ದಾವೂದ್ ಇಬ್ರಾಹಿಂ ನೆರವಿನಿಂದ ಗೋವಿಂದ ನನ್ನನ್ನು ಸೋಲಿಸಿದ !
ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್

ಲಕ್ನೌ, ಮೇ 3: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಬಿಲ್ಡರ್ ಹಿತೇನ್ ಠಾಕುರ್ ನೆರವು ಪಡೆದು ನಟ ಗೋವಿಂದ ತನ್ನನ್ನು 2004ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಲ್ಲಿ ಸೋಲಿಸಿದ್ದರೆಂದು ಪ್ರಸಕ್ತ ಉತ್ತರ ಪ್ರದೇಶ ರಾಜ್ಯಪಾಲರಾಗಿರುವ ರಾಮ್ ನಾಕ್ಆರೊಪಿಸಿದ್ದಾರೆ. ಆದರೆ ಈ ಆರೋಪವನ್ನು ನಟ ತಿರಸ್ಕರಿಸಿದ್ದಾರೆ.
ಮರಾಠಿಯಲ್ಲಿ ಬರೆದಿರುವ ತಮ್ಮ ಆತ್ಮಚರಿತ್ರೆ ಚೈರೇವೇಟಿ (ಮುಂದಕ್ಕೆ ಚಲಿಸುತ್ತಿರಿ) ಮುಂಬೈನಲ್ಲಿ ಇತ್ತೀಚೆಗೆ ಬಿಡುಗಡೆಯಾದಾಗ ಮಾತನಾಡಿದ ರಾಜ್ಯಪಾಲರು ಮೇಲಿನಂತೆ ಹೇಳಿದರು.
1999-2004ರ ನಡುವೆ ಮೂರು ಬಾರಿ ಸಂಸದರಾಗದ್ದ ರಾಮ್ ನಾಕ್ ಮುಂಬೈ ನಗರದ ಅಭಿವೃದ್ಧಿಗೆ ತಾನು ಸಾಕಷ್ಟು ಕೊಡುಗೆ ನೀಡಿರುವ ಹೊರತಾಗಿ ತನ್ನ 11,000 ಅಂತರದ ಪರಾಜಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲವೆಂದು ಬರೆದಿದ್ದಾರೆ. ‘ಕಹಿ ಸತ್ಯ’ಗಳ ಬಗ್ಗೆ ಬರೆಯುತ್ತಾ ದಾವೂದ್ ಹಾಗೂ ಠಾಕುರ್ ಜತೆ ಸ್ನೇಹದಿಂದಿದ್ದ ನಟ ಅವರನ್ನು ಮತದಾರರನ್ನು ಬೆದರಿಸಲು ಬಳಸಿಕೊಂಡಿದ್ದಾನೆಂದು ಹೇಳಿದ್ದಾರೆ.
ಆದರೆ ಗೋವಿಂದ ಆರೋಪವನ್ನು ನಿರಾಕರಿಸಿ ತನ್ನನ್ನು ಗೆಲ್ಲಿಸಿದ್ದು ಜನತೆ ಎಂದು ಹೇಳಿದ್ದಾರೆ. ‘‘ಆ ಸಮಯ ನನಗೆ ಯಾರದೇ ಸಹಾಯ ಬೇಕಿದ್ದಿರಲಿಲ್ಲ. ರಾಮ್ ನಾಕ್ ಈ ಆರೋಪ ಮಾಡಿದ್ದಾರೆಂದರೆ ನನ್ನ ಕ್ಷೇತ್ರದ ಜನತೆ ಭೂಗತ ಪಾತಕಿಗಳಿಗೆ ತಮ್ಮನ್ನು ಮಾರಿ ಬಿಟ್ಟರೆಂದು ಅರ್ಥವೇ? ಇಂತಹ ಮಾತುಗಳಿಂದ ಯಾರನ್ನೂ ಅವಮಾನಿಸಬೇಡಿ,’’ಎಂದು ಗೋವಿಂದ ಹೇಳಿದರು.
‘‘ನಾನು ಮತ್ತೆ ಚಿತ್ರರಂಗಕ್ಕೆ ಹೆಜ್ಜೆಯಿಟ್ಟಿರುವ ಇಂತಹ ಸಮಯದಲ್ಲಿನನ್ನ ಹೆಸರನ್ನು ಹಾಳು ಮಾಡದಂತೆ ಹಗೂ ನನ್ನ ಕೆಲಸಗಳಿಗೆ ತಡೆಯಾಗದಂತೆ ನಾನು ನಾಕ್ ಅವರನ್ನು ವಿನಂತಿಸುತ್ತೇನೆ,’’ಎಂದು ಗೋವಿಂದ ಹೇಳಿದರು.
‘‘ಚುನಾವಣಾ ಪ್ರಚಾರದ ಸಂದರ್ಭ ಟಿವಿ ಚಾನೆಲ್ಲೊಂದು ಕೂಡಗೋವಿಂದರ ಚಿತ್ರಗಳನ್ನೇ ತೋರಿಸಿಅವರಿಗೆ ಸಹಾಯ ಮಾಡಿತು,’’ಎಂದು ನಾಕ್ ಆರೋಪಿಸಿದ್ದಾರೆ.
ತಮ್ಮ ಆತ್ಮಚರಿತ್ರೆಯನ್ನು ಹಿಂದಿ, ಇಂಗ್ಲಿಷ್, ಉರ್ದು ಹಾಗೂ ಗುಜರಾತಿ ಭಾಷೆಗಳಿಗೆ ಭಾಷಾಂತರಗೊಳಿಸುವ ಇರಾದೆ ನಾಕ್ ಗಿದೆ







