪೆನಿ ಹೇಳುತ್ತದೆ. ಸುಮಾರು 15 ಸಾವಿರ ಲೀಟರ್ ಗಾಳಿಯನ್ನು ಎಳೆದುಕೊಳ್ಳಲು 40 ಗಂಟೆ ಬೇಕಾಗುತ್ತದೆ ಎಂದು ಲ್ಯಾಮ್ ವಿವರಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X