ಮೀನುಗಾರರ ಹತ್ಯೆ ಪ್ರಕರಣ: ಆರೋಪಿಯನ್ನು ಸ್ವದೇಶಕ್ಕೆ ಕಳುಹಿಸಲು ವಿಶ್ವಸಂಸ್ಥೆ ಆದೇಶ

ರೋಮ್, ಮೇ 2: ಇಬ್ಬರು ಭಾರತೀಯ ಮೀನುಗಾರರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಇಟಲಿಯ ನಾವಿಕ ಕಮಾಂಡೊ ಸಲ್ವಾದೊರ್ ಗಿರೊನ್, ವಿರುದ್ಧದ ಮೊಕದ್ದಮೆಯು ಮಧ್ಯಸ್ಥಿಕೆ ನಿರ್ಣಯ (ಅರ್ಬಿಟ್ರೇಶನ್) ಪ್ರಕ್ರಿಯೆಗೆ ಒಳಪಡು ವುದರಿಂದ ಆತ ತನ್ನ ತಾಯ್ನಿಡಿಗೆ ಹಿಂದಿರುಗಲು ಅರ್ಹರಾಗಿದ್ದಾರೆಂದು ಇಟಲಿಯ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ಹೇಗ್‌ನಲ್ಲಿನ ವಿಶ್ವಸಂಸ್ಥೆಯ ಖಾಯಂ ಮಧ್ಯಸ್ಥಿಕೆ ನಿರ್ಣಯ ನ್ಯಾಯಾಲಯ (ಪಿಸಿಎ)ದ ಆದೇಶವನ್ನು ಉಲ್ಲೇಖಿಸಿ ಅದು ಈ ಹೇಳಿಕೆಯನ್ನು ನೀಡಿದೆ.
Next Story





