ಗಾಯಾಳು ಸ್ಮಿತ್ ಪುಣೆ ತಂಡದಿಂದ ಔಟ್?

ಪುಣೆ, ಮೆ 2: ಆಸ್ಟ್ರೇಲಿಯದ ಕ್ರಿಕೆಟ್ ತಂಡದ ನಾಯಕ ಮತ್ತು ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಆಟಗಾರ ಸ್ಟೀವನ್ ಸ್ಮಿತ್ ಗಾಯಗೊಂಡಿದ್ದಾರೆ. ಆದ್ದರಿಂದ ಅವರು ಮುಂದಿನ ಐಪಿಎಲ್ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಅಂಕ ಪಟ್ಟಿಯಲ್ಲಿ ಆರನೆ ಸ್ಥಾನದಲ್ಲಿರುವ ಪುಣೆಗೆ ಫಾರ್ಮ್‌ನಲ್ಲಿರುವ ಸ್ಮಿತ್‌ರ ಅನುಪಸ್ಥಿತಿ ಭಾರೀ ಹಿನ್ನಡೆಯಾಗಲಿದೆ ಎಂದು ವರದಿಯಾಗಿದೆ.
ಈ ಋತುವಿನಲ್ಲಿ ಗಾಯಗೊಂಡು ಹೊರಹೋಗುತ್ತಿರುವ ನಾಲ್ಕನೆ ಪುಣೆ ಆಟಗಾರ ಸ್ಮಿತ್. ಆಟದ ನಡುವೆ ಬಲಗೈಗೆ ಗಾಯಗೊಂಡಿರುವ ಅವರು ಗಾಯಾಳುಗಳಾಗಿ ಈಗಾಗಲೇ ಹೊರ ಹೋಗಿರುವ ಆಲ್‌ರೌಂಡರ್ ಮಿಚೆಲ್ ಮಾರ್ಷ್, ಎಪ್‌ಡುಪ್ಲಿಸ್,ಕೆವಿನ್ ಪೀಟರ್ಸನ್ ಸಾಲಿಗೆ ಸೇರಿದ್ದಾರೆ.
Next Story





