Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಊಟಿ ಎಂಬ ತಲ್ಲಣ..!

ಊಟಿ ಎಂಬ ತಲ್ಲಣ..!

ಸಿ.ಎಸ್.ದ್ವಾರಕಾನಾಥ್ಸಿ.ಎಸ್.ದ್ವಾರಕಾನಾಥ್3 May 2016 10:56 PM IST
share
ಊಟಿ ಎಂಬ ತಲ್ಲಣ..!

ಒಂದೆರಡು ತಿಂಗಳ ಹಿಂದೆ ಊಟಿ ಸಿನೆಮಾ ಹಾಡುಗಳ ಸಿಡಿ ಬಿಡುಗಡೆ ಮಾಡಲು ಹೋಗಿದ್ದೆ. ಸಿನೆಮಾ ಬಗ್ಗೆ ಓನಾಮಗಳನ್ನೂ ಅರಿಯದ ನಾನು ಮನಸ್ಸಿಗೆ ಬಂದದ್ದನ್ನು ಮಾತಾಡಿ ಬಂದಿದ್ದೆ..

ಬಹುಜನ ಚಳವಳಿಯಲ್ಲಿ ಸಕ್ರಿಯರಾಗಿರುವ ಗೆಳೆಯರಾದ ವಕೀಲ ಮೋಹನ್ ಕುಮಾರ್ ಹಾಗೂ ಸಾಹಿತಿ ಕೃಷ್ಣಮೂರ್ತಿ ಚಮರಂ ತಮ್ಮ ಇತರೆ ಗೆಳೆಯರೊಂದಿಗೆ ಊಟಿ ಸಿನೆಮಾ ಮಾಡುವ ಈ ಸಾಹಸಕ್ಕಿಳಿದಿದ್ದರು! ಸಿನೆಮಾ ಮಾಡುವ ‘ಜಾತಿ’ಗೇ ಸೇರದ ಇವರಿಗೆ ಈ ಧೈರ್ಯ ಹೇಗೆ ಬಂತೋ ನನಗಿನ್ನೂ ಅರ್ಥವಾಗಿಲ್ಲ!?
ಯಾವುದೋ ಕಾರಣಕ್ಕೆ ಮಾನಸಿಕವಾಗಿ ಜರ್ಜರಿತನಾಗಿದ್ದ ನನಗೆ ಒಂದುdiversionಗಾಗಿ ‘ಊಟಿ’ಗೆ ಕರೆದೊಯ್ದರು.. ನಿಜ ಹೇಳಬೇಕೆಂದರೆ ಮನಸಿಲ್ಲದ ಮನಸಿನಿಂದ ಹೋಗಿದ್ದೆ..

‘ಊಟಿ’ ನನ್ನನ್ನು ನಿಧಾನಕ್ಕೆ ಸೆಳೆಯತೊಡಗಿತು. ಸುಮಾರು ವರ್ಷಗಳ ಹಿಂದೆ ಬಾಲು ಮಹೇಂದ್ರುರವರ ‘ಮೂನ್ರಂ ಪಿರೈ’ ಚಿತ್ರದಲ್ಲಿ ಊಟಿಯನ್ನು ಅತೀ ಮನಮೋಹಕವಾಗಿ ತೋರಿಸಿದ್ದನ್ನು ಬಿಟ್ಟರೆ ಊಟಿಯ ಸೌಂದರ್ಯವನ್ನು ಇಷ್ಟೊಂದು ಸುಂದರವಾಗಿ ತೋರಿಸಿದ ಚಿತ್ರ ‘ಊಟಿ’ಯೇ ಎನಿಸುತ್ತದೆ.
ಖುಷ್ವಂತ್ ಸಿಂಗ್ ರವರ  train to Pakistanನಂತಹ ಪುಸ್ತಕಗಳನ್ನು ಆಧರಿಸಿ ಇಂಡಿಯ-ಪಾಕಿಸ್ತಾನ್ ಸಂಘರ್ಷದ ನಡುವೆ ಬೆಂಕಿಯಲ್ಲಿ ಅರಳಿದ ಪ್ರೇಮ ಕತೆಗಳು, ಮಣಿರತ್ನಂ ಮಾಡಿದ ಬಾಂಬೆ. ಬಾಲಚಂದರ್‌ರವರ ಮರೋಚರಿತ್ರ ರಂತವುಗಳು ಪ್ರಾದೇಶಿಕ ಗಡಿಗಳೊಂದಿಗೆ ಜಾತಿ,ಮತ ಗಳ ಸಂಘರ್ಷಗಳನ್ನಿಟ್ಟು ಕೊಂಡು ಮಾಡಿದ ಯಶಸ್ವಿ ಪ್ರಯತ್ನಗಳು. ಇಲ್ಲಿ ಕೋಟ್ಯನುಗಟ್ಟಳೆ ಹಣ ಸುರಿಯ ಲಾಗಿದೆ.. ಹೆಸರಾಂತ ನಿರ್ದೇಶಕರಿದ್ದಾರೆ, ದೊಡ್ಡ ಸ್ಟಾರ್ ಕ್ಯಾಸ್ಟ್‌ಗಳ ವಿಜೃಂಭಣೆಯ ಮೆರವಣಿಗೆಯೇ ಇದೆ!!

