ಪ್ರಧಾನಿಯ ಜನನ ದಿನಾಂಕ ವಿವಾದ: ಮೋದಿ ಎರಡು ಬಾರಿ ಹುಟ್ಟಿದರೇ? ಪ್ರಶ್ನಿಸಿದ ಕಾಂಗ್ರೆಸ್

ಅಹ್ಮದಾಬಾದ್, ಮೆ 2: ಪ್ರಧಾನಿ ನರೇಂದ್ರ ಮೋದಿಯ ಶೈಕ್ಷಣಿಕ ಯೋಗ್ಯತೆ ಬಗ್ಗೆ ವಿವಾದ ಭುಗಿಲೆದ್ದಿದ್ದು ಅವರ ಹುಟ್ಟಿನ ಕುರಿತು ಸವಾಲು ಎದ್ದು ನಿಂತಿರುವುದಾಗಿ ವರದಿಯಾಗಿದೆ. ಕಾಂಗ್ರೆಸ್ ಪ್ರಧಾನಿಯ ಜನನ ದಿನಾಂಕ ಅಸಂಗತ ಎಂದು ಆರೋಪಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಶಕ್ತಿಸಿಂಗ್ ಗೋಹಿಲ್‌ರು ಈ ಕುರಿತು ವಿವಾದದ ಕಿಡಿ ಹಚ್ಚಿದ್ದಾರೆ. ಎಂಎನ್ ಕಾಲೇಜ್‌ನ ವಿದ್ಯಾರ್ಥಿ ದಾಖಲೆಗಳಲ್ಲಿ ಮೋದಿ ಆ ಕಾಲೇಜಿಗೆ ಪಿಯುಸಿಗೆ ಸೇರಿದ್ದು ಅಲ್ಲಿನ ದಾಖಲೆ ಪ್ರಕಾರ ಆಗಸ್ಟ್ 29,1949ರಲ್ಲಿ ಹುಟ್ಟಿದ್ದಾರೆ ಎಂದಿದೆ. ಆದರೆ ಮೋದಿ ತನ್ನ ಚುನಾವಣಾ ಅಫಿದಾವಿತ್‌ನಲ್ಲಿ ತನ್ನ ಜನನ ತಾರೀಕನ್ನು ಬರೆದಿಲ್ಲ ಎಂದು ವರದಿಗಳು ತಿಳಿಸಿವೆ.
ಸಾರ್ವಜನಿಕ ರೂಪದಲ್ಲಿ ಲಭ್ಯವಿರವ ಪ್ರಧಾನಿಯ ಜನನದಿನಾಂಕ ಸೆಪ್ಟಂಬರ್ 17, 1950 ಎಂದಾಗಿದ್ದು. ಶಾಲೆಯ ರಿಜಿಸ್ಟರ್‌ನಲ್ಲಿ ಪ್ರಧಾನಿಯ ಹೆಸರು ನರೇಂದ್ರ ಕುಮಾರ್ ದಾಮೋದರ್‌ದಾಸ್ ಮೋದಿ ಮತ್ತು ಜನನದಿನಾಂಕವನ್ನು ಬರೆಯಲಾಗಿದೆ. ನಾವು ಬೇರೆ ಬೇರೆ ಹುಟ್ಟಿದ ದಿನಾಂಕದ ಹಿಂದಿರುವ ಕಾರಣವನ್ನು ನಾವು ತಿಳಿಯಲು ಬಯಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಗೋಹಿಲ್ ಎಂದು ಹೇಳಿದ್ದಾರೆ. ಮೋದಿಯ ಪಾಸ್‌ಪೋರ್ಟ್, ಪಾನ್‌ಕಾರ್ಡ್ ಮತ್ತು ಇತರ ದಾಖಲೆಗಳಲ್ಲಿ ಯಾವ ಜನನ ದಿನಾಂಕವಿದೆ?ಬೇರೆ ಬೇರೆ ಜನನದಿನಾಂಕ ಬರೆದಿರುವುದರ ಹಿಂದಿರುವ ಕಾರಣವೇನೆಂದು ಗೋಹಿಲ್ ಪ್ರಶ್ನಿಸಿದ್ದಾರೆ.
ಈ ತನ್ಮಧ್ಯೆ ಕಾಂಗ್ರೆಸ್ ಮೋದಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂಬ ಕುರಿತು ಪ್ರಶ್ನೆ ಎತ್ತಿದೆ. ಮೊದಲು ಗುಜರಾತ್ ವಿಶ್ವವಿದ್ಯಾನಿಲಯ ಮಾಹಿತಿ ನೀಡಲು ನಿರಾಕರಿಸಿತ್ತು. ಆದರೆ ರವಿವಾರದಂದು ಮೋದಿ ಎಂಎ ಡಿಗ್ರಿ ಪಡೆದಿದ್ದಾರೆ ಎಂದು ತಿಳಿಸಿತ್ತು.







