ಕುಶಾಲನಗರ: ಧಾರಾಕಾರವಾಗಿ ಸುರಿದ ಮಳೆ
ಅಪಾರ ಪ್ರ ಮಾಣದ ಹಾನಿ

ಕುಶಾಲನಗರ, ಮೇ 3: ಮಳೆ ಬಾರದ ಹಿನ್ನೆಲೆಯಲ್ಲಿ ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದು. ಹಗಲು ಹೊಲ, ಗದ್ದೆಗಳಿಗೂ ತೆರಳಲು ಸಾಧ್ಯವಾಗದೆೆ ಕೈಹೊತ್ತು ಕುಳಿತಿದ್ದ ರೈತರಿಗೆ ಇಂದು ಮಧ್ಯಾಹ್ನ ಸುರಿದ ಧಾರಾಕಾರ ಆಲಿಕಲ್ಲು ಸಹಿತ ಮಳೆ ರೈತರ ಮನದಲ್ಲಿ ನೆಮ್ಮದಿ ಮೂಡಿಸಿತು. ಮಳೆ ಬಾರದೆ ಕಾಫಿ ಗಿಡಗಳಲ್ಲಿ ಹೂವು ಅರಳಲು ಸಾಧ್ಯವಾಗದೆ ಮೊಗ್ಗಿನಲ್ಲಿಯೇ ಬಾಡಿ ಹೋಗಿದ್ದವು. ಹೀಗಾಗಿ ಕಾಫಿ ಬೆಳೆಗಾರರು ಕಂಗಾಲಾಗಿದ್ದರು. ಇಂದು ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು ಇಲ್ಲಿಗೆ ಸಮೀಪದ ಮುಳಸೋಗೆ ಪಂಚಾಯತ್ ವ್ಯಾಪ್ತಿಯ ಯೋಗೇಗೌಡ ಬಡಾವಣೆಯಲ್ಲಿ ಮೂರು ವಿದ್ಯುತ್ ಕಂಬಗಳು ಮುರಿದು ರಸ್ತೆಗೆ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಇಲ್ಲಿನ ಕೃಷ್ಣಪ್ಪ ಎಂಬವರ ಮನೆಯ ಮುಂಭಾಗದ ತೆಂಗಿನ ಮರ ಮುರಿದ್ದು ಬಿದ್ದ ಪರಿಣಾಮ ಕಾಂಪೌಂಡ್ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.
ಇಂದು ಸುರಿದ ಮಳೆಯು ಕುಶಾಲನಗರ ಗುಡ್ಡೆಹೂಸೂರು, ಕೂಡಿಗೆ, ಹಾರಂಗಿ ವ್ಯಾಪ್ತಿಯಲ್ಲಿ ಸುರಿದು ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನತೆಯ ಮುಖದಲ್ಲಿ ಹರ್ಷಚಿತ್ತರಾಗುವಂತೆ ಮಾಡಿತ್ತು.





