ಕಾರಿನೊಳಗೆ ವ್ಯಕ್ತಿಯ ಮೃತದೇಹ ಪತ್ತೆ

ಮಂಗಳೂರು, ಮೇ 3: ಕುಂಟಿಕಾನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಮೃತಪಟ್ಟವರನ್ನು ಪಂಜಿಮೊಗರಿನ ನಿವಾಸಿ ಅಲಿಯಬ್ಬ ಎಂಬವರ ಪುತ್ರ ಖಲಂದರ್ (25) ಮೃತಪಟ್ಟ ವ್ಯಕ್ತಿ.
ಖಲಂದರ್ ಚಲಾಯಿಸುತ್ತಿದ್ದ ಕಾರು ಹೆದ್ದಾರಿ ಬದಿಯಲ್ಲಿ ನಿಂತಿದ್ದು, ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಕೆಲವು ಸಮಯದ ಬಳಿಕವೂ ಕಾರು ಕದಲದೇ ಇದ್ದುದರಿಂದ ಸಂಶಯಗೊಂಡ ಸ್ಥಳೀಯರು ಕಾರಿನೊಳಗೆ ನೋಡಿದಾಗ ಖಲಂದರ್ ಮೃತಪಟ್ಟಿದ್ದರು.
ಉರ್ವ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





