ಈ ದ್ವೀಪ ನಿಮ್ಮನ್ನೇ ದತ್ತು ತೆಗೆದುಕೊಳ್ಳುತ್ತದೆ!

ಪಾರ್ಲ್ಮಸ್ಟನ್ ಅಟಾಲ್ ದ್ವೀಪಕ್ಕೆ ಸಾಗಲು ಐದು ದಿನಗಳು ಹಿಡಿಯುತ್ತದೆ. ಆದರೆ ನೀಲಿ ಸಮುದ್ರದಲ್ಲಿ ಅಲೆಗಳ ಮಧ್ಯೆ ಪ್ರಯಾಣಿಸಿ ಕೊನೆಗೂ ಸಿಗುವ ದ್ವೀಪ ಮರೀಚಿಕೆಯನ್ನು ಪಡೆದಷ್ಟೇ ಖುಷಿ ಕೊಡುತ್ತದೆ. ದ್ವೀಪಕ್ಕೆ ಆಗಮಿಸುತ್ತಲೇ ವಿಎಚ್‌ಎಫ್ ರೇಡಿಯೋದಲ್ಲಿ ಸುದ್ದಿ ಮೊಳಗುತ್ತದೆ. ಕೆಲವೇ ನಿಮಿಷಗಳಲ್ಲಿ ಅಲ್ಯುಮಿನಿಯಂ ದೋಣಿ ಬಂದು ಸ್ವಾಗತಿಸುತ್ತದೆ.

ಪಾರ್ಲ್ಮಸ್ಟನ್ ದ್ವೀಪದಲ್ಲಿ 62 ನಿವಾಸಿಗಳಿದ್ದಾರೆ. ದ್ವೀಪಕ್ಕೆ ಹೋಗುವ ಮೊದಲೇ ಅತಿಯಾದ ಆಥಿತ್ಯ ಸಿಗಲಿದೆ ಎನ್ನುವ ಸುದ್ದಿ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿ ಸಿಕ್ಕಿರುತ್ತದೆ. ಯಾವುದೇ ವಿದೇಶಿ ವ್ಯಕ್ತಿಯನ್ನು ಇಲ್ಲಿ ದತ್ತು ತೆಗೆದುಕೊಳ್ಳದೆ ದ್ವೀಪದೊಳಗೆ ಬರಲು ಬಿಡುವುದಿಲ್ಲ. ಸ್ಥಳೀಯ ಕುಟುಂಬವೊಂದು ಮೊದಲಿಗೆ ವಿದೇಶಿಯರನ್ನು ದತ್ತು ತೆಗೆದುಕೊಳ್ಳುತ್ತದೆ. ಬಟ್ಟೆಗಳು, ಪೆನ್ನುಗಳು ಮತ್ತು ಇತರ ವಸ್ತುಗಳನ್ನು ದಾನ ಕೊಡುವ ಮೂಲಕ ಭೇಟಿ ನೀಡಿದವರು ಆತಿಥ್ಯಕ್ಕೆ ಮರಳಿ ಉತ್ತರಿಸಬೇಕು! ಹಾಗೆ ಪ್ರವಾಸಿಗರ ದತ್ತು ಸ್ವೀಕಾರ ನಡೆಯುತ್ತದೆ.

