ಕುಡಿವ ನೀರಿನ ಸಮಸ್ಯೆ ಬಗೆಹರಿಸಿ
ಮಾನ್ಯರೆ
ಕುಡಿಯುವ ನೀರಿನ ಸಮಸ್ಯೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಿಪರೀತವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಂತೂ ನೀರಿನ ಬರ. ಕೊಡ ಹಿಡಿದು ಊರೂರು ತಿರುಗುವ ನೀರಿಗಾಗಿ ಗುಳೇ ಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವ ವರದಿಗಳು ಬರುತ್ತಿವೆ. ಬೀದರ್, ಕಲಬುರಗಿಯ ಹಲವು ಹಳ್ಳಿಗಳಲ್ಲಿ ನೀರಿಗಾಗಿ ಮಹಾರಾಷ್ಟ್ರದ ಗಡಿ ಹಳ್ಳಿಗಳತ್ತ ಹೋಗಿಬರುತ್ತಿದ್ದಾರೆ. ರಾಜ್ಯದಲ್ಲಿ ಸರಕಾರ ವಿಧಿಸಿರುವ ಲೋಡ್ ಶೆಡ್ಡಿಂಗ್ ಸಹ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ನಗರ, ಪಟ್ಟಣಗಳಲ್ಲಿ ಪ್ರದೇಶಗಳಲ್ಲಿಯೂ ವಾರಕ್ಕೊಮ್ಮೆ ನೀರು ಸಿಗುತ್ತಿದೆ. ಅಂತರ್ಜಲದ ಕುಸಿತದಿಂದ ಸಾವಿರಾರು ಕೊಳವೆಬಾವಿಗಳು ಬತ್ತಿರುವುದು, ಸಮಸ್ಯೆ ಹೆಚ್ಚಿಸಿದೆ. ಹೀಗಾಗಿ ನೀರು ಮಾರಾಟ, ವ್ಯಾಪಾರದ ಸ್ವರೂಪವನ್ನು ಪಡೆದಿದೆ. ನೀರಿನ ಬರ ದಕ್ಷಿಣ ಕರ್ನಾಟಕ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಮುಂತಾದೆಡೆಗಳಲ್ಲಿಯೂ ಬಿಸಿ ಮುಟ್ಟಿಸಿ, ದಾಹ ಹೆಚ್ಚಿಸಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಕುರಿಯುವ ನೀರಿಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಿ.





