8 ಲಕ್ಷ ಜನರ ಆಹಾರವನ್ನು ಕೊಳೆಯಲು ಬಿಟ್ಟಿದೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ !

ಬೆಂಗಳೂರು, ಮೇ 2: ಭಾರತದ ಆಹಾರ ನಿಗಮ (ಎಫ್‌ಸಿಐ) ದೇಶಾದ್ಯಂತ ಇರುವ ತನ್ನ 1,889 ಗೋದಾಮುಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ 46,658 ಟನ್ ಆಹಾರವನ್ನು ಕೊಳೆಯಲು ಬಿಟ್ಟಿದೆ. ಜತೆಗೆ 143.74 ಟನ್ ಆಹಾರ ಧಾನ್ಯ ಕಳ್ಳತನವಾಗಿದೆ. ಇವೆರಡನ್ನೂ ಪಟ್ಟು ಸೇರಿದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಆದ್ಯತಾ ವಲಯದ ಕುಟುಂಬಗಳ ಪೈಕಿ ಎಂಟು ಲಕ್ಷ ಮಂದಿಗೆ ಇಡೀ ವರ್ಷದ ಆಹಾರ ಒದಗಿಸಬಹುದು.
ಅಂದರೆ ಇಡೀ ಬೆಂಗಳೂರಿನ ಶೇಕಡ 10 ರಷ್ಟು ಮಂದಿಗೆ, ಇಡೀ ಮುಂಬೈ ನಗರದ ಶೇಕಡ 6 ರಷ್ಟು ಮಂದಿಗೆ ಪ್ರತಿ ತಿಂಗಳೂ ಐದು ಕೆಜಿಯಂತೆ ವಿತರಿಸುವಷ್ಟು ಆಹಾರ ಧಾನ್ಯ ವ್ಯರ್ಥವಾಗುತ್ತಿದೆ. ಹಲವಾರು ವರ್ಷಗಳಿಂದ ಈ ಸಮಸ್ಯೆ ಇದ್ದು, ಕಳೆದ ಕೆಲ ದಶಕಗಳಲ್ಲಿ ಲಕ್ಷಾಂತರ ಟನ್ ಆಹಾರ ಹೀಗೆ ವ್ಯರ್ಥವಾಗಿ ಹೋಗಿದೆ. ಇದರಿಂದಾಗಿ ಆಹಾರ ನಿಗಮದ ಹೆಚ್ಚುವರಿ ದಾಸ್ತಾನು ಪ್ರಮಾಣ ಕೂಡಾ ಕಡಿಮೆಯಾಗುತ್ತಿದೆ.
ಇಂಥ ಸೋರುವಿಕೆ ಹೆಚ್ಚುವ ನಿರೀಕ್ಷೆ ಇದೆ ಎಂಬ ಆತಂಕವನ್ನು ಎಫ್‌ಸಿಐ ಅಧ್ಯಕ್ಷ ಯೋಗೀಂದ್ರ ತ್ರಿಪಾಠಿ ವ್ಯಕ್ತಪಡಿಸುತ್ತಾರೆ. "2015-16ರಲ್ಲಿ ನೈಸರ್ಗಿಕ ವಿಕೋಪದಿಂದಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಆಹಾರ ಧಾನ್ಯ ನಷ್ಟವಾಗಿದೆ. 1990ರ ದಶಕದಲ್ಲಿ ಹಾಗೂ 2013ರಲ್ಲೂ ಕೊರತೆ ಇತ್ತು. ಆದರೆ ನಾವು ಬಹುತೇಕ ಈ ಸಮಸ್ಯೆಯನ್ನು ಬಗೆಹರಿಸಿದ್ದೇವೆ" ಎಂದು ಸ್ಪಷ್ಟನೆ ನೀಡುತ್ತಾರೆ.
ಮತ್ತೊಬ್ಬ ಅಧಿಕಾರಿಯ ಪ್ರಕಾರ, 2015-16ರಲ್ಲಿ ವ್ಯರ್ಥವಾಗಿರುವ ಪ್ರಮಾಣ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಕಡಿಮೆ. ಇದನ್ನು ಕನಿಷ್ಠಗೊಳಿಸುವ ಬಗ್ಗೆ ಎಲ್ಲೆಡೆ ಕ್ರಮ ಕೈಗೊಳ್ಳಲಾಗಿದೆ. ಉಗ್ರಾಣಗಳಲ್ಲಿ 15.65 ದಶಲಕ್ಷ ಟನ್ ಆಹಾರ ಹೆಚ್ಚುವರಿ ದಾಸ್ತಾನು ಇದೆ"







