ಕೊಡಗಿನಲ್ಲಿ ತಂಪೆರೆದ ವರುಣ

ಮಡಿಕೇರಿ, ಮೇ 3: ಕಳೆದ ಕೆಲವು ದಿನ ಗಳಿಂದ ರಣ ಬಿಸಿಲಿನಿಂದ ಬೇಸತ್ತಿದ್ದ ಕೊಡಗು ಜಿಲ್ಲೆಗೆ ಮಂಗಳವಾರ ಉತ್ತಮ ಮಳೆಯಾಗಿದೆ. ಭಾಗಮಂಡಲ ಹಾಗೂ ತಲಕಾವೇರಿ ಯಲ್ಲಿಯೂ ಕೂಡಾ ಧಾರಾಕಾರ ಮಳೆಯಾಗಿದೆ. ಮಡಿಕೇರಿ, ಸಿದ್ದಾಪುರ, ನಾಪೋಕ್ಲು, ಮಾದಾಪುರ, ಕುಶಾಲನಗರ, ಹಾರಂಗಿ, ಸೋಮವಾರಪೇಟೆ ಭಾಗದಲ್ಲಿ ಮಧ್ಯಾಹ್ನದ ವೇಳೆಗೆ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ಕೆಲವು ಭಾಗದಲ್ಲಿ ಆ
ಲಿಕಲ್ಲು ಸಹಿತ ಮಳೆಯಾಗಿದ್ದು, ಜಿಲ್ಲೆಯಲ್ಲಿ ಕೊಂಚ ತಂಪಿನ ವಾತಾವರಣ ಮೂಡಿದೆ. ಕಳೆದ ಅನೇಕ ದಿನಗಳಿಂದ ರಾಜ್ಯದ ಇತರ ಭಾಗಗಳಂತೆ ಕೊಡಗು ಜಿಲ್ಲೆಯಲ್ಲಿ ಕೂಡ ಬರದ ವಾತಾವರಣ ಮೂಡಿ ನದಿ, ಹೊಳೆ, ಬಾವಿಗಳು ಬತ್ತಲಾರಂಭಿಸಿದ್ದವು. ಮಳೆಯ ನಿರೀಕ್ಷೆಯಲ್ಲಿದ್ದ ಜನ ಪೂಜೆ ಪುನಸ್ಕಾರಗಳ ಮೂಲಕ ವರುಣನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದರಾದರೂ ಇಲ್ಲಿಯವರೆಗೆ ಮಳೆಯಾಗಿರಲಿಲ್ಲ. ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು, ಬಿಸಿಲಿನಿಂದ ಬೇಸತ್ತಿದ್ದ ಕೊಡಗಿನ ಜನರಿಗೆ ಕೊಂಚ ತೃಪ್ತಿಯಾಗಿದೆ.
Next Story