ಪಾರ್ಲ್ಮಸ್ಟನ್ ಎನ್ನುವುದು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ದ್ವೀಪ. ದಕ್ಷಿಣ ಪೆಸಿಫಿಕ್ ಸಾಗರದ ಬೋರಾ ಬೋರ ಮತ್ತು ನಿಯು ನಡುವೆ ಇದು ಇದೆ. ಪಾರ್ಲ್ಮಸ್ಟನ್ ಅಟಾಲ್ ಅನ್ನು 1969 ವರೆಗೂ ಇದೆ ಎಂದು ತಿಳಿಯುತ್ತಿದ್ದದ್ದು ಕ್ಯಾಪ್ಟನ್ ಕುಕ್ಸ್ 1774 ಚಾರ್ಟಿನಲ್ಲಿ ಮಾತ್ರ. ಕುಕ್ ಕಾಲಿಟ್ಟ ಒಂದೇ ಪೆಸಿಫಿಕ್ ದ್ವೀಪ ಪಾರ್ಲ್ಮಸ್ಟನ್. ಇಂದು ಪಾರ್ಲ್ಮಸ್ಟನ್ ಬ್ಯಾಂಕಿಲ್ಲದೆ, ಅಂಗಡಿಯಿಲ್ಲದ ಅಥವಾ ರಸ್ತೆಯಿಲ್ಲದ ಸಣ್ಣ ದ್ವೀಪ. ದ್ವೀಪದವರು 800 ಕಿಮೀ ದಕ್ಷಿಣಕ್ಕೆ ಪ್ರಯಾಣ ಬೆಳೆಸಿ ರಾರೋತೊಂಗ ತಲುಪಿ ಆಧುನಿಕ ಸವಲತ್ತುಗಳನ್ನು ಪಡೆಯುತ್ತಾರೆ. ಇಲ್ಲಿನ ಎಲ್ಲಾ 62 ಮಂದಿಯೂ ಪರಸ್ಪರರಿಗೆ ಸಂಬಂಧಿಕರು. ಪಾರ್ಲ್ಮಸ್ಟನ್ ನಿವಾಸಿಗಳಿಗೆ ಎಲ್ಲರಿಗೂ ಒಂದೇ ಸರ್ನೇಮ್ ಇದೆ. ಅವರ ಪೂರ್ವಜ ವಿಲಿಯಂ ಮಾರ್ಸಸ್ಟರ್ಸ್ ಎನ್ನುತ್ತಾರೆ. ತಲಾವಾರು ನೋಡಿದರೆ ದ್ವೀಪದಲ್ಲಿ ಅತ್ಯಧಿಕ ಫ್ರೀಜರುಗಳಿವೆ.

ಅಲ್ಲದೆ ಇವರು ರವಿವಾರ ಹೊರತುಪಡಿಸಿ ಮಧ್ಯಾಹ್ನದ ಹೊತ್ತು ವಾಲಿಬಾಲ್ ಆಡುತ್ತಾರೆ.

ಬ್ರಿಟಿಷ್ ಸಾಹಸಿ ವಿಲಿಯಂ ಮಾರ್ಸಸ್ಟರ್ಸ್ 1883ರಲ್ಲಿ ಪಾರ್ಲ್ಮಸ್ಟನ್ ದ್ವೀಪ ಕಂಡಿದ್ದ. ಇಲ್ಲಿ ಒಣ ತೆಂಗಿನಕಾಯಿ ಮಾರಾಟ ದಂಧೆಗೆ ಇಳಿದಿದ್ದ. ಆತ ಸಮೀಪದ ಪೆನ್ರಿನ್‌ನಿಂದ ಇಬ್ಬರು ಪಾಳಿನೆಸಿಯನ್ ಪತ್ನಿಯರನ್ನು ತಂದಿದ್ದರು. ನಂತರ ಅದೇ ದ್ವೀಪದಿಂದ ಮೂರನೇ ಪತ್ನಿ ಪಡೆದಿದ್ದ. ಹಾಗೆ 23 ಮಕ್ಕಳು ಮತ್ತು 134 ಮೊಮ್ಮಕ್ಕಳನ್ನು ಹೊಂದಿದ್ದಾನೆ. 1899ರಲ್ಲಿ ಸಾಯುವ ಮೊದಲು ಮಾರ್ಸಸ್ಟರ್ಸ್ 2 ಚದರಕಿಮೀ ಅಟಾಲನ್ನು ಪ್ರತೀ ಮೂರು ಪತ್ನಿಯರಲ್ಲಿ ಮತ್ತು ಅವರ ಮಕ್ಕಳ ನಡುವೆ ಹಂಚಿದ್ದ. ಈಗಲೂ ನಿವಾಸಿಗಳು ಅಂದಾಜು ಗಡಿರೇಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಮ್ಮದೇ ಕುಟುಂಬಗಳ ನಡುವೆ ಮದುವೆ ನಿಷೇಧಿಸಲಾಗಿದೆ.