‘ಊಟಿ’ ಮಾಡಿದವರಿಗೆ ಈ ಯಾವ ಹಿನ್ನೆಲೆಯೂ ಇಲ್ಲ..! ಹಣವಿಲ್ಲ, ಹೆಸರಿಲ್ಲ, ಹೆಸರಾಂತ ನಟನಟಿಯರಿಲ್ಲ. ಅವರಿಗಿರುವುದು ಸಿನೆಮಾ ಮಾಡುವ passion 
ಒಂದೇ.. ಅದಕ್ಕೆ ಬೇಕಾದ ಮೊಂಡುತನ, ಧೈರ್ಯ, ಬದ್ಧತೆ ಮತ್ತು talent ಇದೆ.. ಇದನ್ನು ಇಲ್ಲಿನ ಪ್ರತಿದೃಶ್ಯದಲ್ಲೂ ಸಾಬೀತುಪಡಿಸಿದ್ದಾರೆ..even an ordinary people also can make good cinema  ಎಂಬುದನ್ನು ತಣ್ಣಗೆ ನಿರೂಪಿ ಸಿದ್ದಾರೆ. ಇವರು ಈ ಸಿನೆಮಾದಲ್ಲಿ ಬೆಸೆಯ ಹೊರಟಿರುವುದು ಭಾಷೆ, ಪ್ರೇಮ ಮತ್ತು ವಿಶೇಷವಾಗಿ ಜೀವಜಲ ನೀರನ್ನು. ಬಹುಶಃ ಈ ವಿಷಯಗಳನ್ನಿಟ್ಟುಕೊಂಡು ಸಿನೆಮಾ ಮಾಡುವುದು ಒಂದು ರೀತಿಯ ಚಾಲೆಂಜ್.. ಕೈಯಲ್ಲಿ ಕಾಸಿಲ್ಲದ ಹುಡುಗರು ಇದನ್ನು ತಮ್ಮ ಮಿತಿಗಳಲ್ಲಿ ನಿಭಾಯಿಸಿರುವುದು ಅದ್ಭುತ!! ನಮ್ಮಂತಹವರಿಗೆ ತಲುಪಿಸಿರುವುದಂತೂ ಇನ್ನೂ ಅದ್ಬುತ..

ಮೊದಲಧರ್ದಲ್ಲಿ ಊಟಿಯ ಸುಂದರ ಪರಿಸರದಲ್ಲಿ ಎರಡು ಪುಟಾಣಿ ಹೃದಯ ಗಳಲ್ಲಿ ಅರಳುವ ಪ್ರೇಮ.. ಇದು ಒಂದಷ್ಟು ಎಳೆಯುತ್ತದೆ ಆದರೆ ಎಲ್ಲೂ ಬೋರಾ ಗುವುದಿಲ್ಲ.. ಸಂಭಾಷಣೆ ಮತ್ತು ಹಾಡುಗಳು ಇದನ್ನು ನಿಭಾಯಿಸುತ್ತವೆ. ಇಂಟ ರ್ವಲ್ ನಂತರ ಕತೆ ಅನೇಕ ತಿರುವುಗಳನ್ನು ಪಡೆದು ಕುತೂಹಲ ಕೆರಳಿಸುತ್ತದೆ.. ಮಿಕ್ಕ ಪ್ಲಸ್ ಮತ್ತು ಮೈನಸ್ ಪಾಯಿಂಟುಗಳನ್ನು ಸಿನೆಮಾ ‘ಪಂಡಿತರು’ ಹೇಳಬೇಕು... ನಮ್ಮಂತಹ ಹುಲುಮಾನವರಿಗೆ ತೋಚಲ್ಲ. ನಮಗಂತೂ ಒಟ್ಟಾರೆಯಾಗಿ ಒಂದು ಒಳ್ಳೆಯ ಸಿನೆಮಾ ನೋಡಿದ ಅನುಭವ, ಆಹ್ಲಾದಕರ ಮನಸ್ಸಿನಿಂದ ಹೊರಬರುತ್ತೇವೆ.

ಎಲ್ಲರೂ ಸಿನೆಮಾ ನೋಡಿ, ಪ್ರೋತ್ಸಾಹಿಸಿ.. ನಮ್ಮಲ್ಲು ಮಣಿರತ್ನಂ, ಬಾಲಚಂದರ್ ಗಳಿರಲಿ.. ಅಕಿರ ಕುರಸೋವ, ಸ್ಪಿಲ್ ಬರ್ಗ್ ಗಳನ್ನು ಕೂಡ ನಾವೇ ಗುರುತಿ ಸೋಣ.. ಯಾರೂ ಆಕಾಶದಿಂದ ಇಳಿದುಬಂದವರಲ್ಲವಲ್ಲಾ..?

share
ಸಿ.ಎಸ್.ದ್ವಾರಕಾನಾಥ್
ಸಿ.ಎಸ್.ದ್ವಾರಕಾನಾಥ್
Next Story
X