ಆರ್.ಎಸ್.ಎಸ್ ನ ಹಿರಿಯ ನಾಯಕ ಬಲರಾಜ್ ಮಧೋಕ್ ನಿಧನ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸ್ಥಾಪಕ

ಹೊಸದಿಲ್ಲಿ, ಮೇ 2: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ ಮತ್ತು ಭಾರತೀಯ ಜನ ಸಂಘ (ಬಿಜೆಎಸ್)ದ ಮಾಜಿ ಅಧ್ಯಕ್ಷ ಬಲರಾಜ್ ಮಧೋಕ್ (96) ಸೋಮವಾರ ಬೆಳಗ್ಗೆ ಹೊಸದಿಲ್ಲಿಯ ನ್ಯೂ ರಾಜೇಂದ್ರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
1920 ಫೆಬ್ರವರಿ 25 ರಂದು ಜಮ್ಮು ಮತ್ತು ಕಾಶ್ಮೀರದ ಸಕ್ರುದ್ (ಪ್ರಸ್ತುತ ಪಾಕಿಸ್ತಾನದ ಗಿಲ್ಗಿಟ್ ಬಾಲಿಸ್ತಾನ ಪ್ರಾಂತ್ಯ)ನಲ್ಲಿ ಬಲರಾಜ್ ಅವರು ಜನಿಸಿದ್ದ ಬಲರಾಜ್ ಮಧೋಕ್ 1951ರಲ್ಲಿ ರಲ್ಲಿ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ್ನು ಸ್ಥಾಪಿಸಿದ್ದರು.
ಮಧೋಕ್ ಲೋಕಸಭಾ ಕ್ಷೇತ್ರದಿಂದ 1961 ರಲ್ಲಿ ಇವರು ಲೋಕಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. 1966-67ರ ಅವಧಿಯಲ್ಲಿ ಜನಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು
Next Story