ಇಲ್ಲಿನ ಸಾರಿಗೆ ವಾಹನ ಈಗಲೂ ದೋಣಿಗಳೇ ಆಗಿವೆ. ಕುಕ್ ದ್ವೀಪಗಳಲ್ಲಿ ದೊಡ್ಡದಾಗಿರುವ ರಂಗಿರೋದಿಂದ ಇಲ್ಲಿಗೆ ಸರಕು ಹಡಗು ಬರುತ್ತದೆ. ವರ್ಷಕ್ಕೆ ಮೂರು ಬಾರಿ ಮಾತ್ರ ಈ ದ್ವೀಪದಲ್ಲಿ ಸರಕು ಸರಬರಾಜು ಮಾಡುತ್ತದೆ.

ಹಾಗೆಯೇ ಪಾರ್ಲ್ಮಸ್ಟನ್ ರಫ್ತು ಮಾಡುವ ಫ್ರೋಜನ್ ಪಾರಟ್ ಮೀನುಗಳನ್ನು ಕೊಂಡೊಯ್ಯುತ್ತದೆ. ಪ್ರತೀ ಕುಟುಂಬದ ಬಳಿಯೂ ದೊಡ್ಡ ಫ್ರೀಜರುಗಳಿರುವ ಕಾರಣ ದಾಸ್ತಾನಿಗೆ ಅಡ್ಡಿಯಾಗುವುದಿಲ್ಲ.

ಕೆಲವೊಮ್ಮೆ ಪಾರ್ಲ್ಮಸ್ಟನ್ ನಿವಾಸಿಗಳು ಈ ಸರಕು ಹಡಗುಗಳಲ್ಲೇ ಸಾಗಿ ನೆರೆಯ ದ್ವೀಪಗಳಿಗೆ ಭೇಟಿಕೊಡುತ್ತಾರೆ. ಅಥವಾ ರಾರೊಟೊಂಗಾದಿಂದ ನ್ಯೂಜಿಲ್ಯಾಂಡಿಗೆ ವಿಮಾನ ಏರುತ್ತಾರೆ. ದ್ವೀಪ ಬಿಡಲು ಇರುವ ಮತ್ತೊಂದು ದಾರಿ ಎಂದರೆ ನಾವೆಗಳು. ದೊಡ್ಡ ದೋಣಿಗಳು ಇಲ್ಲಿಗೆ ಮೇ ತಿಂಗಳಿಂದ ಸೆಪ್ಟೆಂಬರ್ ನಡುವೆ ಕೆಲವೊಮ್ಮೆ ಪ್ರಯಾಣಿಸುತ್ತವೆ.

ಇಡೀ ದ್ವೀಪವನ್ನು ತಿರುಗಾಡಲು 20 ನಿಮಿಷ ಬೇಕು. ನಂತರ 10 ನಿಮಿಷ ಒಳಾಂಗಣ ದಾರಿಯಲ್ಲಿ ನಡೆಯಬಹುದು. ಇಲ್ಲಿ ಈಗ ಸೋಲಾರ್ ವಿದ್ಯುತ್ ಸ್ಥಾವರ ನಿರ್ಮಾಣವಾಗುತ್ತಿದೆ. ಡೀಸಲ್ ಜನರೇಟರುಗಳನ್ನು ನಂಬಲು ಸಾಧ್ಯವಿಲ್ಲ ಎನ್ನುವುದು ಜನರ ಅಭಿಪ್ರಾಯ. ಇಲ್ಲಿನ ಒಂದೇ ಒಂದು ಸ್ಮಶಾನದ ಪ್ರತೀ ಕಲ್ಲುಗಳಲ್ಲೂ ಮಾರ್ಸಸ್ಟರ್ಸ್ ಹೆಸರಿದೆ.

ಕೃಪೆ: www.bbc.com







