ನಾಳೆ ಮಿಲಾಗ್ರಿಸ್ ಕಾಲೇಜಿನ ಹೊಸ ಕಟ್ಟಡ ಉದ್ಘಾಟನೆ
ಮಂಗಳೂರು, ಮೇ 2: ನಗರದ ಮಿಲಾಗ್ರಿಸ್ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ನ ಪ್ರಾರಂಭೋತ್ಸವ ಮೇ 4ರಂದು ನಡೆಯಲಿದೆ. ಸಂಜೆ 4:30ಕ್ಕೆ ಮಿಲಾಗ್ರಿಸ್ ಕ್ಯಾಂಪಸ್ನಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಬಿಷಪ್ ರೆ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ವಹಿಸುವರು. ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಹರಿನಾಥ್, ಮಂಗಳೂರು ವಿ.ವಿ. ಕುಲಪತಿ ಪ್ರೊ. ಕೆ. ಭೈರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಕಾಲೇಜಿನ ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ತಿಳಿಸಿದ್ದಾರೆ.
Next Story